Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚಳಿ, ಚಳಿಗೆ ಬಿಸಿ ಬಿಸಿಯಾದ ಗೊಂಗುರ ಪಲಾವ್ ಮಾಡಿಕೊಂಡು ತಿನ್ನಿ !


ಈಗ ಮುಂಗಾರು ಮಳೆಗಾಲ ಆರಂಭವಾಗಿದೆ. ಸುಡುವ ಬಿಸಿಲಿನ ವಾತಾವರಣ ಹೋಗಿ ಈಗ ಚಳಿ, ಚಳಿಯ ವಾತಾವರಣ ಬಂದಿದೆ. ಚಳಿಯಾದ ಮೇಲೆ ಬಿಸಿ, ಬಿಸಿ ರುಚಿಯಾದ ತಿಂಡಿ, ತಿನಿಸು, ಊಟವನ್ನು ತಿನ್ನಬೇಕೆನಿಸುತ್ತಿದೆ. ಇಂತಹ ವೇಳೆಯಲ್ಲಿ ಬಿಸಿ ಬಿಸಿ ಪಲಾವ್ ತಟ್ಟೆಗೆ ಬಿದ್ದರೆ ಮನಸ್ಸಿಗೆ ಸಮಾಧಾನ. ಅದರಲ್ಲೂ ಆಂಧ್ರದ ಗೊಂಗುರ ಸೊಪ್ಪಿನ ಹುಳಿ ಖಾರ ರುಚಿ ಸೇರಿದರೆ ಬೆಳಗಿನ ತಿಂಡಿಗೆ ಬೇರೆ ಏನೂ ಬೇಕಾಗಿಲ್ಲ. ಗೊಂಗುರ ಪಲಾವ್ ಎಂದರೆ ಬಾಸುಮತಿ ಅಕ್ಕಿ, ಹಸಿರು ಮೆಣಸು ಮತ್ತು ಹುಳಿ ಸೊಪ್ಪಿನ ಪರಿಮಳದ ಅದ್ಭುತ ಕಾಂಬಿನೇಷನ್. ಹೋಟೆಲ್ ಶೈಲಿಯ ರುಚಿಯನ್ನು (ಊoಣeಟ Sಣಥಿಟe ಖಿಚಿsಣe) ಮನೆಯಲ್ಲೇ 30 ನಿಮಿಷದಲ್ಲಿ ಮಾಡಬಹುದು. ಒಮ್ಮೆ ತಿಂದರೆ ಮತ್ತೆ ಮತ್ತೆ ಮಾಡಬೇಕೆನಿಸುವ ಈ ರೆಸಿಪಿ ಹೇಗೆ ಮಾಡುವುದು ನೋಡೋಣ.
ಗೊಂಗುರವನ್ನು ಕನ್ನಡದಲ್ಲಿ ಪುಂಡಿ ಸೊಪುö್ಪ ಅಥವಾ ಹುಳಿ ಸೊಪುö್ಪ ಎನ್ನುತ್ತಾರೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಇದನ್ನು ಪ್ರತಿದಿನದ ಅಡುಗೆಯಲ್ಲಿ ಬಳಸುತ್ತಾರೆ. ಸೊಪ್ಪಿನಲ್ಲಿ ವಿಟಮಿನ್ ಸಿ, ಕಬ್ಬಿಣ ಮತ್ತು ಆಂಟಿ ಆಕ್ಸಿಡೆಂಟ್ ಹೆಚ್ಚಿದೆ. ಹುಳಿ ರುಚಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಕೆಂಪು ಗೊಂಗುರ ಮತ್ತು ಹಸಿರು ಗೊಂಗುರ ಎರಡು ಸಿಗುತ್ತದೆ. ಪಲಾವ್‌ಗೆ ಕೆಂಪು ಗೊಂಗುರ ಹೆಚ್ಚು ರುಚಿ ಕೊಡುತ್ತದೆ.
ಗೊಂಗುರ ಪಲಾವ್ ಬೇಕಾಗುವ ಸಾಮಗ್ರಿಗಳು:
ಎರಡು ಜನರಿಗೆ ಮಾಡಲು ಬಾಸುಮತಿ ಅಕ್ಕಿ ಒಂದೂವರೆ ಕಪ್, ಸ್ವಚ್ಛಗೊಳಿಸಿದ ಗೊಂಗುರ ಸೊಪುö್ಪ (ಪುಂಡಿ ಸೊಪುö್ಪ) ಎರಡು ಕಟ್ಟು, ಈರುಳ್ಳಿ ಎರಡು ಉದ್ದಕ್ಕೆ ಹೆಚ್ಚಿದ್ದು, ಟೊಮ್ಯಾಟೊ ಒಂದು, ಹಸಿರು ಮೆಣಸು ನಾಲ್ಕು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ, ಅರಿಶಿನ ಕಾಲು ಚಮಚ, ಧನಿಯಾ ಪುಡಿ ಒಂದು ಚಮಚ, ಗರಂ ಮಸಾಲಾ ಅರ್ಧ ಚಮಚ, ಜೀರಿಗೆ ಅರ್ಧ ಚಮಚ, ಚಕ್ಕೆ ಎರಡು, ಲವಂಗ ನಾಲ್ಕು, ಏಲಕ್ಕಿ ಎರಡು, ಬಿರಿಯಾನಿ ಎಲೆ ಒಂದು, ಕಡಲೆಕಾಯಿ ಎರಡು ಚಮಚ, ಎಣ್ಣೆ ಮೂರು ಚಮಚ, ತುಪ್ಪ ಒಂದು ಚಮಚ, ಉಪುö್ಪ ರುಚಿಗೆ, ಕೊತ್ತಂಬರಿ ಸೊಪುö್ಪ ಅಲಂಕಾರಕ್ಕೆ. ಬೇಕಿದ್ದರೆ ಕ್ಯಾರೆಟ್, ಬೀನ್ಸ್, ಬಟಾಣಿ ಸ್ವಲ್ಪ ಸೇರಿಸಬಹುದು.
