3Kaala News

ಸುಭಾಷಿತ 

ಯಾವುದಕ್ಕಾಗಿ ಚಿಂತೆ ಯಾವುದಕ್ಕಾಗಿ ದುಃಖ ಪಡುತ್ತಿದ್ದಿ , ನೆನ್ನೆ ಇದ್ದ ಖುಷಿ ಇವತ್ತು ಇಲ್ಲ ಅಂದಮೇಲೆ ಇವತ್ತು ಇರೋದು ನಾಳೆ ಇರುತ್ತಾ? ಈ ಜಗತ್ತಿನ ಸೃಷ್ಟಿಯಲ್ಲಿ ಯಾವುದೂ ಕೂಡ ಶಾಶ್ವತ ಅಲ್ಲ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ತಿಪ್ಪಯ್ಯನ ಕೆರೆಗೆ ಕಾಯಕಲ್ಪ ನೀಡಲು ಕ್ರಮ; ಯದುವೀರ್

  • ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ಬಗ್ಗೆ ಬೇಸರ
  • ಚಾಮುಂಡಿ ಬೆಟ್ಟದ ತಪ್ಪಲಿನ ಪರಿಸರ ಉಳಿಸಲು ಸಂಕಲ್ಪ
    ಮೈಸೂರು: ನಗರದ ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ತಿಪ್ಪಯ್ಯನ ಕೆರೆಗೆ ಒಳಚರಂಡಿ ನೀರು ಸೇರಿ ಸಂಪೂರ್ಣ ಮಲೀನಗೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಇದಕ್ಕೆ ಶೀಘ್ರದಲ್ಲೇ ಕಾಯಕಲ್ಪ ಕಲ್ಪಿಸುವುದಾಗಿ ಭರವಸೆ ನೀಡಿದರು.
    ಪೊಲೀಸ್ ಬಡಾವಣೆಗೆ ಹೊಂದಿಕೊAಡಿರುವ ಐತಿಹಾಸಿಕ ತಿಪ್ಪಯ್ಯನ ಕೆರೆ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾನುವಾರ ಕೆರೆ ಬಳಿ ಆಗಮಿಸಿ ಪರಿಶೀಲನೆ ನಡೆಸಿದ ಅವರು, ಕೆರೆಗೆ ಅಕ್ಕಪಕ್ಕದ ಆರೇಳು ಬಡಾವಣೆಗಳ ಒಳಚರಂಡಿಯ ಮಲೀನ ನೀರು ಸೇರುತ್ತಿರುವುದರ ಬಗ್ಗೆ ತೀವ್ರ ಬೇಸರ ಹೊರಹಾಕಿದರು.
    ರಿಂಗ್ ರಸ್ತೆಗೆ ತಾಕಿಕೊಂಡಿದ್ದು, ಚಾಮುಂಡಿ ಬೆಟ್ಟದ ಪಕ್ಕದಲ್ಲೇ ಇರುವ ಕೆರೆಯ ಈ ದುಸ್ಥಿತಿ ಬಗ್ಗೆ ಬಡಾವಣೆಯ ನಿವಾಸಿಗಳು ಇಂಚಿAಚೂ ಮಾಹಿತಿ ನೀಡಿದರು. ಬಡಾವಣೆಯ ನಿರ್ಮಾಣದ ವೇಳೆ ಒಳಚರಂಡಿ ವ್ಯವಸ್ಥೆ ಅನುಷ್ಠಾನ ಸಂದರ್ಭದಲ್ಲಿ ಮಾಡಲಾದ ಅವೈಜ್ಞಾನಿಕ ಕಾಮಗಾರಿ ಹಾಗೂ ಸೆಫ್ಟಿಕ್ ಟ್ಯಾಂಕ್ ನಿಂದಾಗಿ ಇಂದು ಇಡೀ ಕೆರೆ ಮಲೀನಗೊಂಡಿರುವುದರ ಬಗ್ಗೆ ಮಾಹಿತಿ ತಿಳಿದ ಒಡೆಯರ್, ಕೆರೆ ಸಂರಕ್ಷಣೆ ಕುರಿತು ತ್ವರಿತವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಅದಕ್ಕೆ ಪೂರಕವಾಗಿ ಸಂಬAಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
