Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಟೈರ್‌ಗಳು ಯಾಕೇ ಕಪ್ಪು ಬಣ್ಣದಲ್ಲಿಯೇ ಇರುತ್ತವೇ, ಬೇರೆ ಬಣ್ಣದಲ್ಲಿ ಇದ್ದರೇ ಏನಾಗುತ್ತೆ ! 

ಸೈಕಲ್​, ಬೈಕ್​ ಮತ್ತು ಕಾರುಗಳ ಟೈರ್‌ಗಳು ಸದಾ ಕಪ್ಪು ಬಣ್ಣದಲ್ಲೇ ಇರುತ್ತವೆ. ಟೈರ್‌ಗಳನ್ನು ಏಕೆ ವರ್ಣರಂಜಿತ ಬಣ್ಣಗಳಲ್ಲಿ ಮಾಡಲಾಗುವುದಿಲ್ಲ?  ಯೋಚಿಸಿದಾಗ  ಅದಕ್ಕೆ ಸೈನ್ಸ್​ ಹೇಳುವ ಅಚ್ಚರಿ ಉತ್ತರ ಹೀಗಿದೆ ನೋಡಿ.

ವಾಹನದ ಬಣ್ಣ ಯಾವುದೇ ಇರಲಿ, ಟೈರ್ ಯಾವಾಗಲೂ ಕಪ್ಪೇ. ರಬ್ಬರ್‌ನ ನೈಸರ್ಗಿಕ ಬಣ್ಣವು ಬಿಳಿಯಾಗಿರುವಾಗ, ಟೈರ್‌ಗಳನ್ನು ಏಕೆ ವರ್ಣರಂಜಿತ ಬಣ್ಣಗಳಲ್ಲಿ ಮಾಡಲಾಗುವುದಿಲ್ಲ? ಇದರ ಹಿಂದಿರುವ ಕ್ರೇಜಿ ಸೈನ್ಸ್ ಮತ್ತು ಯಾರಿಗೂ ತಿಳಿಯದ ಒಂದಷ್ಟು ಕುತೂಹಲಕಾರಿ ವಿಷಯಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. 

ರಬ್ಬರ್ ಬಿಳಿಯಾಗಿದ್ದರೂ ಟೈರ್ ಏಕೆ ಕಪ್ಪು?

ನಮ್ಮ ದೈನಂದಿನ ಜೀವನದಲ್ಲಿ ಕಾಣುವ ಅನೇಕ ವಿಷಯಗಳನ್ನು ಬಹಳ ಲೈಟ್​ ಆಗಿ ತೆಗೆದುಕೊಳ್ಳುತ್ತೇವೆ. ಆದರೆ, ಅದರ ಹಿಂದೆ ಅನಿರೀಕ್ಷಿತ ಸತ್ಯಗಳು ಅಡಗಿವೆ. ಅವುಗಳಲ್ಲಿ ಒಂದು ಈ ಕಪ್ಪು ಟೈರುಗಳ ರೋಚಕ ಕಥೆ.  ನಾವು ಬಳಸುವ ಟೈರುಗಳು ನೈಸರ್ಗಿಕ ರಬ್ಬರ್‌ನಿಂದ ಮಾಡಲ್ಪಟ್ಟಿವೆ. ಈ ರಬ್ಬರ್ ಮರಗಳಿಂದ ಬರುವ ಹಾಲು (ಲ್ಯಾಟೆಕ್ಸ್) ಸಂಪೂರ್ಣವಾಗಿ ಬಿಳಿ ಬಣ್ಣದ್ದಾಗಿದೆ. ಆರಂಭದಲ್ಲಿ, 1900ರ ದಶಕದಲ್ಲಿ, ವಾಹನಗಳಿಗೆ ವೈಟ್​ ಟೈರ್​ಗಳನ್ನೇ ಬಳಸಲಾಗುತ್ತಿತ್ತು. ಆದರೆ, ಆ ಬಿಳಿ ರಬ್ಬರ್ ಟೈರ್‌ಗಳಿಗೆ ದೊಡ್ಡ ಸಮಸ್ಯೆ ಕಾಡುತ್ತಿತ್ತು.

ಈ ಬಿಳಿ ಟೈರ್‌ಗಳು ತುಂಬಾ ಮೃದುವಾಗಿರುವುದರಿಂದ, ರಸ್ತೆಯಲ್ಲಿ ಸ್ವಲ್ಪ ದೂರ ಪ್ರಯಾಣಿಸಿದ ನಂತರ ಅವು ಸವೆಯುತ್ತಿತ್ತು. ಸೂರ್ಯನ ಶಾಖದಲ್ಲಿ ಅವು ದೀರ್ಘಕಾಲ ಬಾಳಿಕೆ ಬರದೆ ಹಾಳಾಗುತ್ತಿತ್ತು. ಇದರಿಂದ ಟೈರ್​ ಉತ್ಪಾದಕರಿಗೆ ದೊಡ್ಡ ಸಮಸ್ಯೆ ಕಾಡಲಾರಂಭಿಸಿತು. ಆಗಲೇ ವಿಜ್ಞಾನಿಗಳು ಹೊಸ ಪ್ರಯೋಗಕ್ಕೆ ಬಂದಿದ್ದು, ‘ಕಾರ್ಬನ್ ಬ್ಲ್ಯಾಕ್’ ಮ್ಯಾಜಿಕ್​ಗೆ ಮುಂದಾಗಿದ್ದು.