ತಯಾರಿಸುವ ವಿಧಾನ:
ಮೊದಲು ಅಕ್ಕಿಯನ್ನು 20 ನಿಮಿಷ ನೆನೆಸಿ ನೀರು ಬಸಿದು ಇಡಿ. ಗೊಂಗುರ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಇಲ್ಲದಂತೆ ಒಣಗಿಸಿ ಸಣ್ಣದಾಗಿ ಹೆಚ್ಚಿ. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಸೊಪ್ಪನ್ನು ಮಧ್ಯಮ ಉರಿಯಲ್ಲಿ ಐದು ನಿಮಿಷ ಹುರಿದು ಹುಳಿ ನೀರು ಬಿಟ್ಟು ಮೆತ್ತಗಾದ ನಂತರ ತೆಗೆದು ತಣ್ಣಗಾಗಿಸಿ. ಅದೇ ಬಾಣಲೆಯಲ್ಲಿ ಉಳಿದ ಎಣ್ಣೆ ಮತ್ತು ತುಪ್ಪ ಹಾಕಿ ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ ಹಾಕಿ ಸಿಡಿಸಿ. ನಂತರ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಟೊಮ್ಯಾಟೊ, ಅರಿಶಿನ, ಧನಿಯಾ ಪುಡಿ, ಉಪುö್ಪ ಹಾಕಿ ಎಣ್ಣೆ ಬಿಡುವವರೆಗೆ ಬೇಯಿಸಿ.
ಈಗ ಹುರಿದ ಗೊಂಗುರ ಸೊಪ್ಪನ್ನು ಹಾಕಿ ಎರಡು ನಿಮಿಷ ಮಿಶ್ರಣ ಮಾಡಿ. ನೆನೆಸಿದ ಅಕ್ಕಿಯನ್ನು ಹಾಕಿ ನಿಧಾನವಾಗಿ ಕಲಸಿ. ಅಕ್ಕಿಗೆ ಎರಡೂವರೆ ಪಟ್ಟು ಬಿಸಿ ನೀರು ಅಂದರೆ ಸುಮಾರು ನಾಲ್ಕು ಕಪ್ ನೀರು ಹಾಕಿ. ಗರಂ ಮಸಾಲಾ ಮತ್ತು ಕಡಲೆಕಾಯಿ ಸೇರಿಸಿ. ಕುಕ್ಕರ್‌ನಲ್ಲಿ ಒಂದು ವಿಷಲ್ ಅಥವಾ ಮುಚ್ಚಿದ ಪಾತ್ರೆಯಲ್ಲಿ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪುö್ಪ ಉದುರಿಸಿ ಐದು ನಿಮಿಷ ಮುಚ್ಚಿಡಿ.
ರುಚಿ ಹೆಚ್ಚಿಸಲು ಟಿಪ್ಸ್:
ಗೊಂಗುರ ತುಂಬಾ ಹುಳಿ ಇದ್ದರೆ ಒಂದು ಸಣ್ಣ ಬೆಲ್ಲದ ತುಂಡು ಸೇರಿಸಿ ಸಮತೋಲನ ಮಾಡಿ. ಅಕ್ಕಿ ಉದುರುದುರಾಗಿ ಬರಲು ನೀರು ಬಿಸಿ ಮಾಡಿ ಹಾಕಿ. ತುಪ್ಪದ ಬದಲು ಎಳ್ಳೆಣ್ಣೆ ಬಳಸಿದರೆ ಆಂಧ್ರದ ಮೂಲ ರುಚಿ ಸಿಗುತ್ತದೆ. ಹೆಚ್ಚು ಎಣ್ಣೆ ಹಾಕಬೇಡಿ, ಸೊಪ್ಪಿನ ಹುಳಿ ಎಣ್ಣೆಯಲ್ಲಿ ಕರಗಿ ರುಚಿ ಹೆಚ್ಚಿಸುತ್ತದೆ.
ಯಾವುದರ ಜೊತೆ ತಿಂದರೆ ಚೆಂದ
ಗೊAಗುರ ಪಲಾವ್‌ಗೆ ಮೊಸರು ಬಜ್ಜಿ, ಈರುಳ್ಳಿ ರಾಯಿತ ಅಥವಾ ಸರಳ ಮೊಸರು ಉತ್ತಮ ಜೋಡಿ. ಪಕ್ಕದಲ್ಲಿ ಹಪ್ಪಳ ಮತ್ತು ಉಪ್ಪಿನಕಾಯಿ ಇದ್ದರೆ ಊಟ ಸಂಪೂರ್ಣ. ಮಧ್ಯಾಹ್ನದ ಲಂಚ್ ಬಾಕ್ಸ್ಗೆ ಸಹ ಇದು ಒಣಗದೆ ರುಚಿಯಾಗಿರುತ್ತದೆ