Skip to main content

3Kaala News

ಸುಭಾಷಿತ 

ಬದುಕೆಂಬುದು ಚೈನಿನ ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಬೇರೊಬ್ಬರಿಗೆ ಖಾತೆ ಆರೋಪ: ತಹಶೀಲ್ದಾರ್ ನಿಸರ್ಗ ಪ್ರಿಯಗೆ ಮುತ್ತಿಗೆ.

ಪಿರಿಯಾಪಟ್ಟಣ: ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಬೇರೊಬ್ಬರ ಜಮೀನಿಗೆ ಕಂದಾಯ ಇಲಾಖೆ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತ್ತೊಬ್ಬರಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ನಿಸರ್ಗ ಪ್ರಿಯಾ ಅವರನ್ನು ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ತಾಲ್ಲೂಕಿನ ಬೆಟ್ಟದಪುರ ಹೋಬಳಿ ದೊಡ್ಡೇಗೌಡನ ಕೊಪ್ಪಲು ಗ್ರಾಮದ ರೈತ ಡಿ.ಪಿ.ನಾಗೇಶ್ ಕುಟುಂಬದವರು ಸುಮಾರು 50 ರೈತರ ಜೊತೆಗೂಡಿ ತಾಲ್ಲೂಕು ಆಡಳಿತ ಭವನದಲ್ಲಿರುವ ತಹಶೀಲ್ದಾರ್ ನಿಸರ್ಗ ಪ್ರಿಯಾ ಅವರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡಿ.ಪಿ.ನಾಗೇಶ್ ಮಾತನಾಡಿ ನಾಗನಹಳ್ಳಿ ಸರ್ವೆ ನಂಬರ್ 145/2 ರಲ್ಲಿ ನಮ್ಮ ಕುಟುಂಬದ ಸಣ್ಣೇಗೌಡ, ಕಲ್ಲೇ ಗೌಡ ಹಾಗೂ ಜವರೇಗೌಡ ರವರಿಗೆ ಸೇರಿದ 

3.26 ಎಕರೆ ಜಮೀನು ಇದೆ ಇದರಲ್ಲಿ ಕಲ್ಲೇ ಗೌಡ ಎಂಬುವವರು ನಮ್ಮ ತಾತಾ ಜವರೇಗೌಡ ಎಂಬುವವರಿಗೆ ತಮ್ಮ ಭಾಗದ ಜಮೀನನ್ನು ಮಾರಾಟ ಮಾಡಿದ್ದಾರೆ ಇದರ ನಡುವೆ ಅವರ ಮಕ್ಕಳು ಮತ್ತೆ ನಮಗೆ ಭಾಗ ಬರಬೇಕು ಎಂದು ಅವರ ಮಕ್ಕಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು ಆಗ ಮಾನ್ಯ ಘನ ನ್ಯಾಯಾಲಯ ಅವರ ಅರ್ಜಿಯನ್ನು ವಜಾ ಮಾಡಿತು ಹೀಗಿರುವಾಗ 2014 ರಲ್ಲಿ ಕಲ್ಲೇ ಗೌಡ ಮತ್ತು ಸಣ್ಣೇಗೌಡರ ಮಕ್ಕಳು ನ್ಯಾಯಾಲಯದ ಮೊರೆ ಹೋಗಿ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಇದರ ನಡುವೆ ನಮ್ಮದೇ ಗ್ರಾಮದ ಅಣ್ಣೇಗೌಡ ಮತ್ತು ರಾಮೇಗೌಡ ಎಂಬುವವರು 2025 ರಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ. ಈ ಭೂಮಿ ನಮ್ಮ ಕುಟುಂಬದ ಪಿತ್ರಾರ್ಜಿತ ಆಸ್ತಿ ಈ ಆಸ್ತಿಗೂ ಅಣ್ಣೇಗೌಡ ಮತ್ತು ರಾಮೇಗೌಡರಿಗೂ ಯಾವುದೇ ಸಂಬಂಧವಿಲ್ಲ ಹೀಗಿದ್ದರೂ ಬೆಟ್ಟದಪುರ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿ ನಿರಂಜನ್, ಅಂದಿನ ರಾಜಸ್ವ ನಿರೀಕ್ಷಕ ಅಜ್ಮಲ್ ಶರೀಫ್ ಹಾಗೂ ತಹಶೀಲ್ದಾರ್ ನಿಸರ್ಗ ಪ್ರಿಯ ಅವರು ರಾಮೇಗೌಡ ಮತ್ತು ಅಣ್ಣೇಗೌಡರಿಂದ ಲಂಚ ಪಡೆದು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಮ್ಮ ಭೂಮಿಯನ್ನು ಅವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು. 

ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿಗೆ ನುಗ್ಗಿದ ಅವರು ತಹಶೀಲ್ದಾರ್ ನಿಸರ್ಗ ಪ್ರಿಯಾ ಅವರನ್ನು ತರಾಟೆಗೆ ತೆಗೆದುಕೊಂಡು ಈ ಎಲ್ಲಾ ಅವಾಂತರಕ್ಕೆ ನೀವೇ ಕಾರಣ, ಈ ಭೂಮಿಗೆ ಸಂಬಂಧ ಪಡದ ಅಣ್ಣೇಗೌಡ ಮತ್ತು ರಾಮೇಗೌಡ ನಿಮ್ಮ ನೆಂಟರು ಹಾಗಾಗಿ ನೀವು ಅವರಿಗೆ ನಕಲು ದಾಖಲೆಗಳನ್ನು ತಯಾರಿಸಿಕೊಟ್ಟು ನಮಗೆ ಮೋಸ ಮಾಡಿದ್ದೀರಿ ಇದನ್ನು ಸರಿಪಡಿಸದಿದ್ದರೆ ನಮ್ಮ ಕುಟುಂಬದ 30 ಜನರೂ ನಿಮ್ಮ ಹೆಸರನ್ನು ಬರೆದಿಟ್ಟು ಇಲ್ಲೇ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೆಟ್ಟದ ತುಂಗಾ ಮೇಗಳಕೊಪ್ಪಲು ಗ್ರಾಮದ ಮುಖಂಡ ಚಿಕ್ಕೇಗೌಡ ಹಾಗೂ ರೈತ ಸಂಘದ ಮುಖಂಡ ದೇವರಾಜೇಗೌಡ ರವರು ಮದ್ಯ ಪ್ರವೇಶ ಮಾಡಿ ತಹಶೀಲ್ದಾರ್ ನಿಸರ್ಗ ಪ್ರಿಯಾ ಅವರೊಂದಿಗೆ ರಾಜಿ ಸಂಧಾನ ಮಾಡಿ ಅವರ ಮನವೊಲಿಸಿ ಈ ವಿಷಯವನ್ನು ಶಾಸಕ ಕೆ.ವೆಂಕಟೇಶ್ ರವರೊಂದಿಗೆ ಚರ್ಚಿಸಿ ಇವರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದೇವೆ. ಇಡೀ ಗ್ರಾಮದ ಜನರಿಗೆ ಗೊತ್ತಿದೆ ಇದು ಇವರ ಕುಟುಂಬದ ಆಸ್ತಿ ಇವರ ಪೂರ್ವಿಕರು ಹತ್ತಾರು ವರ್ಷಗಳಿಂದ ಈ ಭೂಮಿಯಲ್ಲಿ ಅನುಭವ ಹೊಂದಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ ದಾಖಲೆಗಳು ವ್ಯತ್ಯಾಸವಾಗಿ ಇವರಿಗೆ ತೊಂದರೆಯಾಗಿದೆ ಇದನ್ನು ಸರಿಪಡಿಸುವ ಹೊಣೆ ನಿಮ್ಮ ಮೇಲಿದೆ ಹಾಗಾಗಿ ಇವರಿಗೆ ಅನ್ಯಾಯ ಮಾಡಬೇಡಿ ಎಂದು ಮನವರಿಕೆ ಮಾಡಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಪ್ರಭುಗೌಡ, ಮಧು, ಬಸವರಾಜು, ನಾಗೇಗೌಡ, ಕಲ್ಲೇಶ್, ಈರಯ್ಯ ಚಾರ್, ಯಶೋಧರ್, ಸಾಲು ಕೊಪ್ಪಲು ಕಿಟ್ಟಿ, ಪುಟ್ಟರಾಜು, ಅಲ್ಪನಾಯಕನಹಳ್ಳಿ ಭೀಮಾ, ಡಿ.ಜಿ.ಕೊಪ್ಪಲು ಪ್ರಸನ್ನ, ರೇವಣ್ಣ, ಸತೀಶ್, ಮಧು, ಸುರೇಶ್, ನಾಗರಾಜ್, ಹರೀಶ್, ನಾಗೇಶ್, ಕುಟುಂಬದಸ್ಥರಾದ ಜವರೇಗೌಡ, ಸಣ್ಣ ತಮ್ಮೇಗೌಡ, ಪುಟ್ಟ ತಮ್ಮೇಗೌಡ, ಲಲಿತಮ್ಮ, ತಾಯಮ್ಮ, ಲೋಕೇಶ್, ಸವಿತಾ, ಯಶೋಧಾ, ಕಲ್ಪನಾ, ತಮ್ಮೇಗೌಡ, ಜಗಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.