
ಮೈಸೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಚ್.ವಿ.ರಾಜೀವ್ ಸ್ನೇಹ ಬಳಗ ‘ಸಾಧನಾ ಪುರಸ್ಕಾರ’ ನೆರವೇರಿಸಲಾಯಿತು.
ಭಾನುವಾರ ನಗರದ ಶಾರದಾವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ 2025-26ನೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದವರಿಗೆ ವೃತ್ತಿ ಮಾರ್ಗದರ್ಶನ ಹಾಗೂ ಸಾಧನಾ ಪುರಸ್ಕಾರ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ನಾಗಮ್ಮ, ಕೃಷ್ಣರಾಜ ಕ್ಷೇತ್ರದಲ್ಲೇ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಷ್ಠಿಯಲ್ಲಿ ಪಾಸ್ ಆಗಿರುವುದು ಸಂತೋಷದ ಬೆಳವಣಿಗೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಮತ್ತು ಜೀವನದ ಆಯ್ಕೆಗಳನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳೇ ಶಿಕ್ಷಕರು, ಪೋಷಕರು ನೀಡುವ ಒಳ್ಳೆಯ ಬೋಧನೆಗಳು, ಸದ್ಗುಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಬಹುತೇಕ ವಿದ್ಯಾರ್ಥಿಗಳು ಸ್ನೇಹಿತರ ಸಲಹೆ ಮೇರೆಗೆ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು, ಕೆಲ ತಿಂಗಳ ನಂತರ ಕಾಲೇಜು ಬದಲಾವಣೆ ಅರ್ಜಿ ಹಿಡಿದುಕೊಂಡು ಗೋಳಾಡುತ್ತಾರೆ. ಅಂತಹ ತಪುö್ಪ ಮಾಡಬೇಡಿ. ಒಂದೇ ಕಾಂಬಿನೇಷನ್ ಇದ್ದ ಊರಿನಲ್ಲಿ ಓದಿದ ನಾನು, ಸಮಾಜಶಾಸ್ತç ಓದಿ ಡಿಡಿಪಿಐ ಆಗಿದ್ದೇನೆ. ಆದ್ದರಿಂದ ಎಲ್ಲ ಕೋರ್ಸ್ಗಳಿಗೂ ಅದರದ್ದೇ ಅವಕಾಶಗಳಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಫ್ಟ್ ಸ್ಕಿಲ್ ಅಗತ್ಯ: ಎಚ್.ವಿ.ರಾಜೀವ್;
ಎಚ್.ವಿ.ರಾಜೀವ್ ಬಳಗದ ಅಧ್ಯಕ್ಷರೂ ಆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಕೌಶಲಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ವೃತ್ತಿ ಜೀವನ ಕಟ್ಟುಕೊಳ್ಳಲು ಕಷ್ಟವಾಗುತ್ತಿದ್ದು, ಅಗತ್ಯ ಮಾರ್ಗದರ್ಶನ ನೀಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. ಕಷ್ಟಪಟ್ಟು ಕಾಲೇಜಿನಲ್ಲಿ ಸೀಟು ಗಿಟ್ಟಿಸಿ, ಶೈಕ್ಷಣಿಕ ಸಾಲ ಪಡೆದು, ಗರಿಷ್ಠ ಅಂಕ ಗಳಿಸಿದರೂ ಸೂಕ್ತವಾದ ಉದ್ಯೋಗ ಸಿಗುವುದಿಲ್ಲ. ಇದರಿಂದಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳು ಪರದಾಡುವುದನ್ನು ಗಮನಿಸಿದ್ದೇನೆ. ಇದೆಲ್ಲದಕ್ಕೂ ವ್ಯಕ್ತಿತ್ವ ವಿಕಸನ ಕೌಶಲಗಳ(ಸಾಫ್ಟ್ ಸ್ಕಿಲ್) ಕೊರತೆಯೇ ಕಾರಣ ಎಂದು ವಿಶ್ಲೇಷಿಸಿದರು.