    ಮೂರು ವರ್ಷದ ಹಿಂದೆ ತಿಳಿನೀರಿನಿಂದ ಹೊಳೆಯುತ್ತಿದ್ದ ತಿಪ್ಪಯ್ಯನ ಕೆರೆ' ಈಗ ಕತ್ತೆ ಕಿವಿ ಎಂಬ ತೇಲುಕಳೆಯ ತಿಪ್ಪೆಯಾಗಿದೆ. ಜಲಚರಗಳು ಉಸಿರುಗಟ್ಟಿ ಸತ್ತರೆ, ಬಾನಾಡಿಗಳು ಕಾಣದಾಗಿವೆ ಎಂದು ಸ್ಥಳೀಯರು ಸಂಸದರಲ್ಲಿ ದೂರಿದರು. ಕೆರೆಯತ್ತ ವಿಹಾರ ಬರಬೇಕೆಂಬ ಮನಸ್ಸು ಮಾಡಿದವರೂ, ಜಲನಿಧಿಯ ಸೌಂದರ್ಯಕ್ಕೆ ಹತ್ತಿರದಲ್ಲೇ ನಿವೇಶನ ಖರೀದಿಸಿ ಮನೆ ಕಟ್ಟಿಸಿದವರ ಪಾಲಿಗೆ ಕೆರೆಯೀಗ ರೌರವ ನರಕ ತೋರಿಸುತ್ತಿದೆ. ಹಂದಿ, ಸೊಳ್ಳೆ ಕಾಟ ಸೇರಿದಂತೆ ರೋಗರುಜಿನಗಳನ್ನೇ ಹೊತ್ತು ಕೂತಿದೆ ಎಂದು ಆರೋಪಿಸಿದರು. ರಿಂಗ್ ರಸ್ತೆ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲ್ ನಗರದ ಮಧ್ಯೆ ಚಾಚಿರುವ ಕೆರೆಗೆ ನೇರವಾಗಿ ಒಳಚರಂಡಿ ನೀರು ಸೇರುತ್ತಿದೆ. ಮಳೆ ಬಂದು ಕೆರೆಯ ನೀರಿನ ಮಟ್ಟ ಏರಿದರೂ ನೀರು ತಿಳಿಯಾಗಿಲ್ಲ. ಕೊಳಚೆ ನೀರಿನಿಂದಕತ್ತೆ ಕಿವಿ’ ತೇಲುಕಳೆ ತುಂಬಿಹೋಗಿದ್ದು, ಆಟದ ಮೈದಾನದಂತೆ ಕಾಣುತ್ತದೆ ಎಂದರು.
    ಈ ಕೆರೆಗೆ ಇದರ ಮೇಲ್ಭಾಗದಲ್ಲಿರುವ `ಸಾತಿ ಕೆರೆ’ಗೆ ಸಂಪರ್ಕಿಸಿರುವ ರಾಜಕಾಲುವೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಆ ಕೆರೆಯ ರಕ್ಷಣೆಯೂ ಆಗಬೇಕು ಎಂದು ಒತ್ತಾಯಿಸಿದರು.
    ಈ ವೇಳೆ ಮಾಜಿ ಶಾಸಕ ಎಲ್. ನಾಗೇಂದ್ರ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತಕುಮಾರ್ ಗೌಡ, ಸ್ಥಳೀಯರಾದ ಥಾಮಸ್, ಶಿವಕುಮಾರ್, ಶ್ರೀಲಕ್ಷಿ÷್ಮ, ಭೋಜಪ್ಪ, ಮಹೇಶ್, ಮಹಾದೇವಪ್ಪ, ಸಿದ್ದರಾಮಪ್ಪ, ಹೊನ್ನಪ್ಪ ಸೇರಿದಂತೆ ನೂರಾರು ಮಂದಿ ಇದ್ದರು. ಕೆರೆಯ ಚಿತ್ರಣ:
    ಲಲಿತಾದ್ರಿಪುರ ಗ್ರಾಮದ ಸರ್ವೆ ಸಂಖ್ಯೆ 31ರಲ್ಲಿ 6.17 ಎಕರೆ ಹಾಗೂ 30ರಲ್ಲಿ 9.01 ಎಕರೆ ವಿಸ್ತೀರ್ಣವನ್ನು ಹೊಂದಿರುವ ಕೆರೆ, ರಿಂಗ್ ರಸ್ತೆಯ ಪಕ್ಕದಲ್ಲೇ ಇದೆ. ಗಿರಿದರ್ಶಿನಿ ಬಡಾವಣೆ, ಪೊಲೀಸ್ ಬಡಾವಣೆ, ಆಲನಹಳ್ಳಿಯ ಒಳಚರಂಡಿ ನೀರು ರಾಜ ಕಾಲುವೆಯ ಮೂಲಕ ಕೆರೆಯ ಒಡಲು ಸೇರುತ್ತಿದೆ. ಅದಲ್ಲದೆ, ಕೆರೆ ಸಮೀಪದಲ್ಲೇ ಮ್ಯಾನ್‌ಹೋಲ್‌ಗಳ ಬಾಯಿ ಕಳಚಿದ್ದು, ಹಂದಿಗಳ ಆವಾಸಸ್ಥಾನವಾಗಿದೆ.
