
ಮೊಳಕೆ ಭರಿಸಿರುವ ಕಾಳುಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುವುದೇ ಆಗಿದ್ದರೂ ಇದರಲ್ಲಿ ಯಾವ ಧಾನ್ಯಗಳನ್ನು ಮೊಳಕೆ ಭರಿಸಿದರೆ ಅದರಿಂದ ದೇಹಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹೆಸರು ಕಾಳನ್ನು ಮೊಳಕೆ ಭರಿಸಿ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ.
ಇದರಲ್ಲಿ ಕ್ಯಾಲರಿ ಕಡಿಮೆ ಇದ್ದು, ನಾರಿನಾಂಶ ಮತ್ತು ವಿಟಮಿನ್ ಬಿ ಇದೆ. ಇಷ್ಟು ಮಾತ್ರವಲ್ಲದೆ ವಿಟಮಿನ್ ಸಿ ಹಾಗೂ ಕೆ ಇದೆ. ಆಹಾರ ಕ್ರಮದಲ್ಲಿ ಅಳವಡಿಸಬಹುದಾದ ಅದ್ಭುತ ಆಹಾರ ಇದಾಗಿದೆ. ಪ್ರತೀ ಕಪ್ ಮೊಳಕೆ ಭರಿಸಿರುವ ಹೆಸರು ಕಾಳಿನಲ್ಲಿ 31 ಕ್ಯಾಲರಿ ಇದೆ. ಇದು ತೂಕ ಕಳೆದುಕೊಳ್ಳಲು ಸಹಕಾರಿ. ಇದು ಅಗ್ಗ ಹಾಗೂ ಸುಲಭವಾಗಿ ಲಭ್ಯವಿರುವುದು.
1.ವಿಟಮಿನ್ ಕೆ ಯ ಆಗರ
ವಿಟಮಿನ್ ಕೆ ಯು ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಮೂಳೆಯ ಖನಿಜಾಂಶವನ್ನು ನಿಯಂತ್ರಿಸುವುದು ಮತ್ತು ಮೂಳೆ ಸಾಂದ್ರತೆಯನ್ನು ಕಾಪಾಡುವುದು. ಮೊಳೆಕೆಯುಕ್ತ ಹೆಸರುಬೇಳೆಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದ್ದು, ಒಂದು ಕಪ್ ನಲ್ಲಿ 34 ಮಿ.ಗ್ರಾಂ.ಇದೆ. ಆರೋಗ್ಯಕರ ದೇಹಕ್ಕೆ ಬೇಕಾಗಿರುವ ದೈನಂದಿನ ಅಗತ್ಯತೆಯ ವಿಟಮಿನ್ ಕೆ ಯನ್ನು ಇದು ಒದಗಿಸುವುದು.
2.ವಿಟಮನ್ ಸಿ ಸಮೃದ್ಧವಾಗಿದೆ
ಮೊಳಕೆಯುಕ್ತ ಹೆಸರುಬೇಳೆಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಿ, ಸೋಂಕು ಹಾಗೂ ಕಾಯಿಲೆಗ ವಿರುದ್ಧ ಹೋರಾಡುವುದು. ಒಂದು ಕಪ್ ಮೊಳಕೆ ಭರಿಸಿದ ಹೆಸರುಬೇಳೆಯಲ್ಲಿ 14 ಮಿ.ಗ್ರಾಂ. ವಿಟಮಿನ್ ಸಿ ಇದೆ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ ಪುರುಷರು 90 ಮಿ.ಗ್ರಾಂ.ನಷ್ಟು ವಿಟಮಿನ್ ಸಿಯನ್ನು ಸೇವಿಸಬೇಕು. ಇದೇ ವೇಳೆ ಮಹಿಳೆಯರು 75 ಮಿ.ಗ್ರಾಂ.ನಷ್ಟು ಸೇವನೆ ಮಾಡಬೇಕು. ವಿಟಮಿನ್ ಸಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಅಂಶವು ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುವುದು. ಫ್ರೀ ರ್ಯಾಡಿಕಲ್ ನ್ನು ಆ್ಯಂಟಿಆಕ್ಸಿಡೆಂಟ್ ಗಳು ತಟಸ್ಥಗೊಳಿಸದೆ ಇದ್ದರೆ ಆಗ ಅದು ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡುವುದು. ಇದು ಹಾನಿ ಹಾಗೂ ಉರಿಯೂತ ಉಂಟು ಮಾಡಿ ರೋಗಗಳಿಗೆ ಕಾರಣವಾಗುವುದು. ವಿಟಮಿನ್ ಸಿಯಲ್ಲಿ ಕಾಲಜನ್ ಕೂಡ ಇದ್ದು, ಇದು ಚರ್ಮ, ಅಂಗಾಂಗವನ್ನು ಬಲಗೊಳಿಸುವುದು.
