3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಐತಿಹಾಸಿಕ ತೂಕದ ಯಂತ್ರ ಅನಾವರಣ


ಮೈಸೂರು; 1880ರ ದಶಕದ ಕೊನೆಯಲ್ಲಿ ನಿರ್ಮಿಸಲಾದ ಅಪರೂಪದ ಹಾಗೂ ಐತಿಹಾಸಿಕ ಮಹತ್ವದ 2000 ಕೆ.ಜಿ. ಸಾಮರ್ಥ್ಯದ ಯಾಂತ್ರಿಕ ತೂಕದ ಯಂತ್ರವನ್ನು ಪುನರುಜ್ಜೀವನಗೊಳಿಸಿ ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅನಾವರಣಗೊಳಿಸಲಾಯಿತು.
ಈ ಪರಂಪರೆಯ ಅಮೂಲ್ಯ ವಸ್ತುವನ್ನು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಭಾಗದ ಶಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂಗ್ಲೆAಡ್‌ನ ಲಿವರ್‌ಪೂಲ್‌ನ ಪ್ರಸಿದ್ಧ ಸಂಸ್ಥೆಯಾದ ಹೆನ್ರಿ ಪೂಲಿ ಅಂಡ್ ಸನ್ ಈ ತೂಕದ ಯಂತ್ರವನ್ನು ನಿರ್ಮಿಸಿದ್ದು. ಇದು ಮೂಲತಃ ದಕ್ಷಿಣ ಭಾರತೀಯ ರೈಲ್ವೆಯ ಆಸ್ತಿಯಾಗಿದ್ದು, 1951ರಲ್ಲಿ ಮೈಸೂರು ಸ್ಟೇಟ್ ರೈಲ್ವೆ, ದಕ್ಷಿಣ ಭಾರತೀಯ ರೈಲ್ವೆ ಮತ್ತು ಮದ್ರಾಸ್ ಹಾಗೂ ಸದರ್ನ್ ಮಹರಟ್ಟಾ ರೈಲ್ವೆಗಳ ವಿಲೀನದ ನಂತರ ದಕ್ಷಿಣ ರೈಲ್ವೆಯ ಭಾಗವಾಯಿತು. ನಂತರ ಇದು ಬಂಗಾರಪೇಟೆ ಜಂಕ್ಷನ್‌ನಲ್ಲಿ ಸೇವೆಯಲ್ಲಿಸಿತು. ಪ್ರಸ್ತುತ ಬಂಗಾರಪೇಟೆ ದಕ್ಷಿಣ ಪಶ್ಚಿಮ ರೈಲ್ವೆಯ ವ್ಯಾಪ್ತಿಗೆ ಒಳಪಟ್ಟಿದೆ.
ಪ್ರಯಾಣಿಕರ ಸಾಮಾನು, ಪಾರ್ಸೆಲ್ ಹಾಗೂ ಭಾರವಾದ ಸರಕುಗಳನ್ನು ತೂಕ ಮಾಡಲು ಬಳಸಲಾಗುತ್ತಿದ್ದ ಈ ಯಂತ್ರವು, ವಿಕ್ಟೋರಿಯನ್ ಯುಗದ ಅತ್ಯುತ್ತಮ ತಾಂತ್ರಿಕ ಕೌಶಲ್ಯದ ಪ್ರತೀಕವಾಗಿದೆ. ಗಟ್ಟಿಯಾದ ಕಾಸ್ಟ್ ಐರನ್ ನಿರ್ಮಾಣ ಮತ್ತು ನಿಖರ ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿರುವ ಈ ಯಂತ್ರವು 2000 ಕೆ.ಜಿ.ವರೆಗೆ ತೂಕವನ್ನು ಅಳೆಯುವ ಸಾಮರ್ಥ್ಯ ಹೊಂದಿದೆ.
ಹೆನ್ರಿ ಪೂಲಿ ಅಂಡ್ ಸನ್ ಸಂಸ್ಥೆಯು 19ನೇ ಹಾಗೂ 20ನೇ ಶತಮಾನದ ಆರಂಭದಲ್ಲಿ ರೈಲ್ವೆ ಮತ್ತು ಕೈಗಾರಿಕಾ ತೂಕದ ಯಂತ್ರಗಳ ನಿರ್ಮಾಣದಲ್ಲಿ ಜಾಗತಿಕ ಖ್ಯಾತಿ ಪಡೆದಿತ್ತು. ಇವರ ಉತ್ಪನ್ನಗಳು ರೈಲ್ವೆಗಳು, ಬಂದರುಗಳು, ಕಾರ್ಖಾನೆಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿದ್ದವು.
ಈ ಪರಂಪರೆಯ ಪ್ರದರ್ಶನವು ಎಲೆಕ್ಟಾçನಿಕ್ ತೂಕದ ಯಂತ್ರಗಳು ಬಂದ ಮೊದಲು, ರೈಲ್ವೆಗಳಲ್ಲಿ ಪ್ರಯಾಣಿಕರ ಸಾಮಾನು ಮತ್ತು ಪಾರ್ಸೆಲ್‌ಗಳ ನಿರ್ವಹಣೆ ಹೇಗೆ ನಡೆಯುತ್ತಿತ್ತು ಎಂಬುದನ್ನು ಪರಿಚಯಿಸುತ್ತದೆ. ಜೊತೆಗೆ ದಕ್ಷಿಣ ಭಾರತೀಯ ರೈಲ್ವೆಯ ಪರಂಪರೆಯಿAದ ಇಂದಿನ ನೈರುತ್ಯ ರೈಲ್ವೆಯವರೆಗೆ ಇರುವ ಐತಿಹಾಸಿಕ ಪಯಣವನ್ನು ಸ್ಮರಿಸುತ್ತದೆ.
ಸಾರ್ವಜನಿಕರು ಈ ಐತಿಹಾಸಿಕ ವಸ್ತುವನ್ನು ವೀಕ್ಷಿಸಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬಹುದು. ಆದರೆ ಈ ಪರಂಪರೆಯ ತೂಕದ ಯಂತ್ರದ ಮೇಲೆ ಹತ್ತಬಾರದು ಹಾಗೂ ಮುಟ್ಟಬಾರದೆಂದು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ತಿಳಿಸಿದರು.