
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026 ರಲ್ಲಿ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿದ್ದಾರ್ಥನಗರ, ಮೈಸೂರು ಸಂಸ್ಥೆಯ ಆವರಣದಲ್ಲಿ ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಈ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ.
ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಛಾಯಾಚಿತ್ರ, ಅನ್ವಯಕಲೆ ವಿಭಾಗಗಳಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಿಭಾಗಗಳಿರುತ್ತದೆ. ಸಾಂಪ್ರದಾಯಿಕ ಶಿಲ್ಪಕಲೆ, ಸಾಂಪ್ರದಾಯಿಕ ಚಿತ್ರಕಲೆ, ಕರಕುಶಲ ಕಲೆ /ಇನ್ನಿತರೆ ವಿಭಾಗಗಳಲ್ಲಿ ಹವ್ಯಾಸಿ ವಿಭಾಗಗಳಿರುವುದಿಲ್ಲ. ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಮೂರು ಕಲಾಕೃತಿಗಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಆಸಕ್ತ ಕಲಾವಿದರು ಕಲಾಕೃತಿಗಳನ್ನು ಸೆ. 15 ರಿಂದ ಸೆಪ್ಟೆಂಬರ್ 30 ರೊಳಗೆ ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಸಿದ್ದಾರ್ಥನಗರ, ಮೈಸೂರು-570011, ಸಂಸ್ಥೆಯಲ್ಲಿ ಸಲ್ಲಿಸಬಹುದಾಗಿದೆ. ಕಲಾಕೃತಿಗಳನ್ನು ಸಲ್ಲಿಸುವ ಕಲಾವಿದರು, ಸಂಪೂರ್ಣ ವಿವರವನ್ನು ಸ್ವಯಂ ದೃಢಿಕರಣದೊಂದಿಗೆ ಉಪಸಮಿತಿಗೆ ತಲುಪಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯ ಚಂದ್ರಶೇಖರ್ ಎ. ಪಿ(9844595568),ಗುರುರಾಜ್ ನಾಯಕ್ (7795808422), ಸಿದ್ಧರಾಮೇಗೌಡ ಎನ್ (9141161157)ಅವರನ್ನು ಸಂಪರ್ಕಿಸಬಹುದೆAದು ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.