Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹವ್ಯಾಸಿ ರಂಗಭೂಮಿಯೇ ರಂಗಚಳುವಳಿಯ ಜೀವಾಳ: ಪ್ರಸಾದ್ ಕುಂದೂರುಸಿಜಿಕೆ ನೆನಪಿನ ಗ್ರೀಷ್ಮ ರಂಗೋತ್ಸವ2026’ಕ್ಕೆ ಅದ್ಧೂರಿ ಚಾಲನೆ

ಮೈಸೂರು: ವೃತ್ತಿಪರ ರೆಪರ್ಟರಿಗಳ ಕೊಡುಗೆ ಮಹತ್ವದ್ದಾಗಿದ್ದರೂ, ರಂಗಚಳುವಳಿಯ ಉತ್ಸಾಹ, ಜೀವಂತಿಕೆ ಮತ್ತು ಸೃಜನಶೀಲತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಹವ್ಯಾಸಿ ರಂಗಭೂಮಿಯೇ ಎಂದು ಹಿರಿಯ ರಂಗಕರ್ಮಿ ಹಾಗೂ ನಿರಂತರ ಫೌಂಡೇಶನ್ ನಿರ್ದೇಶಕ ಪ್ರಸಾದ್ ಕುಂದೂರು ಹೇಳಿದರು. ನಗರದ ರಂಗಾಯಣದ ಭೂಮಿಗೀತ ರಂಗಮAದಿರದಲ್ಲಿ ಕರ್ನಾಟಕ ಸರ್ಕಾರದ ರಂಗಾಯಣ ಸಂಸ್ಥೆ ಆಯೋಜಿಸಿರುವಸಿಜಿಕೆ ನೆನಪಿನ ಗ್ರೀಷ್ಮ ರಂಗೋತ್ಸವ2026’ನ್ನು ಉದ್ಘಾಟಿಸಿ ಮಾತನಾಡಿದ ಅವರು, ರಂಗಾಯಣದ ಆರಂಭಿಕ ದಿನಗಳನ್ನು ಸ್ಮರಿಸಿ, ಬಿ.ವಿ. ಕಾರಂತ ಅವರು ವೃತ್ತಿಪರ ರೆಪರ್ಟರಿಯ ಜೊತೆಗೆ ಹವ್ಯಾಸಿ ತಂಡಗಳಿಗೂ ಸಮಾನ ಗೌರವ ನೀಡಿದ್ದರು. ವೃತ್ತಿಪರ ಹಾಗೂ ಹವ್ಯಾಸಿ ರಂಗಭೂಮಿಯ ನಡುವೆ ಪರಸ್ಪರ ಕಲಿಕೆ ಮತ್ತು ಸಹಯೋಗದ ಸಂಬAಧ ಇರಬೇಕು ಎಂಬುದು ಅವರ ಆಶಯವಾಗಿತ್ತು ಎಂದು ಹೇಳಿದರು.
ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹವ್ಯಾಸಿ ಕಲಾವಿದರು ಮತ್ತು ನಿರ್ದೇಶಕರ ಶ್ರಮದಿಂದಲೇ ರಂಗಚಳುವಳಿ ಇಂದಿಗೂ ಜೀವಂತವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ರಂಗ ನಿರ್ದೇಶಕಿ ಕೆ.ಆರ್. ಸುಮತಿ ಮಾತನಾಡಿ, 1970ರ ದಶಕದ ಕಾಲೇಜು ರಂಗಚಳುವಳಿಯು ಕನ್ನಡ ರಂಗಭೂಮಿಗೆ ಹೊಸ ಪೀಳಿಗೆಯನ್ನು ನೀಡಿದ ಮಹತ್ವದ ಘಟ್ಟವಾಗಿತ್ತು ಎಂದು ಹೇಳಿದರು.
ಕೈಲಾಸಂ ಮತ್ತು ಶ್ರೀರಂಗ ಅವರ ಏಕಾಂಕ ನಾಟಕಗಳು, ಕಾಲೇಜುಗಳ ಸಾಹಿತ್ಯ ಅಧ್ಯಾಪಕರ ಪ್ರೋತ್ಸಾಹ, ಬೆಂಗಳೂರಿನ ಟ್ರೋಫಿ ಸ್ಪರ್ಧೆಗಳು ಹಾಗೂ ಮೈಸೂರಿನ ಅಮರಕಲಾ ಸಂಘದ ಚಟುವಟಿಕೆಗಳು ಅನೇಕ ಯುವ ಪ್ರತಿಭೆಗಳನ್ನು ರಂಗಭೂಮಿಯತ್ತ ಸೆಳೆದವು ಎಂದು ನೆನಪಿಸಿದರು.
ರಂಗಭೂಮಿಯಲ್ಲಿ ಮಹಿಳೆಯರ ಪ್ರಾತಿನಿಧ್ಯದ ಕುರಿತು ಕಳವಳ ವ್ಯಕ್ತಪಡಿಸಿದರು. ಮಹಿಳೆಯರನ್ನು ಇನ್ನೂ ಹೆಚ್ಚಾಗಿ ನಟನೆಯ ಪಾತ್ರಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ನಾಟಕ ನಿರ್ಮಾಣ, ರಂಗಸAಘಟನೆ ಮತ್ತು ನಿರ್ದೇಶನದಂತಹ ಪ್ರಮುಖ ಜವಾಬ್ದಾರಿಗಳಲ್ಲಿ ಅವರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಬಳಿಕ ನಿರಂತರ ಫೌಂಡೇಶನ್ ತಂಡದಿAದ ಮಹೇಶ್ ಎಲ್ಕುಂಚ್ವಾರ್ ಅವರ ಮರಾಠಿ ಮೂಲದ `ಪಾರ್ಟಿ’ ನಾಟಕ ಪ್ರದರ್ಶನಗೊಂಡಿತು. ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿರುವ ಈ ನಾಟಕವನ್ನು ಚಿದಂಬರರಾವ್ ಜಂಬೆ ನಿರ್ದೇಶಿಸಿದ್ದರು. ಆಧುನಿಕ ಸಮಾಜದ ಮುಖವಾಡಗಳು ಮತ್ತು ವ್ಯಕ್ತಿತ್ವಗಳ ಸಂಘರ್ಷವನ್ನು ಅನಾವರಣಗೊಳಿಸಿದ ನಾಟಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಕಾರ್ಯಕ್ರಮದಲ್ಲಿ ರಂಗಸಮಾಜದ ಸದಸ್ಯ ಎಚ್.ಎಸ್. ಸುರೇಶ್‌ಬಾಬು, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ, ರಂಗಾಯಣದ ಮಾಜಿ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್ ಉಪಸ್ಥಿತರಿದ್ದರು. ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅಧ್ಯಕ್ಷತೆ ವಹಿಸಿದ್ದರು.