ಚೀನಾ ಸೇರಿದಂತೆ ಪ್ರಪಂಚದ ಹಲವು ದೇಶಗಳಲ್ಲಿ ಯಥೇಚ್ಛವಾದ ಉದ್ಯೋಗದ ಅವಕಾಶಗಳಿವೆ. ಭಾರತದಲ್ಲೂ ಒಂದೆಡೆ ಅಪಾರ ಪ್ರಮಾಣದ ಉದ್ಯೋಗದ ಅವಕಾಶಗಳು, ಮತ್ತೊಂದೆಡೆ ಹೆಚ್ಚಿನ ನಿರುದ್ಯೋಗಿಗಳು ಇದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಚನ್ನಾಗಿ ಓದುವ ಜತೆಗೆ ಸ್ಮಾರ್ಟ್ನೆಸ್ ಮತ್ತು ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು
ಏಮ್ ಹೈ ಕನ್ಸಲ್ಟಿಂಗ್ ಮುಖ್ಯಸ್ಥ ರವಿಶಂಕರ್ ಮಾತನಾಡಿ, ನಾವೀಗ ವಿಶಿಷ್ಟ ಕಾಲಘಟ್ಟದಲ್ಲಿ ಇದ್ದೇವೆ. ನಮ್ಮ ಸುತ್ತ ಈಗ ಸ್ವರ್ಗ-ನರಕ, ಒಳ್ಳೆಯದ್ದು- ಕೆಟ್ಟದ್ದು ಎಲ್ಲವೂ ಇದೆ. ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ರೂಪುಗೊಳ್ಳಲಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಓದು, ಬಳಸ ಒಡೆಯುವ ಉದ್ಯೋಗಕ್ಕೆ ಸೀಮಿತಗೊಳಿಸಿಕೊಳ್ಳಬಾರದು. ತಾವೇ ಉದ್ಯೋಗ ನೀಡುವ ಉದ್ಯಮಿಗಳಾಗಬೇಕು. ಇದಕ್ಕಾಗಿ ಸಿದ್ಧತೆ, ಬದ್ಧತೆ ಹಾಗೂ ಅಗತ್ಯ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಪ್ರಪಂಚ ನಮ್ಮನ್ನು ಅತ್ತಿತ್ತ ಎಳೆಯುತ್ತಲೇ ಇರುತ್ತದೆ. ನಾವು ಮಾತ್ರ ಗುರಿಯತ್ತ ಗಮನ ಹರಿಸಬೇಕು. ಎಐ ವಿರುದ್ಧವೂ ಹೋರಾಡಿ ಗೆಲ್ಲುವ ಗಟ್ಟಿ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ಸಂಬAಧಿತ ಕೋರ್ಸ್ಗಳಿಗೆ ಭವಿಷ್ಯ: ಸಂಪನ್ಮೂಲ ವ್ಯಕ್ತಿ ಆತ್ಮೀಯ ಕದಂಬ ಮಾತನಾಡಿ, ಪಿಯುಸಿ ನಂತರ 75ಕ್ಕೂ ಹೆಚ್ಚು ಕೋರ್ಸ್ಗಳಿವೆ. ಈ ಪೈಕಿ ಕೃಷಿ ವಿಜ್ಞಾನ ಮತ್ತು ಸಂಬAಧಿತ ಕೋರ್ಸ್ಗಳಿಗೆ ಉತ್ತಮ ಭವಿಷ್ಯ ಇದೆ ಎಂದು ಅಭಿಪ್ರಾಯಪಟ್ಟರು.
ಪ್ರತಿ ವಿದ್ಯಾರ್ಥಿಗಳೂ ಅವರದ್ದೇ ವಿಶೇಷ ಗುಣ ಹಾಗೂ ಸಾಮರ್ಥ್ಯ ಇರುತ್ತದೆ. ಕೆಲಸವರು ಆತ್ಮವಿಶ್ವಾಸದಿಂದ ಸಂವಹನ ನಡೆಸಬಹುದು, ಇನ್ನೂ ಕೆಲವರು ನಾಚಿಕೆ ಸ್ವಭಾವದವರು ಇರಬಹುದು. ಇದ್ಯಾವುದೂ ನಿಮ್ಮ ಸಾಧನೆಗೆ ಅಡ್ಡಿ ಆಗುವುದಿಲ್ಲ. ನಿಮ್ಮ ಜೀವನ ನಿಮ್ಮದೇ ಆಯ್ಕೆ ಆಗಬೇಕು. ನಿಮ್ಮ ಆಸಕ್ತಿಗೆ ಅನುಗುಣವಾಗಿ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಆಶಿಸಿದರು.
ವಾಗ್ಮಿ ಚೇತನ್ ರಾಮ್ ಅವರೂ ಸ್ಪೂರ್ತಿದಾಯಕ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಇದೇ ವೇಳೆ ಮಾವನ ಕಂಪ್ಯೂಟರ್ ಖ್ಯಾತಿ ಅಂಧ ಸಾಧಕ ಬಸವರಾಜ ಅಥಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಧ್ಯಾಹ್ನದ ಬಳಿಕ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಉಡುಗೊರೆಯನ್ನು ಒಳಗೊಂಡ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಬಳಗದ ಸದಸ್ಯ ಅಚ್ಯುತರಾವ್, ಖಾಸಗಿ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಅಮಿತ್ ಭೈರಪ್ಪ ಮುಂತಾದವರಿದ್ದರು.