3.ಉನ್ನತ ಮಟ್ಟ ಪ್ರೋಟೀನ್
ಗ್ಲೊಬುಲಿನ್ ಮತ್ತು ಅಲ್ಬುಲಿನ್ ಪ್ರೋಟೀನ್ ನ ಪ್ರಮುಖ ಅಂಶವಾಗಿದೆ. ಮೊಳಕೆಯುಕ್ತ ಹೆಸರುಬೇಳೆಯಲ್ಲಿ ಶೇ.85ರಷ್ಟು ಅಮಿನೋ ಆಮ್ಲವನ್ನು ಇದು ಬಳಸಿಕೊಳ್ಳುವುದು. ಕೋಶಗಳನ್ನು ಬೆಳೆಸಲು ಹಾಗೂ ಸರಿಪಡಿಸಲು ಪ್ರೋಟೀನ್ ಅಗತ್ಯವಾಗಿ ಬೇಕು. ಪ್ರೋಟೀನ್ ನಿಂದ ಮೂಳೆಗಳು, ಸ್ನಾಯುಗಳ, ಚರ್ಮ ಬೆಳೆಯುವುದು.
4.ರಕ್ತಸಂಚಾರ ಸುಗಮಗೊಳಿಸುವುದು
ಮೊಳಕೆಯುಕ್ತ ಹೆಸರುಬೇಳೆ ಕಾಳುಗಳಲ್ಲಿ ಇರುವಂತಹ ಕಬ್ಬಿಣ ಹಾಗೂ ತಾಮ್ರದ ಅಂಶವು ರಕ್ತದಲ್ಲಿನ ಕೆಂಪು ರಕ್ತದ ಕಣಗಳನ್ನು ನಿರ್ವಹಣೆ ಮಾಡಿ ರಕ್ತ ಸಂಚಾರವನ್ನು ಸುಗಮಗೊಳಿಸುವುದು. ಇದರಿಂದ ದೇಹದ ವಿವಿಧ ಅಂಗಾಂಶ ಹಾಗೂ ಕೋಶಗಳಿಗೆ ಆಮ್ಲಜನಕವು ಸರಬರಾಜು ಆಗುವುದು.
5.ಜೀರ್ಣಕ್ರಿಯೆಗೆ ನೆರವಾಗುವುದು
ಮೊಳಕೆ ಭರಿಸಿದ ಹೆಸರುಬೇಳೆಯಲ್ಲಿ ಉನ್ನತ ಮಟ್ಟದ ಕಿಣ್ವಗಳು ಇರುವುದು. ಈ ಕಿಣ್ವಗಳು ದೇಹದಲ್ಲಿ ಚಯಾಪಚಯ ಕ್ರಿಯೆ ವೃದ್ಧಿಸಿ, ದೇಹದಲ್ಲಿ ರಾಸಾಯನಿಕ ಪ್ರತಿಕ್ರಿಯೆಯನ್ನು ವೃದ್ಧಿಸಿ, ಜೀರ್ಣಕ್ರಿಯೆಗೆ ನೆರವಾಗುವುದು. ಕಿಣ್ವಗಳು ಆಹಾರವನ್ನು ವಿಘಟಿಸುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಜೀರ್ಣಕ್ರಿಯೆಯನ್ನು ನಿಯಂತ್ರಿಸುವುದು.
