
ಮೈಸೂರು; ನಗರದ ದಟ್ಟಗಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಆದ ಅಗ್ನಿ ಅವಘಡದ ಸಂಬAಧ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಐದು ಮಂದಿ ಅಬಕಾರಿ ಅಧಿಕಾರಿಗಳ ಅಮಾನತು ಮಾಡಲಾಗಿದೆ.
ಮೈಸೂರಿನ ದಟ್ಟಗಳ್ಳಿ 3 ನೇ ಹಚಿತದ ನೇತಾಜಿ ವೃತ್ತದ ಬಳಿಯಿರುವ ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್ ರೆಸ್ಟೋ ಪಬ್‌ನ ಕಟ್ಟಡದ ರೂಪ್ ಟಾಪ್ ನಲ್ಲಿ ಅನುಮತಿ ಪಡೆಯದೆ ಒಣ ಹುಲ್ಲು ಮತ್ತು ಗರಿಗಳಿಂದ ನಿರ್ಮಿಸಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದು, ಈ ಸಂಬAಧ ಪರಿಶೀಲಿಸದೆ ಕರ್ತವ್ಯ ಲೋಪ ಎಸಗಿರುವ ಮೈಸೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಹಾಗೂ ಮೈಸೂರು ವಲಯ-3 ರ ಅಬಕಾರಿ ನಿರೀಕ್ಷಕರು, ಅಬಕಾರಿ ಉಪನಿರೀಕ್ಷಕರು-1, ಅಬಕಾರಿ ಉಪನಿರೀಕ್ಷಕರು-2, ಹಾಗೂ ಒಬ್ಬ ಅಬಕಾರಿ ಪೇದೆ (ಬೀಟ್ ಕಾನ್ಸಟೇಬಲ್) ಸೇರಿದಂತೆ ಒಟ್ಟು 5 ಜನರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಪಡಿಸಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.