
ಮೈಸೂರು; ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಶೇ 3ರಿಂದ 7 ಕ್ಕೆ ಹೆಚ್ಚಿಸಿರುವ ಕುರಿತು ಜುಲೈ 15 ರಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ಅಲ್ಲಿನ ತೀರ್ಮಾನ ನಮ್ಮ ಪರವಾಗಿ ಬಿದ್ದರೆ ವಿಜಯೋತ್ಸವ ಮಾಡುತ್ತೇವೆ, ವ್ಯತಿರಿಕ್ತವಾದ ತೀರ್ಮಾನ ಬಂದರೆ ಜುಲೈ 16 ಹಾಗೂ 17 ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ, ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಹೇಳಿದರು.
ಮಂಗಳವಾರ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಎಸ್ಟಿ ಮೋರ್ಚಾದಿಂದ ಏರ್ಪಡಿಸಲಾಗಿದ್ದ
ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ.ಪಂಗಡಕ್ಕೆ ಬಿಜೆಪಿ ಸರ್ಕಾರ ಹೆಚ್ಚಳ ಮಾಡಿದ್ದ ಮೀಸಲಾತಿಗೆ ಹೈಕೋರ್ಟ್ನಲ್ಲಿ ತಡೆಯಾಜ್ಞೆಯನ್ನು ತಂದಿದ್ದಾರೆ. ಇದರ ಬಗ್ಗೆ ನಾವು ಹೋರಾಟ ನಡೆಸಿದ್ದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಈಗ ವಕೀಲರೊಬ್ಬರನ್ನು ನೇಮಕ ಮಾಡಿದ್ದಾರೆ. ಜುಲೈ 15 ರಂದು ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ. ಅಲ್ಲಿ ಏನಾಗುತ್ತದೆ ಎಂದು ನೋಡಿಕೊಂಡು ಮುಂದಿನ ಹೋರಾಟದ ಬಗ್ಗೆ ರೂಪು ರೇಷೆಗಳನ್ನು ತೀರ್ಮಾನಿಸಲಾಗುವುದು ಎಂದು ಹೇಳಿದರು. ಎಸ್ಟಿ, ಎಸ್ಸಿ, ಅಹಿಂದಗೆ ಕಾಂಗ್ರೆಸ್‌ನಿAದ ಅನ್ಯಾಯವಾಗಿದೆ. ಪದೇ ಪದೇ ಈ ಸಮುದಾಯಗಳು ನಿರ್ಲಕ್ಷö್ಯಕ್ಕೆ ಒಳಗಾಗಿವೆ. ಜನಸಂಖ್ಯೆ ಆಧಾರದ ಮೇಲೆ ನಮಗೆ ಮೀಸಲಾತಿ ಸಿಗಬೇಕು. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಂಸದ ಬಿ.ವಿ.ನಾಯಕ್ ಮಾತನಾಡಿ, ಪರಿಶಿಷ್ಟ ಪಂಗಡದ ಅಭಿವೃದ್ಧಿ ಕಾಂಗ್ರೆಸ್ ಆದ್ಯತೆ ನೀಡದೆ, ತಾರತಮ್ಯ ಮಾಡುತ್ತಿದೆ. ಶೈಕ್ಷಣಿಕ, ಸಾಮಾಜಿ, ಆರ್ಥಿಕ, ಔದ್ಯೋಗಿಕವಾಗಿ ನಮ್ಮ ಸಮಾಜ ಹಿಂದುಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ P್ಫ್ರಂತಿ ಮಾಡಲಿಲ್ಲ. ಅವರ ನಾಯಕತ್ವ ಕೇವಲ ಅಧಿಕಾರಕ್ಕೆ ಸೀಮಿತವಾಗಿತ್ತು. ದಲಿತರಿಗೆ ನ್ಯಾಯ ದೊರಕಿಸಿಕೊಡಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ ಮಾತನಾಡಿ, ಮುಖ್ಯಮಂತ್ರಿ ಆಗಿದ್ದ ಬಸವರಾಜು ಬೊಮ್ಮಯ್ಯನವರು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಮೂರರಿಂದ ಏಳಕ್ಕೆ ಹೆಚ್ಚಿಸಿ ಪುಣ್ಯಾತ್ಮರಾದರು ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಮೀಸಲಾತಿಯನ್ನು ಇಳಿಸುವ ಮೂಲಕ ಪಾಪತ್ಮರಾಗಿದ್ದಾರೆ ಎಂದು ಟೀಕಿಸಿದರು.
