Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗ್ರಾಮದ ಮಧ್ಯದಲ್ಲಿ ನಡೆದ ವಾಮಾಚಾರ ! ಬೆಚ್ಚಿ ಬಿದ್ದ ಗ್ರಾಮಸ್ಥರು


ನಂಜನಗೂಡು: ಅಮಾವಾಸ್ಯೆ ರಾತ್ರಿ ಗ್ರಾಮದ ಮಧ್ಯದಲ್ಲಿ ನಡೆದ ವಾಮಾಚಾರ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ನಡೆದಿದ್ದು, ಇದರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಗೋಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಕಿಡಿಗೇಡಿಗಳು ರಂಗೋಲೆ ಹಾಕಿ, ಮನುಷ್ಯನ ತಲೆಬುರುಡೆ ಮತ್ತು ಹಸ್ತದ ಮೂಳೆ ಇಟ್ಟು ಮಾಟ-ಮಂತ್ರ ಮಾಡಿರುವುದು ಬುಧವಾರ ಬೆಳಗ್ಗೆ ಕಂಡು ಬಂದಿದೆ.
ಗ್ರಾಮದ ಜನರು ಬೆಳಗ್ಗೆ ಕೆಲಸಕ್ಕೆ ಹೋಗುವ ವೇಳೆ ಮುಖ್ಯ ರಸ್ತೆ ಮಧ್ಯದಲ್ಲಿ ವಿಚಿತ್ರ ರಂಗೋಲೆ ಕಂಡಿದೆ. ರಂಗೋಲೆಯ ಮಧ್ಯದಲ್ಲಿ ಮಾನವನ ತಲೆಬುರುಡೆ, ಹಸ್ತದ ಮೂಳೆಗಳನ್ನು ಇರಿಸಲಾಗಿತ್ತು. ಸುತ್ತ ಕುಂಕುಮ ಚೆಲ್ಲಿ, ನಿಂಬೆಹಣ್ಣು ಇಡಲಾಗಿತ್ತು. ರಾತ್ರಿ ಅಮಾವಾಸ್ಯೆ ಇದ್ದ ಹಿನ್ನೆಲೆ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
ಈ ದೃಶ್ಯ ನೋಡಿದ ಮಹಿಳೆಯರು, ಮಕ್ಕಳು ಭಯದಿಂದ ನಡುಗಿದ್ದಾರೆ. ನಮ್ಮೂರಿನ ಹೃದಯ ಭಾಗದಲ್ಲೇ ಇಂತಹ ಕೆಲಸ ಮಾಡಿದ್ದಾರೆ. ರಾತ್ರಿ ನಿದ್ದೆ ಹಾಳಾಯಿತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮದ ಮುಖಂಡರು, ಅಮಾವಾಸ್ಯೆ ದಿನ ಇಂತಹ ವಾಮಾಚಾರ ಮಾಡಿದ್ದಾರೆ. ಯಾರು ಈ ಕೃತ್ಯ ಮಾಡಿದರು ಅಂತ ಗೊತ್ತಿಲ್ಲ. ಪೊಲೀಸರು ಕೂಡಲೇ ತನಿಖೆ ಮಾಡಿ, ಕಿಡಿಗೇಡಿಗಳನ್ನು ಹಿಡಿದು ಶಿಕ್ಷಿಸಬೇಕು. ಗ್ರಾಮದಲ್ಲಿ ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು. ವಾಮಾಚಾರ ಮಾಡಿದವರು ಯಾರು, ಯಾರ ಮೇಲೆ ಪ್ರಯೋಗ ಮಾಡಿದ್ದಾರೆ. ಅದರ ಉದ್ದೇಶವೇನು ಎಂಬುದು ಗ್ರಾಮಸüರಿಗೆ ಯಕ್ಷ ಪ್ರಶ್ನೆಯನ್ನುಂಟು ಮಾಡಿದೆ.