6.ತೂಕ ಇಳಿಸಲು ಸಹಕಾರಿ
ಮೊಳಕೆ ಭರಿಸಿದ ಹೆಸರುಬೇಳೆ ಕಾಳುಗಳು ತೂಕ ಇಳಿಸಿಕೊಳ್ಳಲು ತುಂಬಾ ಪರಿಣಾಮಕಾರಿ ಆಹಾರ. ಇದರಲ್ಲಿ ಪೋಷಕಾಂಶಗಳು ಉನ್ನತ ಮಟ್ಟದಲ್ಲಿದೆ. ಆದರೆ ಕ್ಯಾಲರಿ ತುಂಬಾ ಕಡಿಮೆಯಿರುವ ಕಾರಣದಿಂದಾಗಿ ತೂಕ ಇಳಿಸಿಕೊಳ್ಳುವ ಆಹಾರ ಕ್ರಮದಲ್ಲಿ ಇದನ್ನು ಚಿಂತೆಯಿಲ್ಲದೆ ಬಳಸಿಕೊಳ್ಳಬಹುದು. ಇದರಲ್ಲಿ ಇರುವಂತಹ ನಾರಿನಾಂಶವು ದೀರ್ಘಕಾಲದ ತನಕ ಹಸಿವಾಗದಂತೆ ನೋಡಿಕೊಳ್ಳುವುದು. ಹೆಚ್ಚು ತಿನ್ನಬೇಕು ಎಂದು ಮೆದುಳಿಗೆ ಹೇಳುವ ಗ್ರೆಲಿನ್ ಹಾರ್ಮೋನು ಬಿಡುಗಡೆಯನ್ನು ಇದು ತಡೆಯುವುದು.
7.ವಿಟಮಿನ್ ಗಳು ಮತ್ತು ಖನಿಜಾಂಶಗಳ ಆಗರ
ಒಂದು ಕಪ್ ಮೊಳಕೆ ಭರಿಸಿದ ಹೆಸರುಬೇಳೆ ಯಲ್ಲಿ ಶೇ.100ರಷ್ಟು ದೈನಂದಿನ ಅಗತ್ಯತೆಗೆ ಬೇಕಾಗಿರುವಂತಹ ಫಾಲಟೆ ಇದೆ. ಫಾಲಟೆಯನ್ನು ವಿಟಮಿನ್ ಬಿ9 ಎಂದು ಕರೆಯಲಾಗುತ್ತದೆ. ಇದು ಡಿಎನ್ ಎ ಸಂಶ್ಲೇಷಣೆ, ಅಂಗಾಂಶ ಮತ್ತು ಕೋಶಗಳ ಬೆಳವಣಿಗೆ, ಹಾರ್ಮೋನು ಸಮತೋಲನ, ನರಗಳ ಕಾರ್ಯ ಮತ್ತು ಸಂತಾನೋತ್ಪತ್ತಿಗೆ ಕೂಡ ಅಗತ್ಯವಿದೆ. ಗರ್ಭಧಾರಣೆ ವೇಳೆ ಫಾಲಟೆ ಸೇವನೆ ಮಾಡುವುದು ಅತೀ ಅಗತ್ಯ. ಯಾಕೆಂದರೆ ಇದರಿಂದ ಅಕಾಲಿಕ ಹೆರಿಗೆ ತಡೆಯಬಹುದು. ವಯಸ್ಕ ಮಹಿಳೆಗೆ ಬೇಕಾಗಿರುವ ಶೇ. 36ರಷ್ಟು ಮೆಗ್ನಿಶಿಯಂ ಅಂಶವನ್ನು ಮೊಳಕೆಯುಕ್ತ ಹೆಸರುಬೇಳೆಯು ಒದಗಿಸುವುದು. ಹೆಚ್ಚಿನ ವಯಸ್ಕ ಮಹಿಳೆಯರಲ್ಲಿ ಮೆಗ್ನಿಶಿಯಂನ ಕೊರತೆಯು ಕಂಡುಬರುವುದು. ಇದು ತುಂಬಾ ದುರಾದೃಷ್ಟ. ಒತ್ತಡದ ಮಟ್ಟ ಮತ್ತು ನೋವನ್ನು ಕಡಿಮೆ ಮಾಡಿಕೊಳ್ಳಲು ಮೆಗ್ನಿಶಿಯಂನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಅತೀ ಅಗತ್ಯ. ಜೀರ್ಣಕ್ರಿಯೆ ಆರೋಗ್ಯ, ಹೃದಯ ಸರಿಯಾಗಿ ಕಾರ್ಯನಿರ್ವಹಿಸಲು, ಸ್ನಾಯುಗಳ ಕೋಶ ಸರಿಪಡಿಸಲು ಮತ್ತು ನರವ್ಯವಸ್ಥೆಗೆ ಇದು ಅಗತ್ಯವಾಗಿ ಬೇಕು.