ಶಾಸಕ ರಾಜೇಗೌಡ ನಾಯಕ್ ಮಾತನಾಡಿ,
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪರ ಎಂದು ಹೇಳುವ ಕಾಂಗ್ರೆಸ್‌ನವರು ಯಾಕೆ ನಮ್ಮ ಸಮಾಜಗಳ ಮೀಸಲಾತಿಯನ್ನು ಹೆಚ್ಚಿಸಿಲ್ಲ ಎಂದು ಪ್ರಶ್ನಿಸಿದರು. ಇಡೀ ಜಗತ್ತಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿಯನ್ನು ನೀಡಿದ್ದು ಮೈಸೂರಿನ ಮಹಾರಾಜರು. ಆದರೆ ಮೈಸೂರಿನ ಮುಖ್ಯಮಂತ್ರಿ ಆಗಿದ್ದವರು ಈ ಸಮಾಜದವರಿಗೆ ಮೀಸಲಾತಿ ಹೆಚ್ಚಳವನ್ನು ಜಾರಿ ಮಾಡಲಿಲ್ಲ. ಕಾಂಗ್ರೆಸ್ ನವರು ಮೀಸಲಾತಿಯನ್ನು ಇಳಿಸುತ್ತಿದ್ದಾರೆ, ಆ ಮೂಲಕ ಸಮಾಜದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬಿಜೆಪಿಯವರು ಈ ಸಮಾಜದವರಿಗೆ ಮೀಸಲಾತಿಯನ್ನು ಹೆಚ್ಚಳ ಮಾಡಿದರೆ, ಕಾಂಗ್ರೆಸ್ ನವರು ಮೀಸಲಾತಿಯನ್ನು ಇಳಿಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಶಾಸಕರು ಸಚಿವರು ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು. ಪರಿಶಿಷ್ಟ ಪಂಗಡಕ್ಕೆ ಹೆಚ್ಚಳ ಮಾಡಿರುವ ಮೀಸಲಾತಿಯನ್ನು ಜಾರಿಗೊಳಿಸುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು
ಕಾಂಗ್ರೆಸ್‌ನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಅವರು ಊಟಕ್ಕೆ ಕೂರಿಸಿ, ನೀನು ಊಟ ಮಾಡಬೇಕು ಇವಾಗ ನೀವು ದಲಿತರು ಎಂದು ಕಳಿಸಿ ಬಿಡುತ್ತಾರೆ ಎಂದರು.
ಮಾಜಿ ಶಾಸಕ ರಾಜೇಶ್ ಮಾತನಾಡಿ, ನಮ್ಮ ಸಮಾಜ ಈಗ ಸಂಕಷ್ಟದಲ್ಲಿದೆ ಬಿಜೆಪಿ ಸರ್ಕಾರ ಪರಿಶಿಷ್ಟ ಪತ್ರದಲ್ಲಿ ಕೊಟ್ಟರೆ ಕಾಂಗ್ರೆಸ್ನವರು 3ಕ್ಕೆ ಇಳಿಸಿದ್ದಾರೆ. ಕಾಂಗ್ರೆಸ್ ನಲ್ಲಿರುವ ಶಾಸಕರು ನಿಮಗೆ ಧ್ವನಿ ಬೇಕಾಗಿದೆ. ಸಮಾಜದ ಮುಂದಿನ ಪೀಳಿಗೆ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಕೂಡ ಪಕ್ಷಾತೀತವಾಗಿ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕೆ ಅನ್ಯಾಯಕಾರ. ಎಸ್‌ಟಿ ಮೀಸಲಾತಿ ಕಾನೂನು ಹೋರಾಟದಲ್ಲಿ ಸರ್ಕಾರದಿಂದ ಸೂಕ್ತ ವಾದ ಮಂಡಿಸಲಿಲ್ಲ, ಅದೇ, ಮುಡಾ ಹಗರಣದಲ್ಲಿ ದೆಹಲಿಯಿಂದ ವಕೀಲರನ್ನು ಕರೆಸಿದರು, ಅವರ ಸ್ವಾರ್ಥ ಧೋರಣೆಯಿಂದ ಮೂಲೆಗುಂಪಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಎಸ್ ಟಿ ಮೋರ್ಚಾದ ಮಾಜಿ ಅಧ್ಯಕ್ಷ ತಿಪ್ಪರಾಜು ಮಾತನಾಡಿ,
ಈ ಜಗತ್ತಿಗೆ ಯಾವ ರೀತಿ ಶ್ರೀ ರಾಮನನ್ನು ಪರಿಚಯ ಮಾಡಿಕೊಟ್ಟ ನಮ್ಮ ಸಮಾಜ ಮತ್ತೊಮ್ಮೆ ಅನ್ಯಾಯಕ್ಕೆ ಒಳಗಾಗಿದೆ. ಈ ಕಾಂಗ್ರೆಸ್ ಸರಕಾರ ನಮ್ಮ ಮೀಸಲಾತಿಯನ್ನು ಕಸಿದುಕೊಂಡು ನಿರ್ಲಕ್ಷ ಮಾಡಿದೆ. ಈ ಬಗ್ಗೆ ಜನಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದರು.
ಸಮಾವೇಶದಲ್ಲಿ ಮಾಜಿ ಸಚಿವರಾದ ಶ್ರೀರಾಮುಲು, ಎನ್.ಮಹೇಶ್, ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ರಾಮಚಂದ್ರಪ್ಪ, ಪ್ರತಾಪ್‌ಗೌಡ ಪಾಟೀಲ್, ರಾಮಕೃಷ್ಣ, ನಿಗಮ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಅಪ್ಪಣ್ಣ, ಎಸ್.ಮಹದೇವಯ್ಯ, ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಾರ್ಯದರ್ಶಿ ನಾಗೇಂದ್ರ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ಮಲ್ಲೇಶ್ ನಾಯಕ, ಎಂ.ರಾಮಚAದ್ರ, ಆರ್. ಸುಂದರ್ ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.