
ಪಿರಿಯಾಪಟ್ಟಣ: ಎರಡು ಬೈಕ್ ಗಳ ಮುಖಾಮುಖಿ ಢಿಕಿಯಾಗಿ ಓರ್ವ ಸವಾರ ಸ್ಥಳದಲ್ಲೇ ಸಾವಿಗೀಡಾಗಿ, ಮತ್ತೊರ್ವನ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ತಾಲೂಕಿನ ಕಂಪಲಾಪುರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ತಾಲ್ಲೂಕಿನ ಬಿ.ಎಂ.ರಸ್ತೆಯ ಜವನಿಕುಪ್ಪೆ ಗ್ರಾಮದ ಲೇ. ಕೆಂಪೇಗೌಡರ ಮಗ ಕೃಷ್ಣ(45) ಎಂಬಾತನೆ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ.
ಬುಧವಾರ ಬೆಳಗ್ಗೆ ಕೃಷ್ಣ ಜವನಿಕುಪ್ಪೆಯಿಂದ ಕಂಪಲಾಪುರದ ಅಂಗಡಿ ಗೆ ಬಂದು ತಮ್ಮ ಹೀರೋ ಹೋಂಡಾ ಬೈಕನ್ನು(KA 45K2839) ತಿರುಗಿಸುವ ವೇಳೆ ಕುಶಾಲನಗರ ಕಡೆಯಿಂದ ಮೈಸೂರು ಕಡೆಗೆ ಬರುತ್ತಿದ್ದ ಪಲ್ಸರ್ ಎನ್ಎಸ್ (KA12Y5303) ಬೈಕ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕೃಷ್ಣ ರವರ ತಲೆಗೆ ತೀವ್ರ ಪೆಟ್ಟು ಬಿದ್ದು ಕಾಲಿನ ಮೂಳೆ ಮುರಿದಿದ್ದು ತೀವ್ರ ರಕ್ತಸ್ರಾವ ವಾಗಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಪಲ್ಸರ್ ಬೈಕ್ ನ ಸವಾರರಾದ ಕೊಪ್ಪ ಸಮೀಪದ 88 ಎಕರೆ ಹಾಡಿಯ ಸಂತೋಷ್ ಹಾಗೂ ಅಜಯ್ ರವರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ಹೆಲ್ಮೆಟ್ ಧರಿಸಿದ್ದರೆ ಜೀವ ಉಳಿಯುತಿತ್ತೇನೋ:
ಪೊಲೀಸ್ ಹಾಗೂ ಸಾರಿಗೆ ಇಲಾಖೆಯವರು ಎಷ್ಟು ಬಾರಿ ತಿಳಿಸಿದರೂ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಕಾನೂನು ಉಲ್ಲಂಘಿ ಸುತ್ತಾರೆ. ಇಂತಹ ಘಟನೆಗಳು ನಡೆದಾಗ ಹೆಲ್ಮೆಟ್ ಧರಿಸಿದ್ದರೆ ಜೀವ ಉಳಿಯುತ್ತೆನೋ ಎಂಬುದು ಸಾರ್ವಜನಿಕರ ಮಾತು. ಜೊತೆಗೆ ವಾಸ್ತವವೂ ಕೂಡ.
ಘಟನಾ ಸ್ಥಳಕ್ಕೆ ಪಿರಿಯಾಪಟ್ಟಣ ಸರ್ಕಲ್ ಇನ್ಸ್ಪೆಕ್ಟರ್ ಗೋವಿಂದರಾಜ್, ಕ್ರೈಂ ಇನ್ಸ್ಪೆಕ್ಟರ್ ವೆಂಕಟೇಶ್, ಹೆಡ್ ಕಾನ್ಸ್ಟೇಬಲ್ ಮಹೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.