8.ರಕ್ತ ಕಣಗಳನ್ನು ಹೆಚ್ಚಿಸುವುದು
ಹೆಸರು ಕಾಳಿನಲ್ಲಿ ಫೋಲೇಟ್, ವಿಟಮಿನ್ ಬಿ9 ಸಮೃದ್ಧವಾಗಿವೆ. ಇವು ದೇಹದಲ್ಲಿ ಹೊಸ ರಕ್ತಕಣಗಳ ಸೃಷ್ಟಿಗೆ ಸಹಾಯ ಮಾಡುತ್ತವೆ. ಅದರಲ್ಲೂ ಕೆಂಪು ರಕ್ತ ಕಣಗಳನ್ನು ಹೆಚ್ಚುವಂತೆ ಮಾಡುವುದು. ಹಾಗಾಗಿ ಗರ್ಭಿಣಿಯರಿಗೆ ಅತ್ಯುತ್ತಮವಾದದ್ದು. ಯಾರು ಗರ್ಭಾವಸ್ಥೆಯನ್ನು ಹೊಂದಲು ಯೋಜನೆ ಮಾಡುವರೋ ಅಂತಹವರು ಸಹ ತಮ್ಮ ಆಹಾರದಲ್ಲಿ ಹೆಸರು ಕಳನ್ನು ಸೇರಿಸಿಕೊಳ್ಳಬಹುದು. ಆರೋಗ್ಯಕರ ರಕ್ತಕಣಗಳಿಂದಾಗಿ ಮಗುವಿನ ಬೆಳವಣಿಗೆಯು ಉತ್ತಮವಾಗುವುದು. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುವುದು. ಗರ್ಭಾವಸ್ಥೆಯಲ್ಲಿ ಇರುವವರು ಹೆಸರು ಕಾಳಿನ ದೋಸೆಯನ್ನು ಸೇವಿಸಬಹುದು.
9.ಹೃದಯದ ಆರೋಗ್ಯಕ್ಕೆ ಉತ್ತಮ
ಹೆಸರು ಕಾಳಿನಲ್ಲಿ ಫ್ಲೋವೊನೈಡ್ ಆಂಟಿ ಆಕ್ಸಿಡೆಂಟ್ ಅಧಿಕವಾಗಿದೆ. ಇದು ಸ್ವತಂತ್ರ ರಾಡಿಕಲ್ಸನಿಂದ ಉಂಟಾದ ಹಾನಿಯನ್ನು ಸುಲಭವಾಗಿ ತಡೆಯುವುದು. ಜೊತೆಗೆ ಸ್ವತಂತ್ರ ರಾಡಿಕಲ್ಸಗಳನ್ನು ನಿಯಂತ್ರಣದಲ್ಲಿ ಇಡುವುದು. ರಕ್ತವು ಆರೋಗ್ಯಕರ ಸ್ಥಿರತೆಯನ್ನು ಕಾಯ್ದುಕೊಂಡು, ದೇಹದಲ್ಲಿ ಉತ್ತಮ ಸಂಚಾರವನ್ನು ಒಳಗೊಳ್ಳುವಂತೆ ಮಾಡುವುದು. ಇದರಲ್ಲಿ ಇರುವ ವಿಟಮಿನ್ ಬಿ ಗುಣವು ಸಾಮಾನ್ಯ ಹೃದಯ ಬಡಿತದಿಂದ ಕೂಡಿರುವಂತೆ ಮಾಡುವುದು. ಇದರಲ್ಲಿ ಇರುವ ಮ್ಯಾಗ್ನಿಸಿಯಮ್ ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಅಡೆತಡೆಯನ್ನು ನಿವಾರಿಸುವುದು. ಅನಾರೋಗ್ಯಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್ಗಳನ್ನು ತಡೆಯಲು ಸಹಾಯ ಮಾಡುವುದು
ಅಧಿಕ ಪ್ರೋಟೀನ್ಗಳನ್ನು ಒಳಗೊಂಡಿದೆ
10.ಒಂದು ಕಪ್ ಹೆಸರುಕಾಳಿನಲ್ಲಿ ಶೇ 28ರಷ್ಟು ಪ್ರೋಟಿನ್ಗಳಿರುತ್ತವೆ. ದೇಹದಲ್ಲಿ ಪ್ರೋಟೀನ್ಗಳ ಕೊರತೆ ಉಂಟಾದಾಗ ಸಾಕಷ್ಟು ಅನಾರೋಗ್ಯಗಳು ಕಾಣಿಸಿಕೊಳ್ಳುತವೆ. ನಿತ್ಯದ ಆಹಾರದಲ್ಲಿ ಹೆಸರು ಕಾಳನ್ನು ಸೇರಿಸಿಕೊಳ್ಳುವುದರಿಂದ ಅಧಿಕ ರಕ್ತಕಣಗಳ ಉತ್ಪತ್ತಿ ಮತ್ತು ಮೂಳೆಗಳು ಬಲಗೊಳ್ಳುವುದು. ಜೊತೆಗೆ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಅದಕ್ಕಾಗಿ ನೀವು ಮೊಳಕೆ ಬರಿಸಿದ ಹೆಸರುಕಾಳನ್ನು ಸಲಡ್ಗಳ ರೀತಿಯಲ್ಲಿ ಸೇವಿಸುವುದು, ಅಥವಾ ಮೊಳಕೆ ಬರಿಸಿದ ಕಾಳುಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಬಹುದು.
