
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ಎಂ.ಕೆ.ಸವಿತಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಅವರು ಇಂದು ಅಧಿಕಾರ ವಹಿಸಿಕೊಂಡು, ನಗರ ಆಯುಕ್ತರಾಗಿದ್ದ ಶೇಖ್ ತಸ್ವೀರ್ ಆಸಿಫ್ ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾ ಗಿದ್ದ ಎಂ.ಕೆ. ಸವಿತಾ ಅವರನ್ನು ಆಯುಕ್ತರ ಹುದ್ದೆಗೆ ನೇಮಿಸಲಾಗಿದೆ. ಅವರು ನಗರಪಾಲಿಕೆಯ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಶೇಖ್ ತಸ್ವೀರ್ ಆಸಿಫ್ ಅಧಿಕಾರ ಹಸ್ತಾಂತರಿಸಿದರು. ಸವಿತಾ ಅವರು ಈ ಹಿಂದೆ ತಿ.ನರಸೀಪುರ ತಾಲ್ಲೂಕು ತಹಸಿಲ್ದಾರ್, ನಗರಪಾಲಿಕೆ ಹೆಚ್ಚುವರಿ ಆಯುಕ್ತರಾಗಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿಯಾಗಿ, ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.