ಅಧ್ಯಕ್ಷರಾಗಿ ಬಲರಾಂ, ಕಾರ್ಯದರ್ಶಿಯಾಗಿ ಬಿ.ಎಸ್.ಹರೀಶ್

ಪಿರಿಯಾಪಟ್ಟಣ:ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಪಟ್ಟಣದ ಕನಕ ಭವನದಲ್ಲಿ ನೆರವೇರಿತು. ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ನೂತನ ಅಧ್ಯಕ್ಷರಾಗಿ ಕಿರನಲ್ಲಿ ಬಲರಾಮ ಕಾರ್ಯದರ್ಶಿಯಾಗಿ ಬಿ.ಎಸ್.ಹರೀಶ್ ಅಧಿಕಾರ ಸ್ವೀಕರಿಸಿದರು.
ನೂತನ ಪದಾಧಿಕಾರಿಗಳಿಗೆ ಯಶಸ್ವಿನಿ ಸೋಮಶೇಖರ್ ಪ್ರಮಾಣವಚನ ಬೋಧಿಸಿ ಮಾತನಾಡಿದ ಅವರು ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ಮಾನವೀಯ ಸೇವೆಗೆ ಹೆಸರಾಗಿದೆ. ನೂತನ ಪದಾಧಿಕಾರಿಗಳು ಸೇವೆಯ ಮೂಲಕ ಸಮಾಜದಲ್ಲಿ ಶಾಶ್ವತ ಮತ್ತು ಸಕಾರಾತ್ಮಕ ಬದಲಾವಣೆ ತರುವ ಕಾರ್ಯಗಳಲ್ಲಿ ಹೆಚ್ಚಿನ ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು. ರೋಟರಿ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಸಂತೋಷ, ತೃಪ್ತಿಯನ್ನು ಹೊಂದಬೇಕು. ರೋಟರಿ ಸಂಸ್ಥೆಯು ಸದಸ್ಯರ ಹಾಗೂ ದಾನಿಗಳ ಸಹಕಾರದಿಂದ ವಿವಿಧ ಸಾಮಾಜಿಕ ಸೇವ ಕಾರ್ಯಗಳನ್ನು ಮಾಡಿದೆ ಎಂದು ಹೇಳಿದರು
ನೂತನ ಅಧ್ಯಕ್ಷ ಬಲರಾಂ ಮಾತನಾಡಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ, ಯುವಜನ ಅಭಿವೃದ್ಧಿ, ಸಮಾಜಮುಖಿ ಸೇವಾ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ವರ್ಷಪೂರ್ತಿ ಅರ್ಥಪೂರ್ಣ ಹಾಗೂ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಎಲ್ಲ ಸದಸ್ಯರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಜಗನ್, ಜೋನಲ್ ಲೆಪ್ಟಿನೆಂಟ್ ಎಂ.ಎಂ.ರಾಜೇಗೌಡ, ಜಿಲ್ಲಾ ಗೌರ್ನರ್ ತಿರುಮಲಾಪುರ ನೂತನ ಕಾರ್ಯದರ್ಶಿ ಬಿ.ಎಸ್.ಹರೀಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಗೌರ್ನರ್ ರಾಘವೇಂದ್ರ, ನಿರ್ಗಮಿತ ಕಾರ್ಯದರ್ಶಿ ಚೇತನ್ ಕುಮಾರ್ ಪದಾಧಿಕಾರಿಗಳಾದ ಬೆಕ್ಯಾ ಸತೀಶ್, ಸತ್ಯನಾರಾಯಣ್, ಗುರುದತ್, ಬಸವೇಗೌಡ, ಚಂದ್ರು, ವಿನಯ್ ಶೇಖರ್, ಎಂ.ಪಿ.ರಾಜು, ಮಧು ಗೌಡ, ನಾಗರಾಜ್, ಸುರೇಶ್, ರಾಜೇಗೌಡ, ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.