ಅನಗತ್ಯ ತೂಕ ಇಳಿಸಲು ಉತ್ತಮ
11.ಹೆಸರು ಕಾಳಿನಲ್ಲಿ ಕಡಿಮೆ ಪ್ರಮಾಣದ ಕೊಬ್ಬು ಮತ್ತು ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಹಾಗೂ ನಾರಿನಂಶಗಳನ್ನು ಒಳಗೊಂಡಿರುತ್ತವೆ. ನಿತ್ಯದ ಆಹಾರದಲ್ಲಿ ಅಥವಾ ಯೋಜನಾ ಬದ್ಧ ಆಹಾರ ಕ್ರಮದಲ್ಲಿ ಹೆಸರು ಕಾಳನ್ನು ಸೇರಿಸಿಕೊಂಡರೆ ದೇಹದಲ್ಲಿ ಇರುವ ಅನಗತ್ಯ ಕೊಬ್ಬಿನಂಶವು ಕರಗುವುದು. ಇದು ತೂಕ ಇಳಿಸಲು ಅತ್ಯಂತ ಸಹಾಯಕಾರಿ ಎಂದು ವೈದ್ಯರು ಅಭಿಪ್ರಾಯಿಸುತ್ತಾರೆ. ಅಧಿಕ ಸಮಯಗಳ ಕಾಲ ಹಸಿವನ್ನು ತಡೆ ಹಿಡಿಯುವ ಶಕ್ತಿಯನ್ನು ಪಡೆದುಕೊಂಡಿದೆ. ಮೊಳಕೆ ಭರಿಸಿದ ಹೆಸರುಕಾಳು ಹಾಗೂ ಈರುಳ್ಳಿಯ ಮಿಶ್ರಣದಲ್ಲಿ ತಯಾರಿಸಲಾಗುವ ಟಿಕ್ಕಿಯನ್ನು ಸೇವಿಸಬಹುದು. ಕೆಲವು ಅಧ್ಯಯನಗಳ ಪ್ರಕಾರ ಇದು ರಕ್ತದಲ್ಲಿ ಇರುವ ಸಕ್ಕರೆಯ ಪ್ರಮಾಣವನ್ನು ಸಮತೋಲನದಲ್ಲಿ ಇರುವಂತೆ ಮಾಡುವುದು. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ನಿಯಂತ್ರಣದಲ್ಲಿ ಇಡುವುದು
12.ಕಡಿಮೆ ರಕ್ತದೊತ್ತಡ
ಬೇಳೆ ಕಾಳುಗಳು ಸಾಮಾನ್ಯವಾಗಿ ಆಂಟಿ ಆಕ್ಸಿಡೆಂಟ್ಗಳನ್ನು ಸಮೃದ್ಧವಾಗಿ ಪಡೆದುಕೊಂಡಿರುತ್ತವೆ. ಅವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹೆಸರು ಕಾಳು ಎಲ್ ಡಿಎಲ್ ಆಕ್ಸಿಡೀಕರಣವನ್ನು ನಿಯಂತ್ರಣದಲ್ಲಿ ಇಡುವುದು. ಜೊತೆಗೆ ರಕ್ತದ ಉತ್ತಮ ಹರಿವಿಗೆ ಪ್ರಚೋದನೆ ನೀಡುವುದು. ಇದಲ್ಲಿ ಇರುವ ಸಮೃದ್ಧವಾದ ಪೊಟ್ಯಾಸಿಯಮ್ ರಕ್ತದಲ್ಲಿ ಇರುವ ಅನಗತ್ಯ ಸೋಡಿಯಮ್ ಅನ್ನು ನಿವಾರಿಸುವುದು. ಜೊತೆಗೆ ಕಡಿಮೆ ಪ್ರಮಾಣದ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡದಂತಹ ಯಾವ ಸಮಸ್ಯೆ ಇದ್ದರೂ ಅದನ್ನು ನಿಯಂತ್ರಿಸುವುದು. ನಿತ್ಯದ ಆಹಾರದಲ್ಲಿ ಹೆಸರುಕಾಳನ್ನು ಇತರ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳುವುದು ಅಥವಾ ಮೊಳಕೆ ಬರಿಸಿ, ಸಲಾಡ್ ರೀತಿಯಲ್ಲಿ ಸೇವಿಸಬಹುದು.
