
ಮೈಸೂರು: ಇಲ್ಲಿನ ಊಟಿ ರಸ್ತೆಯಲ್ಲಿರುವ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ 23ನೇ ಚಾತುರ್ಮಾಸ್ಯ ವ್ರತದೀಕ್ಷಾ ಮಹೋತ್ಸವಗಳು ಜುಲೈ 29 ರಿಂದ ಸೆಪ್ಟೆಂಬರ್ 26ರವರೆಗೆ ವಿಜೃಂಭಣೆಯಿAದ ನೆರವೇರಲಿವೆ.
ಜುಲೈ 29: ಗುರುಪೂರ್ಣಿಮಾ ಹಾಗೂ ಸನ್ಮಾನ ಕಾರ್ಯಕ್ರಮ;
ಉತ್ಸವದ ಮೊದಲ ದಿನವಾದ ಜುಲೈ 29 (ಬುಧವಾರ) ಗುರುಪೂರ್ಣಿಮೆ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಗುರುಪರಂಪರಾ ಪೂಜೆ, ಚೈತನ್ಯಾರ್ಚನೆ, ವ್ಯಾಸ ಪೂಜೆ, ಪೂಜ್ಯ ಸ್ವಾಮೀಜಿಯವರ ಪಾದುಕಾ ಪೂಜೆ, ಪವಮಾನ ಹೋಮ ಹಾಗೂ ದತ್ತ ಹೋಮ ನಡೆಯಲಿವೆ.
ಇದೇ ಸಂದರ್ಭದಲ್ಲಿ ಶ್ರೀ ಗಂಡೂರಿ ದತ್ತಾತ್ರೇಯ ಶರ್ಮ ಅವರಿಗೆ “ಶ್ರೀ ಗಣಪತಿ ಸಚ್ಚಿದಾನಂದ ಪ್ರಶಸ್ತಿ” ನೀಡಿ ಗೌರವಿಸಲಾಗುವುದು. ಸಂಜೆ 5:00 ಗಂಟೆಗೆ ಶ್ರೀ ಗುರುಗೀತಾ ಪಾರಾಯಣ ಹಾಗೂ ಶ್ರೀ ಕಾಲಾಗ್ನಿ ದತ್ತಾತ್ರೇಯ ಸ್ವಾಮಿಗೆ ಪಂಚೋತ್ಸವ ಸೇವೆ ನೆರವೇರಲಿದೆ.
ಜುಲೈ 30ರಿಂದ ಸೆಪ್ಟೆಂಬರ್ 26ರವರೆಗಿನ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 8:00 ಗಂಟೆಗೆ ಶ್ರೀಚಕ್ರ ಪೂಜೆ ಹಾಗೂ ಹೋಮಗಳು ಜರುಗಲಿವೆ. ಸಂಜೆ 6:00 ಗಂಟೆಗೆ ಚಾತುರ್ಮಾಸ್ಯ ಪ್ರವಚನದ ಭಾಗವಾಗಿ ಶ್ರೀ ವಿಷ್ಣು ಪುರಾಣ ಪ್ರವಚನ ಏರ್ಪಡಿಸಲಾಗಿದೆ.
ವ್ರತದ ಅಂಗವಾಗಿ ಶತಚಂಡೀ ಯಾಗ, ದತ್ತ ಯಾಗ, ಇಷ್ಟಿ ಯಾಗಗಳು ನೆರವೇರಲಿದ್ದು, ಭಾನುವಾರಗಳು ಹಾಗೂ ಹಬ್ಬದ ದಿನಗಳಲ್ಲಿ ವಿಶೇಷ ಧಾರ್ಮಿಕ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ.
ಸೆ 26 ರಂದು ವ್ರತ ಸಮಾಪ್ತಿ;
ಸೆಪ್ಟೆಂಬರ್ 26ರಂದು ಚಾತುರ್ಮಾಸ್ಯ ವ್ರತ ಸಮಾಪ್ತಿ, ಪವಮಾನ ಹೋಮ ಮತ್ತು ಸೀಮೋಲ್ಲಂಘನ ಮುಂತಾದ ಧಾರ್ಮಿಕ ವಿಧಿವಿಧಾನಗಳೊಂದಿಗೆ ವ್ರತ ಮಹೋತ್ಸವವು ಸಂಪನ್ನಗೊಳ್ಳಲಿದೆ.
ಆಶ್ರಮದಲ್ಲಿ ನಡೆಯುವ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ: ಕಾರ್ಯಾಲಯದ ದೂರವಾಣಿ ಸಂಖ್ಯೆ 2486486 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.