Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚೆನ್ನಮ್ಮ ದೇವೇಗೌಡರಿಗೆ ಜೆಡಿಎಸ್‌ನಿಂದ ಸಂತಾಪ


ಮೈಸೂರು: ವಯೋ ಸಹಜ ಅನಾರೋಗ್ಯದಿಂದ ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡರಿಗೆ ಜೆಡಿಎಸ್‌ನಿಂದ ಮೆಣದ ಬತ್ತಿ ಹತ್ತಿಸಿ ಸಂತಾಪ ಸೂಚಿಸಲಾಯಿತು.
ನಗರದ ಚಾಮುಂಡಿ ಬೆಟ್ಟದ ಪಾದದಲ್ಲಿ ಚೆನ್ನಮ್ಮ ದೇವೇಗೌಡ ರ ಭಾವಚಿತ್ರ ಹಿಡಿದು ಮೇಣದಬತ್ತಿ ಬೆಳಗಿಸಿದ ಮುಖಂಡರು ಸಂತಾಪ ಸಲ್ಲಿಸಿದರು.
ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ನಗರ ಉಪಾಧ್ಯಕ್ಷ ಯದುನಂದನ್, ವೆಂಕಟೇಶ್, ಮಂಜು ಗೌಡ, ಯೋಗಾನಂದ, ಮಹೇಶ್, ಶ್ರೀಕಾಂತ್ ಕಶ್ಯಪ್, ಸ್ವಾಮಿ, ಚಂದ್ರು, ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.