    ನಗರದ ಪೂರ್ವಭಾಗದ ಬಡಾವಣೆಗಳ ಚರಂಡಿ ನೀರನ್ನು ಸಂಸ್ಕರಿಸುವ ಘಟಕ ತೆರೆಯುವ ಕೆಲಸವನ್ನು ಪಾಲಿಕೆ, ಮುಡಾ ಮಾಡಿಲ್ಲ. ಸಮನ್ವಯದ ಕೊರತೆಯಿಂದ ಕೆರೆಯ ಜೀವ ಹಾರಿಹೋಗಿದೆ.
    ಜೀವಕಳೆ ಕಳೆದ ತೇಲುಕಳೆ:
    ರಂದೀಪ್ ಜಿಲ್ಲಾಧಿಕಾರಿಯಾಗಿದ್ದಾಗ 2016-17ರಲ್ಲಿ ಆಟೊಮೋಟೀವ್ ಆ?ಯಕ್ಸಿಲ್ ಕಾರ್ಖಾನೆಯ ಸಿಎಸ್‌ಆರ್ ಹಣದಿಂದ ಕೆರೆಗೆ ಕಾಯಕಲ್ಪ ನೀಡಲಾಗಿತ್ತು. ಹೂಳು ತೆಗೆದು ಏರಿ ಮರು ನಿರ್ಮಿಸಲಾಗಿತ್ತು.
    2018ರ ಏಪ್ರಿಲ್‌ನಲ್ಲಿ ಕೆರೆ ನಿರ್ವಹಣೆಯನ್ನು ಜಿಲ್ಲಾಡಳಿತ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಿತ್ತು. ಅರಣ್ಯೀಕರಣ ಹುಲ್ಲುಗಾವಲು ನಿರ್ಮಾಣವಾಗಿ ಸೌಂದರ್ಯವೂ ಇಮ್ಮಡಿಸಿತ್ತು.
    2022ರಲ್ಲಿ ಎಸ್‌ಟಿಪಿ ಟ್ಯಾಂಕ್‌ಗಳನ್ನು ನಿರ್ಮಿಸಿ ಕೊಳಚೆ ನೀರು ಬರದಿರಲು ಕ್ರಮವಹಿಸುವುದಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಹೇಳಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.
    ಜಲಚರಗಳೇ ನಾಪತ್ತೆ:
    400 ವರ್ಷದ ಇತಿಹಾಸ
    ಸುಮಾರು 400 ವರ್ಷಗಳ ಹಿಂದೆ ಚಾಮುಂಡಿ ಬೆಟ್ಟದಿಂದ ಹರಿದು ಬರುವ ನೀರನ್ನು ಹಿಡಿದಿಡಲು ಬೆಟ್ಟದ 4 ಕಡೆಯೂ ಒಂದೊAದು ಕೆರೆಯನ್ನು ನಿರ್ಮಿಸಲಾಗಿತ್ತು. ತಿಪ್ಪರಾಯ ಎಂಬ ಸೇನಾದಂಡನಾಯಕ ತನ್ನ ಕುದುರೆಗಳಿಗೆ ಇಲ್ಲಿ ನೀರು ಕುಡಿಸುತ್ತಿದ್ದುದರಿಂದ ಹಾಗೂ ಅವನೇ ಈ ಕೆರೆ ನಿರ್ವಹಣೆ ಮಾಡಿದ್ದರಿಂದ ಅವನ ಹೆಸರಿನಿಂದಲೇ ಕರೆಯಲಾಗುತ್ತಿದೆ. ತಿಪ್ಪರಾಯನ ಕೆರೆ, ತಿಪ್ಪಯ್ಯನ ಕೆರೆ ಆಗಿದೆ.