Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರು ಅಭಿವೃದ್ಧಿ ಪ್ರಾಧಿಕಾರ ದಿಂದ 50:50 ಅನುಪಾತದಲ್ಲಿ ಹಂಚಿಕೆ ಮಾಡಲಾಗಿರುವ ಅಕ್ರಮ ನಿವೇಶನಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಿ; ವಿಧಾನ ಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ ಆಗ್ರಹ

ಮೈಸೂರು ; ಮೈಸೂರು ಅಭಿವೃದ್ಧಿ ಪ್ರಾಧಿಕಾರ ದಿಂದ 50:50 ಅನುಪಾತದಲ್ಲಿ ಹಂಚಿಕೆ ಮಾಡಲಾಗಿರುವ ಅಕ್ರಮ ನಿವೇಶನಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಂಡು, ಅರ್ಹರಿಗೆ ಮಾತ್ರ ನಿವೇಶನ ನೀಡಬೇಕು, ಇಲ್ಲವಾದರೆ ಬೃಹತ್ ಆಂದೋಲನ ನಡೆಸಲಾಗುವುದು ವಿಧಾನ ಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ ಎಚ್ಚರಿಕೆ ನೀಡಿದರು.
ಬುಧವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಂಡಿಎಯಿAದ 50:50ಯಲ್ಲಿ ಅಕ್ರಮವಾಗಿ 10ಸಾವಿರ ಮಂಜೂರಾತಿ ಪತ್ರಗಳು ಆಗಿದೆ ಎಂಬ ಮಾಹಿತಿ ಇದೆ.ಆದರೆ ಚಿತ್ರಣ ಬರುತ್ತಿರುವುದು ಒಂದು ಸಾವಿರ ಮಾತ್ರ , 50:50 ಲೂಟಿಕೋರತನದ ನಿವೇಶನದ ಪ್ರಕರಣದ ಮುಚ್ಚಿಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಆರೋಪಿಸಿದರು.
ಎಂಡಿಎ ವಿಚಾರವಾಗಿ ಕಳಂಕ ಹೊತ್ತಿರುವ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯರಿಗೆ , ಮುಖ್ಯಮಂತ್ರಿಗಳು ಬೇರೆ ಖಾತೆ ಕೊಡಬೇಕು ಎಂದು ಆಗ್ರಹಿಸಿದರು.
ಹೈಕೋರ್ಟ್ನ ಡಬಲ್ ಬೆಂಚ್‌ನಲ್ಲಿ ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಅಂತ ಇದೆ. ಈ ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದವರು ಹೆಲಿಕ್ಯಾಪ್ಟರ್‌ನಲ್ಲಿ ಬಂದು ದಾಖಲೆಗಳನ್ನು ತೆಗೆದುಕೊಂಡು ಹೋದರು, ಅವರ ರಕ್ಷಣೆಗೆ ಇವರು ನಿಂತಿದ್ದಾರೆ.ಇವರ ನಿವೇಶನದ ವಿಚಾರವಾಗಿ ಕಳಂಕ ರಹಿತರಾದ ನಚಿತರ, ಅವರಿಗೆ ನಗರಾಭಿವೃದ್ದಿ ಸಚಿವರ ಖಾತೆ ಕೊಡಿ ಎಂದು ಒತ್ತಾಯಿಸಿದರು.
ತಮ್ಮ ತಪ್ಪನ್ನು ಒಪ್ಪಿಕೊಂಡು ಡಾ. ಯತೀಂದ್ರ ಸಿದ್ದರಾಮಯ್ಯನವರ ಕುಟುಂಬದವರು 14 ನಿವೇಶಗಳನ್ನು ಎಂಡಿಎಗೆ ವಾಪಸ್ ಕೊಟ್ಟಿದ್ದಾರೆ. ಇವರಿಗೆ ನಿಜವಾದ ನೈತಿಕತೆ ಇದ್ದರೆ, ನಿವೇಶನಗಳನ್ನು ಯಾಕೆ ವಾಪಸ್ ಕೊಟ್ಟಿದ್ದು, ತಾವು ಎಂಡಿಎಗೆ ವಾಪಸ್ ಸೈಟ್‌ಗಳನ್ನು ನೀಡಿದಂತೆ,ಬೇರೆಯವರು ನೀಡುವಂತೆ ಯತೀಂದ್ರ ಸಿದ್ದರಾಮಯ್ಯನವರು ಆದೇಶ ಹೊರಡಿಸಬೇಕು ಎಂದು ಸವಾಲು ಹಾಕಿದರು.
