
ಮೈಸೂರು; ಇಲ್ಲಿನ ವಿಜಯ ವಿಠಲ ವಿದ್ಯಾಶಾಲೆಯ ವಿದ್ಯಾರ್ಥಿಗಳು WIZ ಇಂಟರ್ನ್ಯಾಷನಲ್ ಸ್ಪೆಲ್ ಬೀ ನ್ಯಾಷನಲ್ ಮೆಗಾ ಫೈನಲ್ 2025–2026 ರಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ. ಧನುಷ್ ಪ್ರಸಾದ್ (ನಾಲ್ಕನೇ ತರಗತಿ) 39ನೇ ರಾಂಕ್, ಅರಂಜೇಯನ್ ಆರ್. (ಐದನೇ ತರಗತಿ) 43ನೇ ರಾಂಕ್, ಸುಶಾಂತ್ ಹೆಗಡೆ (ಎರಡನೇ ತರಗತಿ) 48ನೇ ರಾಂಕ್ ಮತ್ತು ಅಭಿಗ್ನ್ಯಾ ಶರತ್ (ಐದನೇ ತರಗತಿ) 53ನೇ ರಾಂಕ್ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಸಾಧನೆಗಾಗಿ ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.