Day: July 15, 2026
ಟೈರ್‌ಗಳು ಯಾಕೇ ಕಪ್ಪು ಬಣ್ಣದಲ್ಲಿಯೇ ಇರುತ್ತವೇ, ಬೇರೆ ಬಣ್ಣದಲ್ಲಿ ಇದ್ದರೇ ಏನಾಗುತ್ತೆ !
ಸೈಕಲ್, ಬೈಕ್ ಮತ್ತು ಕಾರುಗಳ ಟೈರ್‌ಗಳು ಸದಾ ಕಪ್ಪು ಬಣ್ಣದಲ್ಲೇ ಇರುತ್ತವೆ. ಟೈರ್‌ಗಳನ್ನು ಏಕೆ ವರ್ಣರಂಜಿತ ಬಣ್ಣಗಳಲ್ಲಿ ಮಾಡಲಾಗುವುದಿಲ್ಲ? ಯೋಚಿಸಿದಾಗ ಅದಕ್ಕೆ ಸೈನ್ಸ್ ಹೇಳುವ ಅಚ್ಚರಿ ಉತ್ತರ ಹೀಗಿದೆ ನೋಡಿ. ವಾಹನದ ಬಣ್ಣ ಯಾವುದೇ ಇರಲಿ, ಟೈರ್ ಯಾವಾಗಲೂ ಕಪ್ಪೇ. ರಬ್ಬರ್‌ನ ನೈಸರ್ಗಿಕ ಬಣ್ಣವು ಬಿಳಿಯಾಗಿರುವಾಗ, ಟೈರ್‌ಗಳನ್ನು ಏಕೆ ವರ್ಣರಂಜಿತ ಬಣ್ಣಗಳಲ್ಲಿ ಮಾಡಲಾಗುವುದಿಲ್ಲ? ಇದರ ಹಿಂದಿರುವ ಕ್ರೇಜಿ ಸೈನ್ಸ್ ಮತ್ತು ಯಾರಿಗೂ ತಿಳಿಯದ ಒಂದಷ್ಟು ಕುತೂಹಲಕಾರಿ ವಿಷಯಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ರಬ್ಬರ್ ಬಿಳಿಯಾಗಿದ್ದರೂ ಟೈರ್…
ಮೈಸೂರು ಅಭಿವೃದ್ಧಿ ಪ್ರಾಧಿಕಾರ ದಿಂದ 50:50 ಅನುಪಾತದಲ್ಲಿ ಹಂಚಿಕೆ ಮಾಡಲಾಗಿರುವ ಅಕ್ರಮ ನಿವೇಶನಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಿ; ವಿಧಾನ ಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ ಆಗ್ರಹ
ಮೈಸೂರು ; ಮೈಸೂರು ಅಭಿವೃದ್ಧಿ ಪ್ರಾಧಿಕಾರ ದಿಂದ 50:50 ಅನುಪಾತದಲ್ಲಿ ಹಂಚಿಕೆ ಮಾಡಲಾಗಿರುವ ಅಕ್ರಮ ನಿವೇಶನಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಂಡು, ಅರ್ಹರಿಗೆ ಮಾತ್ರ ನಿವೇಶನ ನೀಡಬೇಕು, ಇಲ್ಲವಾದರೆ ಬೃಹತ್ ಆಂದೋಲನ ನಡೆಸಲಾಗುವುದು ವಿಧಾನ ಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ ಎಚ್ಚರಿಕೆ ನೀಡಿದರು.ಬುಧವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಂಡಿಎಯಿAದ 50:50ಯಲ್ಲಿ ಅಕ್ರಮವಾಗಿ 10ಸಾವಿರ ಮಂಜೂರಾತಿ ಪತ್ರಗಳು ಆಗಿದೆ ಎಂಬ ಮಾಹಿತಿ ಇದೆ.ಆದರೆ ಚಿತ್ರಣ ಬರುತ್ತಿರುವುದು ಒಂದು ಸಾವಿರ ಮಾತ್ರ , 50:50…
ಬಿಜೆಪಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಹಾಯ ಕೇಂದ್ರಕ್ಕೆ ಚಾಲನೆ
ಮೈಸೂರು; ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ವತಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಹಾಯ ಕೇಂದ್ರವನ್ನು ಶಾರದಾದೇವಿನಗರದಲ್ಲಿ ಮುಖಂಡ ಕವೀಶ್ ಗೌಡ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, 2002ರ ಮತಪಟ್ಟಿಯಲ್ಲಿ ಹೆಸರು ಹುಡುಕಲು ಅನೇಕರಿಗೆ ಕಷ್ಟವಾಗುತ್ತಿರುವುದನ್ನು ಮನಗಂಡು, ಬಿಜೆಪಿ ವತಿಯಿಂದ ಕ್ಷೇತ್ರದ ವಿವಿದೆಡೆ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಅದನ್ನು ಕ್ಷೇತ್ರದ ಮತದಾರರು ಸದುಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.ನಂತರ ಮತದಾರರಿಗೆ ಬಿ.ಎಲ್.ಓ.ಗಳ ಸಂಪರ್ಕ, 2002ರ ಮತ ಪಟ್ಟಿಯಲ್ಲಿ ಹೆಸರು ಹುಡುಕಲು, ಎನ್ಯೂಮರೇಷನ್ ಅರ್ಜಿ ಭರಿಸಲು ಸಹಾಯ ಮಾಡಲಾಯಿತು. ಈ ವೇಳೆಚಾಮುಂಡೇಶ್ವರಿ ನಗರ ಮಂಡಲದ…
ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವ ಕುರಿತು ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ; ಸಚಿವ ಡಾ.ಯತೀಂದ್ರ
ಮೈಸೂರು: ಈ ಬಾರಿ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಇನ್ನೂ ಬಂದಿಲ್ಲ. ಈ ಬಗ್ಗೆ ಎಲ್ಲಾ ಸಾಧಕ-ಬಾಧಕಗಳನ್ನು ನೋಡಿಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀರ್ಮಾನ ಕೈಗೊಳ್ಳುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ದಸರಾದಲ್ಲಿ ಕಂಬಳ ನಡೆಸುವ ಬಗ್ಗೆ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಸದ್ಯಕ್ಕೆ ದಸರಾದಲ್ಲಿ ಪರಿಸರಕ್ಕೆ ತೊಂದರೆ ಮಾಡಿ, ಕಂಬಳ ನಡೆಸಬೇಕೆಂಬ ತೀರ್ಮಾನಕ್ಕೆ…
ವಿಜಯ ವಿಠಲ ಕಾಲೇಜಿನಲ್ಲಿ ವಿಜ್ಞಾನ ಸಂಘದ ಉದ್ಘಾಟನೆ ಮತ್ತು ವಿಶ್ವ ಯುವ ಕೌಶಲ್ಯ ದಿನಾಚರಣೆ
ಮೈಸೂರು; ನಗರದ ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಸಂಘದ ಉದ್ಘಾಟನೆ ಮತ್ತು ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಬಯೋ ಕೆಮಿಸ್ಟಿç ವಿಭಾಗದ ಪ್ರಾಧ್ಯಾಪಕ ಡಾ. ಪ್ರಸನ್ನ ಕೆ. ಸಂತೇಕಡೂರು ಮಾತನಾಡಿ, ವಿಜ್ಞಾನ ವೇದಿಕೆಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಕುತೂಹಲ, ಸಂಶೋಧನಾ ಆಸಕ್ತಿ ಮತ್ತು ಸೃಜನಶೀಲತೆಯನ್ನು ಬೆಳೆಸುವ ಒಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.ವಿಜ್ಞಾನ ಸಂಘದ ಮೂಲಕ ವಿದ್ಯಾರ್ಥಿಗಳು ವಿಜ್ಞಾನ ಪ್ರದರ್ಶನ, ಮಾದರಿ ತಯಾರಿಕೆ, ವಿಜ್ಞಾನ…
ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅಪಾರ: ರೊ.ಬಲರಾಮ್
ಪಿರಿಯಾಪಟ್ಟಣ: ರೋಗಿಗಳನ್ನು ಉಳಿಸುವಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು ಎಂದು ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ಅಧ್ಯಕ್ಷ ಬಲರಾಮ್ ತಿಳಿಸಿದರು. ಪಟ್ಟಣದ ರೋಟರಿ ಸಂಸ್ಥೆ ಆವರಣದಲ್ಲಿ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ತಾಲ್ಲೂಕಿನಲ್ಲಿ ಉತ್ತಮ ಸೇವೆ ಮಾಡಿದ ವೈದ್ಯರಿಗಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವೈದ್ಯೋ ನಾರಾಯಣೋ ಹರಿ ಎಂಬ ನುಡಿಯಂತೆ ವೈದ್ಯರು ನಾರಾಯಣನಿಗೆ ಸಮ. ಜನರ ಜೀವ ರಕ್ಷಣೆಯಲ್ಲಿ ಸದಾ ಮುಂದಿರುವ ವೈದ್ಯರು ತಮ್ಮ ಆರೋಗ್ಯ ರಕ್ಷಣೆಗೂ ಆದ್ಯತೆ ನೀಡಬೇಕು. ಸಾಮಾಜಿಕ ಹೊಣೆಗಾರಿಕೆ ವೈದ್ಯರ…
