
ಮೈಸೂರು: ಯುವಕನೊಬ್ಬ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಒಂದೇ ಕುಟುಂಬದ ಮೂರು ಜನರು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದಂಪತಿ ಶಿವಣ್ಣ-ನಾಗರತ್ನ ಹಾಗೂ ಅವರ ಮಗಳು ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡವರು. ಇದೇ ಗ್ರಾಮದ ಯುವಕ ಉಲ್ಲಾಸ್ ಗೌಡ ಎಂಬಾತ ಮಾನಸಿಕವಾಗಿ ಈ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದ ಆರೋಪಿ.
ಮುಂದಿನ ಎರಡು ದಿನಗಳಲ್ಲಿ ಯುವತಿಯ ಮದುವೆಗೆ ಸಕಲ ಸಿದ್ಧತೆ ನಡೆದಿತ್ತು. ಈ ನಡುವೆ ವಧು ರಕ್ಷಿತಾಳನ್ನು ಗ್ರಾಮದ ಉಲ್ಲಾಸ್ ಗೌಡ ಪ್ರೀತಿಸಿದ್ದು, ಮದುವೆ ಆಗುತ್ತೇನೆ ಎಂದು ಕುಟುಂಬದವರಿಗೆ ಹೇಳಿದ್ದ. ಆದರೆ ಆತನ ಪ್ರಸ್ತಾಪವನ್ನು ರಕ್ಷಿತಾ, ಮತ್ತು ಆಕೆಯ ಅಪ್ಪ – ಅಮ್ಮ ವಿರೋಧಿಸಿದ್ದರು. ಅಲ್ಲದೆ, ರಕ್ಷಿತಾಳಿಗೆ ಬೇರೆ ಯುವಕನೊಂದಿಗೆ ಮದುವೆ ಮಾಡಲು ನಿಶ್ಚಿತಾರ್ಥ ಸಹ ಮಾಡಿದ್ದರು. ಜೂನ್ 24 ರಂದು ಮದುವೆಯನ್ನು ನಡೆಸಲು ನಿಶ್ಚಯಿಸಿ, ಸಕಲ ತಯಾರಿ ಮಾಡಿಕೊಂಡಿದ್ದರು.
ವರನಿಗೆ ಮೆಸ್ಸೇಜ್ ಮಾಡಿದ್ದ ಆರೋಪಿ: ಈ ಮಧ್ಯೆ ಉಲ್ಲಾಸ್‍ಗೌಡ ಮದುವೆ ನಿಶ್ಚಯವಾಗಿದ್ದ ಯುವತಿ ರಕ್ಷಿತಾಳಿಗೆ ಯುವಕ ಕಿರುಕುಳ ನೀಡುತ್ತಿದ್ದ. ರಕ್ಷಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನಿಗೆ ಮೆಸೇಜ್ ಮಾಡಿದ್ದ, ಅಲ್ಲದೆ ಈ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ನೊಂದ ರಕ್ಷಿತಾ ಮತ್ತು ಆಕೆಯ ತಂದೆ – ತಾಯಿ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೆÇಲೀಸರು ವ್ಯಕ್ತಪಡಿಸಿದ್ದಾರೆ.
ಕುಟುಂಬದವರು ಈ ರೀತಿ ದುರಂತ ಅಂತ್ಯ ಕಂಡಿದ್ದರಿಂದ ಮದುವೆ ಸಂಭ್ರಮವಿರಬೇಕಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.
ಘಟನಾ ಸ್ಥಳಕ್ಕೆ ವರುಣಾ ಪೆÇಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಘಟನೆ ಸಂಬಂಧ ಮಾಹಿತಿ ಪಡೆದರು. ಡೆತ್ ನೋಟ್‍ಅನ್ನು ಪೆÇಲೀಸರು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ಕೈಕೊಳ್ಳಲಾಗಿದೆ ಎಂದು ತಿಳಿಸಿದರು.