Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅಪಾರ: ರೊ.ಬಲರಾಮ್

ಪಿರಿಯಾಪಟ್ಟಣ: ರೋಗಿಗಳನ್ನು ಉಳಿಸುವಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು ಎಂದು ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ಅಧ್ಯಕ್ಷ ಬಲರಾಮ್ ತಿಳಿಸಿದರು. 

ಪಟ್ಟಣದ ರೋಟರಿ ಸಂಸ್ಥೆ ಆವರಣದಲ್ಲಿ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ತಾಲ್ಲೂಕಿನಲ್ಲಿ ಉತ್ತಮ ಸೇವೆ ಮಾಡಿದ ವೈದ್ಯರಿಗಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈದ್ಯೋ ನಾರಾಯಣೋ ಹರಿ ಎಂಬ ನುಡಿಯಂತೆ ವೈದ್ಯರು ನಾರಾಯಣನಿಗೆ ಸಮ. ಜನರ ಜೀವ ರಕ್ಷಣೆಯಲ್ಲಿ ಸದಾ ಮುಂದಿರುವ ವೈದ್ಯರು ತಮ್ಮ ಆರೋಗ್ಯ ರಕ್ಷಣೆಗೂ ಆದ್ಯತೆ ನೀಡಬೇಕು.

ಸಾಮಾಜಿಕ ಹೊಣೆಗಾರಿಕೆ ವೈದ್ಯರ ಕರ್ತವ್ಯದಲ್ಲೇ ಅಡಗಿರುತ್ತದೆ. ಕರ್ತವ್ಯದಲ್ಲಿ ವೈದ್ಯರು ಜೀವನ ಅಡವಿಟ್ಟು ಸೇವೆ ಮಾಡುತ್ತಾರೆ. ಪ್ರಕೃತಿ ವಿಕೋಪ, ಯುದ್ಧ ಸಂದರ್ಭದಲ್ಲಿ, ಆಂತರಿಕ ಸಂಘರ್ಷದ ಸಂದರ್ಭದಲ್ಲಿ ವೈದ್ಯರ ಸೇವೆ ಪ್ರಮುಖವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯರಿಗೆ ಕಾನೂನು ತೊಡಕು ಎದುರಾಗುತ್ತವೆ. ಕಾನೂನು ತೊಡಕುಗಳಿಂದ ಜೀವ ರಕ್ಷಣೆ ಮಾಡಿಕೊಂಡು ಸೇವೆಯಲ್ಲಿ ತೊಡಗಿಸುವುದು ಹೇಗೆ ಎಂಬುದನ್ನು ವೈದ್ಯರು ಕಲಿಯಬಹುದಾಗಿದೆ. ದೈನಂದಿನ ಕರ್ತವ್ಯದಲ್ಲಿ ಕಾನೂನು ಪಾಲನೆ ನಮ್ಮೆಲ್ಲರಿಗೂ ಅನಿವಾರ್ಯ. ಕಾನೂನು ಪಾಲನೆಯೊಂದಿಗೆ ಕರ್ತವ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ನೈತಿಕತೆ ಮತ್ತು ಪ್ರಾಮಾಣಿಕತೆಯಿಂದ ದೈನಂದಿನ ಕೆಲಸ ನಿರ್ವಹಿಸಬೇಕು. ಹಿರಿಯ ವೈದ್ಯರ ಸೇವೆಯನ್ನು ಕಿರಿಯ ವೈದ್ಯರು ಅನುಕರಿಸಬೇಕು. ಸಾಮಾಜಿಕ ವ್ಯವಸ್ಥೆಯಲ್ಲಿ ವೈದ್ಯರು ಚಿಕಿತ್ಸೆ ವಿಳಂಬ ಮಾಡಬಾರದು. ರೋಗಿಗಳಿಗೆ ಆತ್ಮವಿಶ್ವಾಸ ಬರುವಂತೆ ನಿಮ್ಮ ಸಂಬಂಧ ಗಟ್ಟಿಗೊಳಿಸಬೇಕು. ಸಾಮಾಜಿಕ ನಂಬಿಕೆ ಗಳಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.

ವಲಯ ಸೇನಾನಿ ಎಂ.ಎಂ. ರಾಜೇಗೌಡ ಮಾತನಾಡಿ ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ. ಅದೊಂದು ಪವಿತ್ರ ಹಾಗೂ ಮಹಾನ್​ ಸೇವೆ. ತಮ್ಮ ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ಸಮಾಜದ ಆರೋಗ್ಯಕ್ಕೆ ವೈದ್ಯರು ಹೆಚ್ಚಿನ ಆದ್ಯತೆ ನೀಡುತ್ತಾರೆ. ನಿಸ್ವಾರ್ಥ ಸೇವೆಯಿಂದ ಅನೇಕ ಜೀವ ಉಳಿಸುವ ಅವರು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಅಮೂಲ್ಯ ಕೊಡುಗೆ ನೀಡುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಕೆ.ಪ್ರಕಾಶ್ ಬಾಬು ರಾವ್, ಡಾ.ಮಹದೇವ ಸ್ವಾಮಿ, ಡಾ ಕ್ರಷ್ಣ ಪ್ರಸಾದ್, ಡಾ. ಸುನಿಲ್ ಕುಮಾರ್, ಡಾ ವಿರೂಪಾಕ್ಷ, ಡಾ ರೂಪಶ್ರೀ, ಡಾ.ಅನುರಾಗ್, ಡಾ. ಗೌರವ್ ರವರನ್ನು ಸನ್ಮಾನಿಸಲಾಯಿತು.

 ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ಕಾರ್ಯದರ್ಶಿ ಹರೀಶ ಬಿ.ಎಸ್., ವಲಯ 6ರ ನಿರ್ಗಮಿತ ಸಹಾಯಕ ಗವರ್ನರ್ ರೊ ರಾಜೇಗೌಡ ತಿರುಮಲಾಪುರ, ನಿರ್ಗಮಿತ ಅಧ್ಯಕ್ಷ ಜಗನ್ ಜಿ ಕೆ, ಕಾರ್ಯದರ್ಶಿ ಚೇತನ್ ಟಿ ಕೆ,  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.