ಮಾಜಿ ಸಚಿವ ರಾಮಚಂದ್ರಗೌಡ ನಿಧನಕ್ಕೆ ಸುತ್ತೂರು ಶ್ರೀಗಳಿಂದ ಸಂತಾಪ
ಮೈಸೂರು; ಮಾಜಿ ಸಚಿವ ರಾಮಚಂದ್ರೇಗೌಡರು ದೈವಾಧೀನರಾಗಿರುವುದು ವಿಷಾದನೀಯ ಸಂಗತಿ ಎಂದು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.ರಾಮಚಂದ್ರೇಗೌಡರು ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ವಿಧಾನಪರಿಷತ್ತಿಗೆ ಬೆಂಗಳೂರು ಪದವೀಧರರ ಕ್ಷೇತ್ರದಿಂದ ಐದು ಬಾರಿ ಆಯ್ಕೆಯಾಗಿದ್ದು ಅವರ ಜನಪ್ರಿಯತೆಯ ದ್ಯೋತಕ. ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿದ್ದವರು. ನಾಲ್ಕು ದಶಕಗಳ ರಾಜಕಾರಣದಲ್ಲಿ ದಕ್ಷತೆಗೆ ಮತ್ತೊಂದು ಹೆಸರಾಗಿದ್ದವರು. ಸರಳ ಸಜ್ಜನಿಕೆಗೆ ಹೆಸರಾಗಿದ್ದರು. ಅಜಾತಶತ್ರುಗಳ. ಪಕ್ಷಾತೀತವಾಗಿ ಮಿತ್ರರ ಬಳಗವನ್ನು ಹೊಂದಿದ್ದರು. ರೇಷ್ಮೆ, ವಿಜ್ಞಾನ ಹಾಗೂ ತಂತ್ರಜ್ಞಾನ ಮತ್ತು ವೈದ್ಯಕೀಯ…
ಬೈಕುಗಳ ಮುಖಾಮುಖಿ ಢಿಕ್ಕಿ ಓರ್ವ ಸ್ಥಳದಲ್ಲೇ ಸಾವು,ಮತ್ತೊರ್ವನ ಸ್ಥಿತಿ ಗಂಭೀರ.
ಪಿರಿಯಾಪಟ್ಟಣ: ಎರಡು ಬೈಕ್ ಗಳ ಮುಖಾಮುಖಿ ಢಿಕಿಯಾಗಿ ಓರ್ವ ಸವಾರ ಸ್ಥಳದಲ್ಲೇ ಸಾವಿಗೀಡಾಗಿ, ಮತ್ತೊರ್ವನ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ತಾಲೂಕಿನ ಕಂಪಲಾಪುರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ತಾಲ್ಲೂಕಿನ ಬಿ.ಎಂ.ರಸ್ತೆಯ ಜವನಿಕುಪ್ಪೆ ಗ್ರಾಮದ ಲೇ. ಕೆಂಪೇಗೌಡರ ಮಗ ಕೃಷ್ಣ(45) ಎಂಬಾತನೆ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ಬುಧವಾರ ಬೆಳಗ್ಗೆ ಕೃಷ್ಣ ಜವನಿಕುಪ್ಪೆಯಿಂದ ಕಂಪಲಾಪುರದ ಅಂಗಡಿ ಗೆ ಬಂದು ತಮ್ಮ ಹೀರೋ ಹೋಂಡಾ ಬೈಕನ್ನು(KA 45K2839) ತಿರುಗಿಸುವ ವೇಳೆ ಕುಶಾಲನಗರ ಕಡೆಯಿಂದ ಮೈಸೂರು ಕಡೆಗೆ ಬರುತ್ತಿದ್ದ ಪಲ್ಸರ್ ಎನ್ಎಸ್ (KA12Y5303)…
ಗ್ರಾಮದ ಮಧ್ಯದಲ್ಲಿ ನಡೆದ ವಾಮಾಚಾರ ! ಬೆಚ್ಚಿ ಬಿದ್ದ ಗ್ರಾಮಸ್ಥರು
ನಂಜನಗೂಡು: ಅಮಾವಾಸ್ಯೆ ರಾತ್ರಿ ಗ್ರಾಮದ ಮಧ್ಯದಲ್ಲಿ ನಡೆದ ವಾಮಾಚಾರ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ನಡೆದಿದ್ದು, ಇದರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಗೋಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಕಿಡಿಗೇಡಿಗಳು ರಂಗೋಲೆ ಹಾಕಿ, ಮನುಷ್ಯನ ತಲೆಬುರುಡೆ ಮತ್ತು ಹಸ್ತದ ಮೂಳೆ ಇಟ್ಟು ಮಾಟ-ಮಂತ್ರ ಮಾಡಿರುವುದು ಬುಧವಾರ ಬೆಳಗ್ಗೆ ಕಂಡು ಬಂದಿದೆ.ಗ್ರಾಮದ ಜನರು ಬೆಳಗ್ಗೆ ಕೆಲಸಕ್ಕೆ ಹೋಗುವ ವೇಳೆ ಮುಖ್ಯ ರಸ್ತೆ ಮಧ್ಯದಲ್ಲಿ ವಿಚಿತ್ರ ರಂಗೋಲೆ ಕಂಡಿದೆ. ರಂಗೋಲೆಯ ಮಧ್ಯದಲ್ಲಿ ಮಾನವನ ತಲೆಬುರುಡೆ, ಹಸ್ತದ ಮೂಳೆಗಳನ್ನು ಇರಿಸಲಾಗಿತ್ತು. ಸುತ್ತ…
- 1
- 2