ಅಂಚೆ ಇಲಾಖೆ ವತಿಯಿಂದ ಆಧಾರ್ ಕ್ಯಾಂಪ್
ಮೈಸೂರು; ಅಂಚೆ ಇಲಾಖೆ ವತಿಯಿಂದ ಸಂಘ-ಸAಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಉಚಿತವಾಗಿ ಆಧಾರ್ ಕ್ಯಾಂಪ್ ಗಳನ್ನು ಅವರ ಸ್ಥಳದಲ್ಲಿಯೇ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ. ಹರೀಶ್ ತಿಳಿಸಿದ್ದಾರೆ.
ಈ ಕ್ಯಾಂಪ್ ಗಳಲ್ಲಿ ಆಧಾರ್ ಗೆ ಸಂಬAಧಿಸಿದ ಎಲ್ಲಾ ರೀತಿಯ ತಿದ್ದುಪಡಿಗಳನ್ನು ಮಾಡಲಾಗುವುದಲ್ಲದೆ, ಹೊಸ ಆಧಾರ್ ಕಾರ್ಡ್ ಗಳನ್ನೂ ಕೂಡ ಮಾಡಿಕೊಡಲಾಗುವುದು. ಕ್ಯಾಂಪ್ ಗಳನ್ನು ಉಚಿತವಾಗಿ ನಡೆಸಿಕೊಡಲಾಗುತ್ತದೆ. ಆದರೆ ತಿದ್ದುಪಡಿ ಅಥವಾ ಹೊಸ ಆಧಾರ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳುವವರು ಯುಐಡಿಐ ನಿಗದಿ ಪಡಿಸಿರುವ ದರಗಳನ್ನು ಪಾವತಿಸಬೇಕಾಗುತ್ತದೆ. ಆಧಾರ್ ಕ್ಯಾಂಪ್ ಗಳನ್ನು ನಡೆಸಲು ಇಚ್ಚಿಸುವ ಸಂಘ-ಸAಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮೊಬೈಲ್ ಸಂಖ್ಯೆ 9448402346 ಮತ್ತು 8660612795ಅನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--°C
Mysore, IN
Loading...