Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪಿರಿಯಾಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ್ದೇನೆ: ಮಾಜಿ ಸಚಿವ ಕೆ. ವೆಂಕಟೇಶ್

ಪಿರಿಯಾಪಟ್ಟಣದಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ 

ಪಿರಿಯಾಪಟ್ಟಣ : ನನ್ನ ಆಡಳಿತ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಸುಮಾರು 84 ಕೋಟಿ ಹಣ ಮಂಜೂರು ಮಾಡಿಸಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಮಾಜಿ ಸಚಿವ ಕೆ. ವೆಂಕಟೇಶ್ ತಿಳಿಸಿದರು.

ಪಟ್ಟಣದ ಬಿಎಂ ರಸ್ತೆಯ ಅಗ್ನಿಶಾಮಕ ದಳ ಕಚೇರಿಯ ಮುಂಭಾಗ ನಗರ ಭೂ ಸಾರಿಗೆ ಇಲಾಖೆ (ಡಲ್ಟ್ ) ಅನುದಾನದಲ್ಲಿ ಸುಮಾರು 492 ಲಕ್ಷ ರೂಗಳಲ್ಲಿ ಪಾದಚಾರಿ ಮಾರ್ಗ ಕಾಮಗಾರಿಗೆ ಶಂಕು ಸ್ಥಾಪನೆ ನೆರೆವೇರಿಸಿ ಮಾತನಾಡಿದ ಅವರು ಪಟ್ಟಣವು ದಿನಕ್ಕಳೆದಂತೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು ಇದರ ವೇಗಕ್ಕೆ ತಕ್ಕಂತೆ ಕೆಲಸ ಮಾಡುವುದು ಸವಲಿನ ಕೆಲಸವಾಗಿದೆ. ಪಟ್ಟಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖಾಸಗಿ ವ್ಯಕ್ತಿಗಳು ಲೇಔಟ್ ಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದಾರೆ. ಈ ವೇಳೆ ಲೇಔಟ್ ಮಾಲೀಕರು ತಾವು ಹೊಸದಾಗಿ ನಿರ್ಮಿಸುತ್ತಿರುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ಯುಜಿಡಿ, ಬೆಳಕು ಇನ್ನಿತರ ಸೌಕರ್ಯಗಳನ್ನು ಒದಗಿಸಿ ನಂತರ ಮಾರಾಟ ಮಾಡಬೇಕು ಆಗ ಮಾತ್ರ ಪಟ್ಟಣಕ್ಕೆ ಜನತೆಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಇದರ ಭಾರವನ್ನು ನಾವು ಹೊರುವಂತಾಗಿದೆ ಇದರಿಂದ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಖಾಸಗಿ ಲೇಔಟ್ ನಿರ್ಮಾಣದ ಸ್ಥಳಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ಸೂಚಿಸಿದ್ದರು.

ಪಟ್ಟಣಕ್ಕೆ ಕಾವೇರಿ ನೀರು ಶೀಘ್ರ : 

ಪಟ್ಟಣದ ಜನತೆಗೆ ಬಹುದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸುಮಾರು 65 ಕೋಟಿ ಅಂದಾಜು ವೆಚ್ಚದಲ್ಲಿ ಅಮೃತ್ 2 ಯೋಜನೆಯ ಎರಡನೇ ಹಂತ ಕೈಗೊಳ್ಳಲಾಗಿದೆ ಕಾಮಗಾರಿ ಶೇಕಡ 90ರಷ್ಟು ಮುಗಿದಿದ್ದು ಮುಂಬರುವ 2-3 ತಿಂಗಳ ಒಳಗಾಗಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದು ಶೀಘ್ರವೇ ಪಟ್ಟಣದ ಜನತೆಗೆ ಕಾವೇರಿ ನೀರನ್ನು ಒದಗಿಸಲಾಗುವುದು ಜೊತೆಗೆ ಅಲ್ಪಸಂಖ್ಯಾತರ ಅಲ್ಪಸಂಖ್ಯಾತ ಸಮುದಾಯವು ವಾಸಿಸುವ ಭಾಗಗಳಲ್ಲಿ ಎರಡು ಕೋಟಿ ಅಂದಾಜು ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಮಂಜೂರು ಮಾಡಿಸಲಾಗಿದೆ.

ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಳ ಗುರುತು ಮಾಡಿ : ಪಟ್ಟಣದಾದ್ಯಂತ ದಿನನಿತ್ಯ ಸಂಗ್ರಹಿಸುವ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವಾಗ ಪಟ್ಟಣದ ಹೊರಭಾಗದಲ್ಲಿ ವಾಸಿಸುವ ಜನರಿಗೆ ತೊಂದರೆ ಆಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ ಇದರಿಂದ ಅವರು ನಮ್ಮ ಬಳಿ ಬಂದು ವಾಸಿಸಲು ನಮಗೆ ಕಷ್ಟವಾಗುತ್ತಿದೇ ಇದನ್ನು ಶೀಘ್ರವೇ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಮನವಿ ಮಾಡುತ್ತಿದಾರೆ ಆದ್ದರಿಂದ ಪುರಸಭಾ ಅಧಿಕಾರಿಗಳು ಕಂದಾಯ ಇಲಾಖೆಗೆ ಒಳಪಡುವ ಸ್ಥಳವನ್ನು ಗುರುತು ಮಾಡುವಂತೆ ಸೂಚಿಸಿದರು

ಒಳ ಚರಂಡಿ ಸಂಪರ್ಕ ಪಡೆಯಿರಿ : ಪಟ್ಟಣದಲ್ಲಿ ಒಳ ಚರಂಡಿ ಕಾಮಗಾರಿ ಕೆಲಸ ಪೂರ್ಣವಾಗಿದ್ದರೂ ಸಹ ಸಾರ್ವಜನಿಕರು ಇದರ ಸಂಪರ್ಕವನ್ನು ಪಡೆದಿಲ್ಲ. ಇದರ ಸಂಪರ್ಕ ಪಡೆಯಲು ಪುರಸಭೆಯು 3,200ಗಳನ್ನು ನಿಗದಿಗೊಳಿಸಿದ್ದು ಕಡಿಮೆ ಮಾಡಿದರೆ ಎಲ್ಲರೂ ಸಂಪರ್ಕ ಪಡೆಯುವುದಾದರೆ ಕಡಿಮೆ ಮಾಡುವಂತೆ ಪುರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು ಜೊತೆಗೆ ಪಟ್ಟಣವು ವಿಸ್ತಾರವಾಗುತ್ತಿರುವುದರಿಂದ ಬಿಟ್ಟು ಹೋಗಿರುವ ಪ್ರದೇಶಗಳಗಳನ್ನು ಇದರ ವ್ಯಾಪ್ತಿಗೆ ಸೇರಿಸಲು ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಲಾಗಿದೆ ಈಗಾಗಲೇ ಪಟ್ಟಣದ ರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿ ಬಿಡುಗಡೆಯಾಗಿದ್ದು ನೂತನ ರಸ್ತೆಗಳನ್ನು ನಿರ್ಮಿಸುವ ಮೊದಲೇ ಪ್ರತಿಯೊಬ್ಬರು ಯುಜಿಡಿ ಸಂಪರ್ಕ ಪಡೆದುಕೊಳ್ಳಬೇಕು ನಂತರ ರಸ್ತೆಗಳನ್ನು ಕಟ್ ಮಾಡಿ ಸಂಪರ್ಕ ಪಡೆಯುವುದರಿಂದ ರಸ್ತೆಗಳ ಹಾಳಾಗುವುದನ್ನು ತಪ್ಪಿಸಬಹುದು ಇದಕ್ಕಾಗಿ ಎಲ್ಲರೂ ಪುರಸಭಾ ಅಧಿಕಾರಿಗಳೊಂದಿಗೆ ಕೈಜೋಡಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕೆಂದರು.

ಮಸಣಿಕಮ್ಮ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಗುದ್ದಲಿ ಪೂಜೆ : ಈ ತಿಂಗಳ ಅಂತ್ಯದಲ್ಲಿ ಮಸಣಿಕಮ್ಮ ದೇವಸ್ಥಾನ ಪುನ್ನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವರಿಸಲು ದಿನಾಂಕ ನಿಗದಿಗೊಳಿಸಲಾಗಿದೆ. ಈ ಹಿಂದೆ 13 ಕೋಟಿ ಅಂದಾಜು ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಕ್ರಮ ವಹಿಸಲಾಗಿತ್ತು ಆದರೆ ಇದನ್ನು ಪುನರ್ ಪರಿಸ್ಕರಿಸಿ 9 ಕೋಟಿ ಅಂದಾಜು ವೆಚ್ಚದಲ್ಲಿ ಸರಕಾರದ ಹಣದಿಂದಲೇ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ದೇವಸ್ಥಾನ ನಿರ್ಮಾಣ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ ಸ್ವಾಮಿ, ನಗರ ಘಟಕದ ಅಧ್ಯಕ್ಷ ಅಶೋಕ್ ಗೌಡ, ಮುಖಂಡರಾದ ವಿಷಕಂಠಯ್ಯ, ಚಂದ್ರಶೇಖರ್, ಬಸವರಾಜ್, ಹೊಲ್ಲದಪ್ಪ, ಅನಿಲ್ ಪುರಸಭಾ ಮಾಜಿ ಸದಸ್ಯರಾದ ಮಂಜುನಾಥ್, ರಾಜೇಶ್,  ಎಂ.ಸುರೇಶ್ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು  ಇದ್ದರು.