
ಮೈಸೂರು; ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಉಳುವವನಿಗೆ ಭೂಮಿಯನ್ನು ಕೊಡುವ ಮೂಲಕ ಶೋಷಿತರು, ಬಡವರ ಪಾಲಿಗೆ ಅಜರಾಮರವಾಗಿ ಉಳಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ಶನಿವಾರ ನಗರದ ದಿ ಇನ್ಸಟ್ಯೂಟ್ ಆಪ್ ಇಂಜಿನಿಯರಿAಗ್ ಸಭಾಂಗಣದಲ್ಲಿ ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಹಾಗೂ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಡಿ.ದೇವರಾಜ ಅರಸು ಅವರ 44ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಮಾಡಿ ವಾತನಾಡಿದ ಅವರು, ಡಿ.ದೇವರಾಜ ಅರಸು ಅವರು ಉಳುವವನಿಗೆ ಭೂಮಿಯನ್ನು ಕೊಟ್ಟರು.ನಾವು ದೇವರನ್ನು ನೋಡಿಲ್ಲ.ಆದರೆ ಬಡವರ, ದಲಿತರ ಶೋಷಿತರ ಪಾಲಿಗೆ ಅರಸು ದೇವರಾಗಿದ್ದಾರೆ. ಕಷ್ಟದಲ್ಲಿ ಸಹಾಯ ಮಾಡಿ ಜೀವನಕ್ಕೆ ದಾರಿ ತೋರಿದವರು. ಬಹಳ ಕಷ್ಟಕರವಾದ ಸನ್ನಿವೇಶದಲ್ಲಿ ಬದುಕುವ, ಉಣ್ಣಲು ಭೂಮಿ ಕೊಟ್ಟು ಸಹಾಯ ಮಾಡಿದ ಅರಸು ಸದಾ ಕಾಲ ಅಜರಾಮರವಾಗಿ ಉಳಿದಿದ್ದಾರೆ ಎಂದು ಹೇಳಿದರು.
ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಅವರೊಂದಿಗೆ ವಿಧಾನಸೌಧಕ್ಕೆ ತೆರಳಿದ್ದು ನನ್ನ ಸುದೈವವಾಗಿತ್ತು.ಅಂದು ಎಂಬಿಬಿಎಸ್ ಮುಗಿಸಿದ್ದ ನನಗೆ ವೈದ್ಯ ವೃತ್ತಿಯ ಉದ್ಯೋಗ ಕೊಡಿಸಿದರು.ಹಾಗಾಗಿ, ನನ್ನ ಪಾಲಿಗೆ ಅವರೇ ಪ್ರತ್ಯಕ್ಷ ದೇವರೆಂದು ಈತನಕ ನಂಬಿರುವೆ ಎಂದು ನುಡಿದರು.
ಡಿ.ದೇವರಾಜ ಅರಸು ಅವರು ಅರಸು ಕುಟುಂಬದಲ್ಲಿ ಬಂದರೂ ದಲಿತರು,ಹಿಂದುಳಿದ,ಶೋಷಿತರ ಪರವಾದ ಕಲ್ಯಾಣ ಕಾರ್ಯಕ್ರಮ ಜಾರಿಗೆ ತಂದವರು.ಇAದಿರಾಗಾAಧಿ ಅವರ 20 ಅಂ ಶಗಳ ಕಾರ್ಯಕ್ರಮವನ್ನು ಜಾರಿಗೆ ತಂದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಹುಟ್ಟು ಸಾವು ಸಹಜವಾದರೂ ಬದುಕಿರುವವರೆಗೆ ಮಾಡುವ ಕಾರ್ಯಗಳು, ಸಾಧನೆಗಳು ಸದಾ ಕಾಲ ಉಳಿಯಲಿದೆ.ಸಮಾಜ ನನಗೆ ಏನು ಕೊಟ್ಟಿತು ಎಂಬುದಕ್ಕಿAತ ನಾನೇನು ಸಮಾಜಕ್ಕೆ ಮಾಡಿದೆ ಎಂಬುದನ್ನು ಆತ್ಮವಿಮರ್ಶೆ ಮಾಡಬೇಕು ಎಂದು ಸಲಹೆ ನೀಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿಕೊಂಡು ಬಂದಿರುವ ಎಂ.ಜಿ.ಆರ್.ಅರಸು ಅವರು ಸಾಮಾಜಿಕ,ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ಸ್ವಾರ್ಥ ಇಲ್ಲದೆ ನಿಸ್ವಾರ್ಥವಾಗಿ ಸೇವೆ ಮಾಡುತ್ತಿರುವ ವ್ಯಕ್ತಿಗಳ ಗುರುತಿಸಿ, ಪ್ರಶಸ್ತಿ ಕೊಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ,ಕೆ.ಎಸ್.ನಿಸಾರ್ ಅಹ್ಮದ್, ಪಾಟೀಲ್ ಪುಟ್ಟಪ್ಪ ಅವರು ಸೇರಿದಂತೆ ಅನೇಕ ಮಹನೀಯರ ಜೊತೆಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದ್ದು ಈ ವೇದಿಕೆಯಾಗಿದೆ ಎಂದು ನುಡಿದರು. ಡಿ.ದೇವರಾಜ ಅರಸು ಅವರೊಂದಿಗೆ ತಿವ್ಮ್ಮಯ್ಯ ಹತ್ತಿರದ ಒಡನಾಟ ಇಟ್ಟುಕೊಂಡವರಾಗಿದ್ದರು.ಅಸಾಮಾನ್ಯ ವ್ಯಕ್ತಿಗಳ ಗುರುತಿಸಿ ಅರಸು ಪ್ರಶಸ್ತಿ ಕೊಡುವುದರಿಂದ ಮತ್ತಷ್ಟು ಮನ್ನಣೆ ಸಿಗಲಿದೆ. ರಾಜ್ಯಾದ್ಯಂತ ಅರಸು ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅರಸು ಜಾಗೃತಿ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಎಂ.ಜಿ.ಆರ್.ಅರಸು, ಅನ್ವೇಷಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಮರನಾಥ್ ರಾಜೇ ಅರಸ್, ಗಣಿ ಮತ್ತು ಭೂ ವಿಜ್ಷಾನಿ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಶ್ರೀನಿವಾಸ ಬಹದ್ದೂರ್ ಹಾಜರಿದ್ದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ನಾಡೋಜ ಎಸ್.ಷಡಕ್ಷರಿ, ಎಸ್.ಎನ್.ಸಂದೇಶ್ ಕುಮಾರ್, ಡಾ.ಸುಂದರರಾಜೇ ಅರಸ್,ಡಾ.ಗಂಗಾಧರ ಕೊಡ್ಲಿ, ಮರ್ಲಿನ್ ಕ್ರಿಸ್ಟಬೆಲ್, ತಿರುಮಲಾಫುರ ರಾಜೇಗೌಡ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.