Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿದ್ಯಾರ್ಥಿಗಳು ತಂದೆ ತಾಯಿ, ಗುರು, ಸಮಾಜದ ಋಣವನ್ನು ತೀರಿಸುವ ಕೆಲಸ ಮಾಡಬೇಕು:  ಪ್ರಾಂಶುಪಾಲ ನಾಗರಾಜ್ ರಾವ್ ಕಲ್ಕಟ್ಟೆ

ಪಿರಿಯಾಪಟ್ಟಣ : ವಿದ್ಯಾರ್ಥಿಗಳು ತಂದೆ ತಾಯಿ ಹಾಗೂ ಗುರುಗಳ ಋಣದ ಜೊತೆಗೆ ಸಮಾಜದ ಋಣವನ್ನು ತೀರಿಸುವ ಕೆಲಸ ಮಾಡಬೇಕು ಎಂದು ಕಳಸಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ರಾವ್ ಕಲ್ಕಟ್ಟೆ ತಿಳಿಸಿದರು 

 ತಾಲೂಕಿನ ಬೆಟ್ಟದಪುರದ ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ 2ನೇ ಘಟಕ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಉಪನ್ಯಾಸಕರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಹೆಚ್ಚಿನ ಶ್ರಮ ವಹಿಸುತ್ತಾರೆ. ಆ ಶ್ರಮಕ್ಕೆ ವಿದ್ಯಾರ್ಥಿಗಳು ಗೌರವ ಕೊಡುವುದರ ಮೂಲಕ ಉತ್ತಮ ಫಲಿತಾಂಶದ ಕಡೆಗೆ ಗಮನವಹಿಸಬೇಕು ಇನ್ನು ಎನ್ಎಸ್ಎಸ್ ಮೂಲಕ ಗಾಂಧೀಜಿಯ ಆದರ್ಶದಂತೆ ಗ್ರಾಮಗಳ ಸ್ವಚ್ಛತೆಯನ್ನು ಕಾಪಾಡುವುದರ ಮೂಲಕ ಗ್ರಾಮಸ್ಥರ ವಿಶ್ವಾಸ ಗಳಿಸುವುದರ ಜೊತೆಗೆ ಗ್ರಾಮೀಣ ಭಾಗದ ಜನರಿಗೆ ಸ್ವಚ್ಛತೆ ಅರಿವನ್ನು ಮೂಡಿಸಬೇಕು ಎಂದರು.

 ನಿವೃತ್ತ ಮುಖ್ಯ ಶಿಕ್ಷಕ ಎಂ ಮಲ್ಲೇಶ್ ಮಾತನಾಡಿ  ಉಪನ್ಯಾಸಕರು ಪಡುವ ಶ್ರಮಕ್ಕೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ನೀಡುವ ಮೂಲಕ ಗೌರವ ಕೊಡಬೇಕು ಜೊತೆಗೆ ಹಿರಿಯರನ್ನು ಗೌರವಿಸುವುದು ರೂಡಿಸಿಕೊಳ್ಳಬೇಕು ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶಗಳಿದ್ದು, ಅವುಗಳ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು. 

 ಇದೇ ಸಂದರ್ಭದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.

 ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ ವಿ ಮಂಜುನಾಥ್, ಕಾರ್ಯದರ್ಶಿ ಎವಿ ಛಾಯಾ, ಚಿಕ್ಕಮಗಳೂರು ಜಿಲ್ಲೆಯ ಆವತಿ ಶಾಲೆಯ ಶಿಕ್ಷಕಿ ರೇಖಾ ನಾಗರಾಜ್ ರಾವ್, ಪ್ರಾಂಶುಪಾಲ ರಾಜ ಎಸ್ ಕೆ, ಮುಖ್ಯ ಶಿಕ್ಷಕರಾದ ಎಸ್ ಆರ್ ವೆಂಕಟೇಶ್, ಸಿ ಆರ್ ಕುಮಾರ್, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಯಶವಂತ ಕುಮಾರ್, ಸತೀಶ್, ಸಹಶಿಬಿರಾಧಿಕಾರಿಗಳಾದ ಕುಬೇರ್, ಬಸವರಾಜ್,ಉಪನ್ಯಾಸಕರಾದ ಶಿವಕುಮಾರ್, ವಸಂತ್, ಸುನಿಲ್, ರಾಮೇಗೌಡ, ಹರ್ಷಿತ, ಪ್ರತಾಪ್, ಶಿವನಂಜು, ರಶ್ಮಿ, ಅರುಣ್, ಸೈಫುಲ್ಲಖಾನ್, ಅಕ್ಷತಾ, ರಮ್ಯ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.