ಬಿಳಿ ರಬ್ಬರ್ ಟೈರ್ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎಂಬ ಕಾರಣಕ್ಕೆ ವಿಜ್ಞಾನಿಗಳು ಹೊಸ ಪ್ರಯೋಗಕ್ಕೆ ಕೈಹಾಕಿದರು. ಅದೇ, ರಬ್ಬರ್ ಅನ್ನು ಬಲವಾಗಿ ಮತ್ತು ಹೆಚ್ಚು ಶಾಖ ನಿರೋಧಕವಾಗಿಸಲು ಕಾರ್ಬನ್ ಬ್ಲ್ಯಾಕ್ ಎಂಬ ಬ್ಲಾಕ್​ ಕೆಮಿಕಲ್​ ಅನ್ನು ಸೇರಿಸಲು ಪ್ರಾರಂಭಿಸಿದರು. ಈ ಕಾರ್ಬನ್ ಬ್ಲಾಕ್ ಅನ್ನು ಬಿಳಿ ರಬ್ಬರ್‌ನೊಂದಿಗೆ ಬೆರೆಸಿದಾಗ, ಟೈರ್‌ಗಳ ಬಣ್ಣವು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿತು.

ಕಪ್ಪು ಟೈರ್‌ ಪ್ರಯೋಜನವೇನು?

ಕೇವಲ ಬಣ್ಣ ಬದಲಾವಣೆಗಿಂತ ಟೈರ್‌ಗಳನ್ನು ಕಪ್ಪು ಬಣ್ಣಕ್ಕೆ ತಿರುಗಿಸುವುದರಿಂದ ಹೆಚ್ಚಿನ ಪ್ರಯೋಜನಗಳಿವೆ. ಕಾರ್ಬನ್ ಕಪ್ಪು ಸೇರ್ಪಡೆಯು ಟೈರ್‌ಗಳ ಶಕ್ತಿ ಮತ್ತು ಬಾಳಿಕೆಯನ್ನು 10 ಪಟ್ಟು ಹೆಚ್ಚಿಸುತ್ತದೆ. ಮತ್ತು ಸವೆತವನ್ನು ಆದಷ್ಟು ತಡೆಯುತ್ತದೆ. ಇದು ವಾಹನ ಚಲಾಯಿಸುವವರ ಮೇಲೆಯೂ ನಿಂತಿದೆ ಎಂಬುದು ಗಮನಾರ್ಹ.

ಬೇಸಿಗೆಯಲ್ಲಿ, ರಸ್ತೆಗಳು ತುಂಬಾ ಕಾದಿರುತ್ತವೆ. ಈ ಕಪ್ಪು ಕೆಮಿಕಲ್​, ಬಣ್ಣವು ಆ ಶಾಖವನ್ನು ತಡೆದುಕೊಳ್ಳುತ್ತದೆ ಮತ್ತು ಟೈರ್ ಕರಗುವುದನ್ನು ಅಥವಾ ಸ್ಫೋಟಗೊಳ್ಳುವುದನ್ನು ಆದಷ್ಟು ತಡೆಗಟ್ಟುತ್ತದೆ. ಜತೆಗೆ ಕಾರ್ಬನ್ ಕಪ್ಪು ಸೂರ್ಯನಿಂದ ಬರುವ ಅಪಾಯಕಾರಿ ನೇರಳಾತೀತ ಕಿರಣಗಳಿಂದ ರಬ್ಬರ್ ಅನ್ನು ಅಕಾಲಿಕ ಬಿರುಕುಗಳಿಂದ ರಕ್ಷಿಸುತ್ತದೆ.

ಬಣ್ಣ ಬಣ್ಣದ ಟೈರ್‌ಗಳು ಏಕಿಲ್ಲ?

ಈ ದಿನಗಳಲ್ಲಿ ಶೈಲಿಗಾಗಿ ನೀವು ಕೆಂಪು ಅಥವಾ ಹಳದಿ ಟೈರ್​ಗಳನ್ನು ಮಾಡಲು ಬಯಸಿದರೆ, ನೀವು ತಯಾರಿಸಬಹುದು. ಆದರೆ, ನೀವು ಅದಕ್ಕೆ ಈ ಕಾರ್ಬನ್ ಬ್ಲಾಕ್​ ಕೆಮಿಕಲ್​ ಬಳಸಲು ಸಾಧ್ಯವಿಲ್ಲ. ಇದರಿಂದಾಗಿ ಆ ಬಣ್ಣದ ಟೈರ್​ಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಚೆನ್ನಾಗಿ ಕಂಡರೂ ರಸ್ತೆಯಲ್ಲಿ ಹೆಚ್ಚು ದೂರ ಸಾಗುವುದಿಲ್ಲ. ಇದಲ್ಲದೆ, ಸುರಕ್ಷತೆಯ ದೃಷ್ಟಿಯಿಂದ ಅವು ತುಂಬಾ ಅಪಾಯಕಾರಿ. ಹೀಗಾಗಿ, ಶೋಕಿಗಿಂತ ಬದುಕೇ ಮುಖ್ಯ ಎಂಬ ಯೋಚನೆಯಿಂದ ಇಲ್ಲಿಯವರೆಗೂ ಯಾವುದೇ ಟೈರ್​ ಕಂಪನಿಗಳು ಇತರೆ ಬಣ್ಣದ ಟೈರ್​ಗಳ ತಯಾರಿಕೆಗೆ ಮುಂದಾಗಿಲ್