3Kaala News

ಸುಭಾಷಿತ 

ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅವಶ್ಯಕ. ಮನುಷ್ಯ ಧರ್ಮದಿಂದ ವಿಮುಖನಾದರೇ, ಜೀವನ ಅಶಾಂತಿಯ ಕಡಲಾಗುತ್ತದೆ. ಮನುಷ್ಯನ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೆ, ಮಾರಕವಾಗಬಾರದು.  ಸುಳ್ಳು ಹೇಳಲು ಹಲವು ದಾರಿ, ಆದರೆ ಸತ್ಯಕ್ಕೆ ಇರುವುದೊಂದೇ ದಾರಿ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶಂಕರಾಚಾರ್ಯರು ಹಿಂದೂ ಧರ್ಮವನ್ನು ಜಗತ್ತಿನ ಉದ್ದಗಲಕ್ಕೂ ವಿಸ್ತರಿಸಿದರು; ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ


ಮೈಸೂರು; ಶಂಕರಾಚಾರ್ಯರು ದೈವಾಂಶ ಸಂಭೂತರು, ಹಿಂದೂ ಧರ್ಮವನ್ನು ಜಗತ್ತಿನ ಉದ್ದಗಲಕ್ಕೂ ವಿಸ್ತರಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಭಾನುವಾರ ನಗರದ ಶೃಂಗೇರಿ ಶ್ರೀಶಂಕರ ವ್ಮಠದ ಸಭಾಂಗಣದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಏರ್ಪಡಿಸಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ವಿಶ್ವ ತತ್ವಜ್ಞಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂಧರ್ಮವನ್ನು ಪುನುರುತ್ತಾನಗೊಳಿಸಿದ ಆಚಾರ್ಯತ್ರಯರು ಶ್ರೀ ಶಂಕರಾಚಾರ್ಯರು.
ಅತೀ ಚಿಕ್ಕ ವಯಸ್ಸಿನಲ್ಲೇ ದೇಶ ಪರ್ಯಟನೆ ಮಾಡಿದವರು. ಈಗಿನ ವಿದ್ಯಾರ್ಥಿಗಳು ಅವರಂತೆ ಮೇಧಾವಿ ತತ್ವಙ್ನನಿಗಳಾಬೇಕು. ಸಮಯವನ್ನು ವ್ಯರ್ಥ ಮಾಡದೆ ಚೆನ್ನಾಗಿ ಓದಿ ಮುಂದೆ ಬರಬೇಕು ಎಂದರು.
ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್ ಬಸವರಾಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮAಜೇಗೌಡ, ನಗರ ಪಾಲಿಕೆ ಮಾಜಿ ಸದಸ್ಯ ಎನ್ ಧ್ರುವರಾಜ್, ಡಾ. ಕೃಷ್ಣ ವೆಂಕಟಸ್ವಾಮಿ, ವಾಸ್ತುಶಿಲ್ಪಿ ಪಾರ್ವತಿ ರಾಮಕೃಷ್ಣ, ಡಾ. ಅಜಯ್ ಕುಮಾರ್ ಜೈನ್, ದೇವಸ್ಥಾನದ ಶಿಲ್ಪಿ ದೇವರಾಜ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್, ಬಿಗಿನರ್ಸ್ ಬೆಂಚ್ ಸಂಸ್ಥಾಪಕೆ ರಶ್ಮಿ ಕಾವೇರಮ್ಮ ರವರಿಗೆ ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿಯನ್ನು ಮಾಜಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ರವರು ಪ್ರಧಾನ ಮಾಡಿದರು.
ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಪುಷ್ಪಾರ್ಚನೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಮಾಜ ಸೇವಕ ಡಾ. ರಘುರಾಂ ಕೆ ವಾಜಪೇಯಿ, ಕೆ.ಎನ್.ನಾಗೇಗೌಡ, ಡಾ. ಪುಷ್ಪ ಎ ಅಯ್ಯಂಗಾರ್, ಡಾ. ಲೀಲಾ.ಕೆ ಪ್ರಕಾಶ್, ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಭುಶಂಕರ, ಕೃಷ್ಣಪ್ಪ, ಹನುಮಂತಯ್ಯ, ನೇಹಾ, ಜೋತಿ, ರಘು ಅರಸ್, ಅಂಬಾ ಅರಸ್, ಬಸವರಾಜು, ಪ್ರಭಾಕರ್, ಶಿವರಾಂ, ಬಸವರಾಜು, ತಾಯೂರು ಗಣೇಶ್ , ಮಹಾದೇವ ಸ್ವಾಮಿ ರವೀಶ್, ರಮೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು