Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ತಲಕಾಡು ಶ್ರೀ ಗೋವಿಂದಾನAದ ಸರಸ್ವತಿ ಮಹಾಸ್ವಾಮಿಗಳ ಚಾತುರ್ಮಾಸ್ಯ ಧರ್ಮಪ್ರಚಾರ ಪೂರ್ವಭಾವಿ ಸಭೆ

  • ಗಂಗರ ರಾಜಗುರು ಪೀಠ ತಲಕಾಡು ಮಠದ ಗತಕಾಲದ ವೈಭವ ಮರುಕಳಿಸಲಿ : ಶಾಸಕ ಟಿಎಸ್. ಶ್ರೀವತ್ಸ


ಮೈಸೂರು : ನಗರದ ಜಯನಗರ ಶ್ರೀರಾಮಮಂದಿರದಲ್ಲಿ ಶ್ರೀಶಂಕರಾಚಾರ್ಯ ಭಾಗವತೀಯ ಜಗದ್ಗುರು ಶ್ರೀ ಗೋವಿಂದಾನAದ ಸರಸ್ವತಿ ಮಾಹಸ್ವಾಮಿಗಳ 18ನೇ ಚಾತುರ್ಮಾಸ್ಯದ ಧರ್ಮ ಪ್ರಚಾರದ ಪೂರ್ವಭಾವಿ ಸಭೆ ನಡೆಯಿತು. ತಲಕಾಡು ಶ್ರೀ ಗೋವಿಂದಾನAದ ಸರಸ್ವತಿ ಮಹಾಸ್ವಾಮಿಗಳು ಚಾತುರ್ಮಾಸ್ಯದ ಪೋಸ್ಟರ್ ಮಾಹಿತಿ ಭಿತ್ತಿಪತ್ರ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ ಆಷಾಢ ಶುದ್ಧ ಹುಣ್ಣಿಮೆ ವ್ಯಾಸ ಪೂರ್ಣಿಮೆಯಂದು ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಲಿದ್ದು, ಎರಡು ತಿಂಗಳು ಆಷಾಢ ಭಾದ್ರಪದ ಶ್ರಾವಣ ಮಾಸದ ಹುಣ್ಣಿಮೆಯವರೆಗೂ ಧರ್ಮ ರಕ್ಷಣೆಗಾಗಿ, ನಿರತಂತರವಾಗಿ ವಿವಿಧ ಹೋಮ ಹವನ, ವೇದ ಪ್ರವಚನ, ಅನ್ನದಾಸೋಹ ಸಾಂಸ್ಕöÈತಿಕ ಸಂಗೀತ ಮತ್ತು ಭಜನಾ ಕಾರ್ಯಕ್ರಮಗಳನ್ನ ಆಯೋಜಿಸಿ. ಯುವಸಮುದಾಯ ಮಹಿಳಾ ಸಂಘಗಳನ್ನ ಒಗ್ಗೂಡಿಸಿ ಪ್ರತಿನಿತ್ಯ ವಿಷ್ಣು-ಶಿವ ಸಹಸ್ರನಾಮ, ರುದ್ರಪಾರಾಯಣ, ಹಮ್ಮಿಕೊಂಡು ಯುವಕರಲ್ಲಿ ಧರ್ಮಜಾಗೃತಿ ಮೂಡಿಸಲಾಗುವುದು ಎಂದರು
ನAತರ ಶಾಸಕ ಟಿಎಸ್. ಶ್ರೀವತ್ಸ ಮಾತನಾಡಿ, ತಲಕಾಡಿನ ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾಮ್ ಮಠವು ಶುಕಮಹರ್ಷಿಗಳಿಂದ ಸ್ಥಾಪಿತವಾಗಿ ಗಂಗರ ರಾಜಗುರುಪೀಠವಾಗಿತ್ತು ಎನ್ನುವ ಪ್ರತೀತಿಯಿದೆ. ಅದರ ಗತಕಾಲದ ವೈಭವ ಪರಂಪರೆ ಮತ್ತೊಮ್ಮೆ ಮರುಕಳಿಸುವಂತೆ ಅಭಿವೃದ್ಧಿ ಕಾರ್ಯಗಳನ್ನ ಮಾಡಿರುವ ಗೋವಿಂದಾನAದ ಸರಸ್ವತಿ ಮಹಾಸ್ವಾಮಿಗಳ ಕಾರ್ಯ ಇನ್ನಿತರ ಸಣ್ಣಪುಟ್ಟ ಮಠಗಳಿಗೆ ಮಾದರಿಯಾಗಿದೆ ಎಂದರು.
ಗಜಾರಣ್ಯ ಕ್ಷೇತ್ರವಾಗಿತ್ತು ಕಾಲಕ್ರಮೇಣ ನಶಿಸಿಹೋದಾಗ ಗಜಾರಣ್ಯ ಕ್ಷೇತ್ರವನ್ನ ಮತ್ತೊಮ್ಮೆ ವಿಜೃಂಭಿಸಲು ಆರಾಧ್ಯದೇವರಾದ ಬಾಲಕೃಷ್ಣ, ಗಣಪತಿ ಆದ್ಯಲಕ್ಷಿ÷್ಮ ದೇವಾಲಯ, ದಾಸೋಹ ಭವನ, ಗೋಶಾಲೆ, ಗರುಭವನ, ಭಕ್ತಾಧಿಗಳಿಗೆ ವಸತಿನಿಲಯ ಇವೆಲ್ಲವೂ ನಿರ್ಮಿಸಿ, ಸಾವಿರಾರು ಸಂಖ್ಯೆಯಲ್ಲಿ ಭಕ್ತರಿಗೆ ಸುಸಜ್ಜಿತ ವ್ಯವಸ್ಥೆ ಮಾಡಿರುವ ಶ್ರೀ ಗೋವಿಂದಾನAದ ಸರಸ್ವತಿ ಮಾಹಾಸ್ವಾಮಿಗಳ ಶ್ರಮ, ಇಂದಿನ ಯುವಪೀಳಿಗೆಗೆ ಮತ್ತು ಭಕ್ತಾಧಿಗಳಿಗೆ ಸಾರ್ಥಕವಾಗುತ್ತದೆ ಎನ್ನುವ ಸಾರ್ಥಕತೆಯ ಖುಷಿ ಪ್ರತಿಯೊಬ್ಬರಲ್ಲೂ ಸಮಾಜದಲ್ಲಿ ವ್ಯಕ್ತವಾಗುತ್ತಿದೆ ಎಂದು ಶ್ಲಾಘಿಸಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ಮಾತನಾಡಿ, ಗೋಪಾಲನಂದ ಸರಸ್ವತಿ ಸ್ವಾಮಿಗಳ ನಂತರ 2009ರಲ್ಲಿ 85ನೇ ಪೀಠಾಧಿಪತಿಗಳಾಗಿ ಬಂದAತಹ ಶ್ರೀ ಗೋವಿಂದಾನAದ ಸರಸ್ವತಿ ಮಹಾಸ್ವಾಮಿಗಳು ಮಾಡಿರುವ ಸಾಧನೆ ಮೈಸೂರಿಗರು ಒಮ್ಮೆಯಾದರು ನೋಡಬೇಕು. ಕೇವಲ ಒಂದು ಕೊಠಡಿ ಛತ್ರವಂತಾಗಿ ಶೋಚನೀಯ ಸ್ಥತಿಯಲ್ಲಿದ್ದ ಸ್ಥಳವನ್ನ ಅಭಿವೃದ್ಧಿ ಪಡಿಸಲು ಸವಾಲಗಳನ್ನ ಎದುರಿಸಿ, ಮತ್ತೊಮ್ಮೆ ಗತವೈಭವದ ಇತಿಹಾಸವನ್ನ ಮರುಕಳಿಸುವಂತೆ ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನಮ್ ಮಠವನ್ನ ನಿರ್ಮಾಣ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ತಮಿಳುನಾಡು ಕೇರಳ ಆಂಧ್ರ ತೆಲಂಗಾಣದಲ್ಲಿ ಸಾವಿರಾರು ಭಕ್ತವೃಂದವನ್ನ ಸಂಪಾದಿಸಿದ್ದಾರೆ ಎಂದು ತಿಳಿಸಿದರು.
ವಿಪ್ರ ಮಹಿಳಾ ಸಂಗಮದ ಅಧ್ಯಕ್ಷೆ ಡಾ. ಲಕ್ಷಿ÷್ಮ ದೇವಿ ರವರು ಮಾತನಾಡಿ ತಲಕಾಡಿನಲ್ಲಿ ಗೋವಿಂದಾನAದ ಸರಸ್ವತಿ ಸ್ವಾಮಿಗಳ ಚಾತುರ್ಮಾಸ್ಯ ವ್ರತದಲ್ಲಿ ಮಹಿಳಾ ಭಜನಾ ಮಂಡಳಿಯಿAದ ವಿಷ್ಣು- ಲಲಿತಾ ಸಹಸ್ರನಾಮ, ಶಿವಸಹಸ್ರನಾಮ ರುದ್ರ ಪಾರಾಯಣ ನಡೆಸಲಾಗವುದು, ಸಾರಿಗೆ ಮತ್ತು ವಸತಿ ಪ್ರಸಾದ ವ್ಯವಸ್ಥೆ ಮಾಡಿದ್ದು ಆಸಕ್ತ ಭಜನಾ ಮಂಡಳಿಗಳು 7829067769 ಸಂಪರ್ಕಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯರಾದ ಮಾವಿ. ರಾಂಪ್ರಸಾದ್, ಸೌಭಾಗ್ಯಮೂರ್ತಿ, ವಿದ್ವಾನ್ ಅಂಬಾಪ್ರಸಾದ್, ನಿರೂಪಕ ಅಜಯ್ ಶಾಸ್ತಿç, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕ ರಂಗನಾಥ್ ಸುಬ್ಬರಾವ್, ಮಠದ ಆಡಳಿತಾಧಿಕಾರಿ ವಿಜಯಕುಮಾರ್, ಶ್ರೀ ರಾಮಾನುಜ ಸೊಸೈಟಿ ನಿರ್ದೇಶಕ ಟಿಎಸ್. ಅರುಣ್, ವಿಪ್ರಜಾಗೃತಿ ವೇದಿಕೆ ಅಧ್ಯಕ್ಷ ಮುಳ್ಳೂರು ಸುರೇಶ್, ಗ್ರಾಜ್ಯುಯೇಟ್ ಬ್ಯಾಂಕ್ ನಿರ್ದೇಶಕಿ ವರಲಕ್ಷಿ÷್ಮ.ಆರ್, ಜಯನಗರ ರಾಮಮಂದಿರ ಕಾರ್ಯದರ್ಶಿ ಅರುಣ್ ಶರ್ಮ, ಶೃತಿ, ಹರೀಶ್.ವಿ, ಆಶುಶಯನ, ಗಣೇಶ್, ನಾಗಭೂಷಣ್, ಪ್ರಶಾಂತ್, ವಿಶ್ವನಾಥ್, ಮಿರ್ಲೆ ಪಣೀಶ್, ಸುಚೀಂದ್ರ, ಮಂಜುನಾಥ್, ಪ್ರದೀಪ್, ರಘು, ವನಜ, ಅಂಜನ್, ಸುಬ್ಬಣ್ಣ, ಮುರಳಿ, ಭದ್ರಿ, ವೆಂಕಟೇಶ್ ರಾವ್, ಶೇಷಾಚಲ ಇನ್ನಿತರರು ಇದ್ದರು