13.ಹಾರ್ಮೋನ್ಗಳ ಸಮಸ್ಯೆಗೆ ಪರಿಹಾರ
ಹೆಸರು ಕಾಳು ಜಿಂಕ್ ಅಂಶವನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುವುದು. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಮೆಟಾಬೊಲಿಸಮ್ ಶಕ್ತಿಯನ್ನು ಹೆಚ್ಚಿಸುವುದು. ಅಲ್ಲದೆ ಮಹಿಳೆಯರಿಗೆ ಮತ್ತು ಪುರುಷರಿಗೆ ಲೈಂಗಿಕ ಕ್ರಿಯೆಗೆ ಅನುವು ಮಾಡುವ ಹಾರ್ಮೋನ್ಗಳ ಸಮಸ್ಯೆಗಳನ್ನು ನಿವಾರಿಸುವುದು.ಮೋದಿ ಬ್ರಿಗೇಡ್ಸ್ ವಾಟ್ಸ್ ಅಪ್ ಗ್ರೋಪ್ ಮಂಗಳೂರ್ ಮಹಿಳೆಯರಲ್ಲಿ ಆರೋಗ್ಯಕರ ಅಂಡಾಶಯದ ಮೊಟ್ಟೆ ಬಿಡುಗಡೆ ಮಾಡಲು ಸಹಾಯ ಮಾಡುವುದು. ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಗುಜರಾತಿ ಆಹಾರವಾದ ಹೆಸರುಕಾಳಿನ ಸುಖ ಮೂಂಗ್ ಆಹಾರ ಅಥವಾ ಚಪಾತಿಯೊಂದಿಗೆ ಹೆಸರುಕಾಳಿನ ಪಲ್ಯ, ಬಾಜಿಗಳನ್ನು ಸೇವಿಸಬಹುದು.
14.ಉತ್ತಮ ದೃಷ್ಟಿಗೆ ಸಹಾಯ
ಬೇಳೆ ಕಾಳುಗಳಲ್ಲಿ ಇರುಳುಗಣ್ಣು ಸಮಸ್ಯೆಯನ್ನು ನಿವಾರಿಸುವ ಶಕ್ತಿಯಿರುತ್ತದೆ. ಹೆಸರು ಕಾಳಿನಲ್ಲಿ ಇರುವ ಜಿಂಕ್ ಅಂಶವು ವಿಟಮಿನ್ ಎ ಉತ್ಪಾದನೆಗೆ ಸಹಾಯ ಮಾಡುವುದು. ದೇಹದಲ್ಲಿ ಅಗತ್ಯವಾದ ವಿಟಮಿನ್ ಎ ಪ್ರಮಾಣವು ಸಮತೋಲನದಲ್ಲಿ ಇದ್ದಾಗ ರಾತ್ರಿ ಕುರುಡು ನಿವಾರಣೆಯಾಗುವುದು. ಹೆಸರು ಕಾಳನ್ನು ಪಾಲಕ್ ಸೊಪ್ಪುಗಳೊಂದಿಗೆ ಬೆರೆಸಿ ಆಹಾರವನ್ನು ತಯಾರಿಸಿದರೆ ಅದರ ಶಕ್ತಿಯು ದ್ವಿಗುಣವಾಗುವುದು. ಇಲ್ಲವೇ ಮೊಳಕೆ ಬರಿಸಿದ ಹೆಸರುಕಾಳನ್ನು ಸೇವಿಸಬಹುದು.
