3Kaala News

ಸುಭಾಷಿತ 

ಓಟದ ಬದುಕಿನಲ್ಲಿ ಎಲ್ಲವನ್ನು ತಕ್ಷಣವೇ ಪಡೆದುಕೊಳ್ಳಬೇಕೆಂಬ ನಿನ್ನ ಹಟವೇ ನಿನ್ನ ನೆಮ್ಮದಿಯನ್ನು ಕದಿಯುತ್ತದೆ. ಸಮಯಕ್ಕಿಂತ ಮುಂಚೆ, ಹಣೆ ಬರಕಿಂತ ಮುಂಚೆ, ಹೆಚ್ಚಿಗೆ ಯಾರಿಗೂ ಏನೂ ಸಿಗುವುದಿಲ್ಲ . ನಿನ್ನ ಪ್ರಯತ್ನ ನಿರಂತರವಾಗಿರಲಿ. ಆದರೆ, ಫಲಿತಾಂಶಕ್ಕಾಗಿ ಇಂದಿನ ಶಾಂತಿಯನ್ನು ಬಲಿ ಕೊಡಬೇಡ. ಭಗವಾನ್ ಶ್ರೀ ಕೃಷ್ಣ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಡ್ಡ ಮತದಾನ ಮಾಡಿರುವ ಪಕ್ಷದ್ರೋಹಿಗಳ ವಿರುದ್ಧ ತಕ್ಷಣವೇ ಕ್ರಮ ಆಗಬೇಕು; ಶಾಸಕ ಟಿ.ಎಸ್.ಶ್ರೀವತ್ಸ


ಮೈಸೂರು; ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಪಕ್ಷದ್ರೋಹಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಕೆ.ಆರ್ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಗೂ ಕೂಡ ಮತ ಚಲಾವಣೆ ಮಾಡುವಂತೆ ಪಕ್ಷದಿಂದ ಸ್ಪಷ್ಟವಾದ ಆದೇಶವನ್ನು ನೀಡಲಾಗಿತ್ತು. ಆದರೆ, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯ ವಿರುದ್ಧ ಅಡ್ಡ ಮತದಾನವನ್ನು ಮಾಡಲಾಗಿದೆ. ಯಾರ್ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷರು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಹೈಕಮಾಂಡ್ ಕೂಡ ವರದಿ ಹೋಗಿದೆ. ಹೈಕಮಾಂಡ್ ತಕ್ಷಣವೇ ಪಕ್ಷದ್ರೋಹಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪಕ್ಷದಿಂದ ಆಯ್ಕೆಯಾಗಿ ಪಕ್ಷದಲ್ಲೇ ಇದ್ದು ಪಕ್ಷದ ಪಕ್ಷಕ್ಕೆ ದ್ರೋಹ ಬಗೆಯುವ ಇಂತವರಿಂದ ಕಾರ್ಯಕರ್ತರು ಮುಖಂಡರು ತಲೆತಗ್ಗಿಸಿಕೊಂಡು ಓಡಾಡುವಚಿತಾಗಿದೆ. ಹಾಗಾಗಿ ಇಂತಹ ಪಕ್ಷದ್ರೋಹಿಗಳ ವಿರುದ್ಧ ಯಾವುದೇ ಮುಲಾಜು ಇಲ್ಲದೆ ತಕ್ಷಣವೇ ಕ್ರಮ ಕೈಗೊಳ್ಳುವ ಮೂಲಕ ಕಠಿಣ ಸಂದೇಶವನ್ನು ಹೈಕಮಾಂಡ್ ನೀಡಬೇಕು ಎಂದು ಒತ್ತಾಯಿಸಿದರು