Skip to main content

3Kaala News

ಸುಭಾಷಿತ 

ಬದುಕೆಂಬುದು ಚೈನಿನ ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಡಕೊಳ ಗ್ರಾಮದ ಹೆದ್ದಾರಿಯಲ್ಲಿ ವ್ಯಾಪಕ ಅಪಘಾತ ದೂರಿನ ಹಿನ್ನೆಲೆ;ಸ್ಥಳಕ್ಕೆ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ, ಪರಿಶೀಲನೆ


ಮೈಸೂರು; ತಾಲೂಕಿನ ಕಡಕೊಳ ಗ್ರಾಮದ ಮೇಲೆ ಹಾದು ಹೋಗಿರುವ ರಾಷ್ಟಿಯ ಹೆದ್ದಾರಿ 766 ರಲ್ಲಿ ಸಂಚಾರದ ಒತ್ತಡ ಹಾಗೂ ವ್ಯಾಪಕ ವಾಹನ ದಟ್ಟಣೆ ಯಿಂದಾಗಿ ಪದೇಪದೇ ಅಪಘಾತ ಸಂಭವಿಸಿ ಸಾವು ನೋವುಗಳು ಜಾಸ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಇಂದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಇಲ್ಲಿ ನಡೆದಿರುವ ಅಪಘಾತಗಳ ಕುರಿತು ಅಂಕಿ ಅಂಶಗಳ ಸಮೇತ ಕೂಲಂಕುಶವಾಗಿ ಪರಿಶೀಲಿಸಿದರು.
ಬಳಿಕ ಕಡಕೊಳ ಗ್ರಾಮದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ನಡೆದ ತಾಲೂಕು ಮಟ್ಟದ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ರವರಿಗೆ ಗ್ರಾಮಸ್ಥರು ಇಲ್ಲಿ ನಡೆಯುತ್ತಿರುವ ಅಪಘಾತಗಳು, ಅದರಿಂದ ಆಗುತ್ತಿರುವ ಸಾವು-ನೋವುಗಳು ಹಾಗೂ ಅವುಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತುಮನವರಿಕೆ ಮಾಡಿದರು . ಜೊತೆಗೆ ರಾಷ್ಟಿçÃಯ ಹೆದ್ದಾರಿಯ ವತಿಯಿಂದ ಬೀದಿ ದೀಪಗಳ ಅಸಮರ್ಪಕ ನಿರ್ವಹಣೆಯಿಂದ ಪ್ರಮುಖವಾಗಿ ಅಪಘಾತಕ್ಕೆ ಕಾರಣವಾಗುತ್ತಿದ್ದು. ಜೊತೆಗೆ ಸಿಗ್ನಲ್ ಲೈಟ್ ಅಳವಡಿಕೆ ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ಸದರಿ ವಿಚಾರದ ಗಂಭೀರತೆ ಬಗ್ಗೆ ಮನಗಂಡ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ರವರು, ಕಾರ್ಯಕ್ರಮ ಮುಗಿದ ನಂತರ ಕಡಕೊಳ ಗ್ರಾಮದ ಗ್ರಾಮದ ಬಸ್ ನಿಲ್ದಾಣ ಹಾಗೂ ಕೈಗಾರಿಕಾ ಪ್ರದೇಶದ ಪ್ರವೇಶ ದ್ವಾರ ಹಾಗೂ ಟಿವಿಎಸ್ ಕಾರ್ಖಾನೆಯ ತಿರುವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆಯ ಬಗ್ಗೆ ಖುದ್ದು ಮಾಹಿತಿಯನ್ನು ಪಡೆದರು.
ಕೂಡಲೇ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದವರಿಗೆ ತಿಳಿಸಿ, ಬೀದಿ ದೀಪದ ವ್ಯವಸ್ಥೆಯ ಬಗ್ಗೆ ಹಾಗೂ ಕಡಕೊಳ ಗ್ರಾಮದ ಪ್ರಮುಖ ಸ್ಥಳದಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ರಾಜಣ್ಣ., ವೃತ್ತ ನಿರೀಕ್ಷಕ ಡಿ.ಬಿ.ಜಯಪ್ರಕಾಶ್, ಸಬ್ ಇನ್ಸ್ ಪೆಕ್ಟರ್ ಸುನಿಲ್, ಕಡಕೊಳ ಗ್ರಾಮದ ಮುಖಂಡರುಗಳಾದ ಜಿ. ಪಂ ಮಾಜಿ ಸದಸ್ಯ ಪಟೇಲ್ ಜವರೇಗೌಡ, ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯ ಕಡಕೊಳ ಕುಮಾರ ಸ್ವಾಮಿ, ಕೆ ಐ ಎ ಡಿ ಬಿ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಕೆ. ಆರ್ ಹರೀಶ್, ಗ್ರಾಮ ಪಂಚಾಯತಿ ಮಾಜಿ ಸದಸ್ಯರುಗಳಾದ ಶಿವಕುಮಾರ್, ರವಿ ಗೌಡ, ಯುವ ಮುಖಂಡರುಗಳಾದ ನಂಜಪ್ಪ ಎಲ್ಲ ನಾಯಕ್, ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.