ಎಂಡಿಎ ಆಯುಕ್ತರಾಗಿದ್ದ ರಕ್ಷಿತ್‌ನನ್ನು , ರಕ್ಷಣಾತ್ಮಕವಾಗಿ ಆಟ ಆಡಲು , ನಗರಾಭಿವೃದ್ದಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯನವರು ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದಾರೆ. ಎಂಡಿಎ ಆಯುಕ್ತರಾಗಿದ್ದ ರಕ್ಷಿತ್, ಸಭೆ ಮಾಡುವಾಗ ಯಾವ ಜನಪ್ರತಿನಿಧಿಗಳು ಇಲ್ಲದೇ, ಮೇಲಿನ ಆದೇಶದಿಂದ ಎಲ್ಲ ಅಕ್ರಮ ನಿರ್ಣಯಗಳನ್ನು ಮಾಡಿದ್ದಾರೆ.ರಕ್ಷಿತ್ ಅವಧಿಯಲ್ಲಿ ನಡೆದಿರುವ ಪ್ರಾಧಿಕಾರದ ನಿರ್ಣಯಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಧ್ಯ ಪ್ರವೇಶ ಮಾಡಿ ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಎಂಡಿಎಗೆ ಆಯುಕ್ತರು, ಸರಿಯಾಗಿ ಅಧಿಕಾರಿಗಳು ಇಲ್ಲದೇ ಎಂಡಿಎ ಅನಾಥವಾಗಿದೆ. ಯತೀಂದ್ರ ಸಿದ್ದರಾಮಯ್ಯ ಅವರ ಮನೆಗೆ ಪ್ರಾಧಿಕಾರ ಸ್ಥಳಾಂತರ ಆಗಿದೆ. ಆಯುಕ್ತರನ್ನು ಯಾಕೆ ನೇಮಕ ಮಾಡಿಲ್ಲ, ಎಂಡಿಎಗೆ ವಿಭಾಗಿಯ ಮಟ್ಟದ ಹಿರಿಯ ಅಧಿಕಾರಿಗಳನ್ನು ಆಯುಕ್ತರಾಗಿ, ವಿಜಿಲೆನ್ಸ್ ಹಾಗೂ ಎಂಡಿಎಯಲ್ಲಿ ಪೊಲೀಸ್ ಠಾಣೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಡಿಜೆ ಬಳಸಿದರೆ ತೀವ್ರ ಪ್ರತಿಭಟನೆ : ದಸರಾ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ನಡೆಯಲಿರುವ ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ಡಿಜೆ ಬಳಸಿದರೆ, ತೀವ್ರ ಪ್ರತಿಭಟನೆ ನಡೆಸಲಾಗುವುದು. ಅರಮನೆಯಲ್ಲಿ ಸಾಂಸ್ಕöÈತಿಕ ಚಟುವಟಿಕೆಗಳು ಸಂಪ್ರದಾಯವಾಗಿಯೇ ಉಳಿಯಬೇಕು ಎಂದು ಆಗ್ರಹಿಸಿದರು.
ನಾಡ ಹಬ್ಬ ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಪಾರಂಪರಿಕ ಕಟ್ಟಡಗಳ ರಕ್ಷಣೆ ಮಾಡಲು ಸರಕಾರ ಮುಂದಾಗಬೇಕು. ಜಂಬೂಸವಾರಿ ಮೆರವಣಿಗೆಗೆ ಬೇರೆ ಬೇರೆ ರಾಜ್ಯಗಳಿಂದ ಸ್ತಬ್ಧಚಿತ್ರಗಳನ್ನು ಆಹ್ವಾನಿಸಿ, ಗಣರಾಜೋತ್ಸವ ಮಾದರಿಯಲ್ಲಿ ಮಾಡಿದರೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಮಾ.ವಿ.ರಾಮಪ್ರಸಾದ್, ಪದಾಧಿಕಾರಿಗಳಾದ ಗುರುಸ್ವಾಮಿ ಮೂರ್ತಿ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಕಿರಣ್‌ಗೌಡ, ಸೋಮಸುಂದರ್ ಮತ್ತಿತರರು ಇದ್ದರು.

—-ಕೋಟ್ಸ್—-
ಖ್ಯಾತ ನಟ ರಜನಿಕಾಂತ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಬೇಕು. ಇಲ್ಲವಾದರೆ, ದಸರಾ ಸಂಬAಧಿತ ಸಾಂಸ್ಕöÈತಿಕ ಕಾರ್ಯಕ್ರಮವನ್ನು ಉದ್ಘಾಟಿಸುವಂತೆ ಮಾಡಬೇಕು. ದಸರಾ ಉದ್ಘಾಟನೆಗೆ ಸುತ್ತೂರು ಶ್ರೀ ಅವರನ್ನು ಪರಿಗಣಿಸಿದರೆ,ಆಕ್ಷೇಪ ಇಲ್ಲಘಿ.
ಆರ್.ರಘು ಕೌಟಿಲ್ಯಘಿ, ವಿಧಾನ ಪರಿಷತ್ ಸದಸ್ಯ