Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಿಧನರಾದ ಚೆನ್ನಮ್ಮ ದೇವೇಗೌಡರಿಗೆ ದೇವರಾಜ ಮೊಹಲ್ಲಾದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ


ಮೈಸೂರು: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ನಿಧನದ ಹಿನ್ನೆಲೆಯಲ್ಲಿ ಮೈಸೂರಿನ ದೇವರಾಜ ಮೊಹಲ್ಲಾ ನಿವಾಸಿಗಳ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಡೆಯಿತು.
ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಹಾಗು ನಿವಾಸಿಗಳು ಚೆನ್ನಮ್ಮ ದೇವೇಗೌಡರ ಜೀವನ ಮೌಲ್ಯಗಳು, ಕುಟುಂಬಕ್ಕೆ ನೀಡಿದ ಬೆಂಬಲ ಹಾಗೂ ಸಮಾಜಕ್ಕೆ ನೀಡಿದ ಆದರ್ಶಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಶಾಂತ್ ಗೌಡ, 89 ವರ್ಷ ಪೂರೈಸಿ ಇಹಲೋಕ ತ್ಯಜಿಸಿರುವ ಚೆನ್ನಮ್ಮ ದೇವೇಗೌಡ ಅವರ ಅಗಲಿಕೆ ರಾಜ್ಯ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಭಾರತೀಯ ಸಂಸ್ಕöÈತಿಯಲ್ಲಿ ತಾಯಂದಿರಿಗೆ ವಿಶೇಷ ಗೌರವವಿದ್ದು, ಒಬ್ಬ ವ್ಯಕ್ತಿಯ ಸಾಧನೆಯ ಹಿಂದೆ ತಾಯಿಯ ತ್ಯಾಗ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.
ಎಚ್.ಡಿ. ದೇವೇಗೌಡರು ಶಾಸಕರಾಗಿ, ಸಚಿವರಾಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೇರಲು ಚೆನ್ನಮ್ಮ ದೇವೇಗೌಡ ಅವರ ಪ್ರೋತ್ಸಾಹ ಮತ್ತು ಬೆಂಬಲ ಮಹತ್ತರ ಕಾರಣವಾಗಿದೆ. ರಾಜಕೀಯ ಜೀವನದಲ್ಲಿ ಬೆಳೆಯುವ ವ್ಯಕ್ತಿಗೆ ಕುಟುಂಬದ ಸಹಕಾರ ಅತ್ಯಗತ್ಯವಾಗಿದ್ದು, ದೇವೇಗೌಡರ ಯಶಸ್ಸಿನ ಹಿಂದೆ ಚೆನ್ನಮ್ಮ ದೇವೇಗೌಡ ಅವರ ನಿಸ್ವಾರ್ಥ ಸೇವೆ ಮತ್ತು ತ್ಯಾಗ ಅಡಗಿದೆ ಎಂದು ಹೇಳಿದರು.
ಕುಟುಂಬದ ಸದಸ್ಯರು ಉನ್ನತ ಹುದ್ದೆಗಳನ್ನು ಅಲಂಕರಿಸಿದ ಸಂದರ್ಭಗಳಲ್ಲಿಯೂ ಅವರು, ಯಾವುದೇ ಪ್ರಚಾರ ಬಯಸದೆ ಕುಟುಂಬದ ಆಧಾರಸ್ತಂಭವಾಗಿ ನಿಂತಿದ್ದರು. ಅವರ ಸರಳತೆ, ಸಹನಶೀಲತೆ ಹಾಗೂ ಕುಟುಂಬ ಮೌಲ್ಯಗಳು ಎಲ್ಲರಿಗೂ ಆದರ್ಶವಾಗಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಚೆನ್ನಮ್ಮನವರು ರಾಜಕೀಯವಾಗಿ ದೇವೇಗೌಡರಿಗೆ ಹಾಗೂ ಮಕ್ಕಳ ಬೆಳವಣಿಗೆಗೆ ಪೂರಕವಾಗಿ ನಿಂತು ಸಹಕರಿಸಿದ ಕಾರಣವೇ, ಈ ದಿನ ದೇವೇಗೌಡರು ಪ್ರಧಾನಮಂತ್ರಿ ಹುದ್ದೆಗೆ ಮತ್ತು ಮಕ್ಕಳು ಮುಖ್ಯಮಂತ್ರಿ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಲು ಕಾರಣವಾಯಿತು. ಸಾಕ್ಷಾತ್ ಅನ್ನಪೂರ್ಣೇಶ್ವರಿಯಾಗಿ ಇತರರಿಗೂ ಕೂಡ ನೆರಳಾಗಿ ನಿಂತವರು. ಸರಳ ವ್ಯಕ್ತಿತ್ವ ಹೊಂದಿದ ಇವರ ಅಗಲಿಕೆ ಯಾರಿಗಾ ತುಂಬಲಾರದ ನಷ್ಟ. ದುಃಖವನ್ನು ಸಹಿಸುವಂತ ಶಕ್ತಿಯನ್ನು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುವರ್ಣಮ್ಮ , ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್ , ಎ ರವಿ , ರಾಮಪ್ರಸಾದ್, ಮಹದೇವ್, ಗೋಪಿನಾಥ್ ,ಮಹೇಶ್, ಕೆಇಬಿ ನಾಗರಾಜ್, ಹೇಮಂತ್ ಗೌಡ, ಮೂಡ ರಮೇಶ್, ಕೆಎಸ್‌ಆರ್ಟಿಸಿ ವಿಶ್ವನಾಥ್ , ಉಮೇಶ್ ಗೌಡ, ಪ್ರವೀಣ್ ಜೈನ್ , ಒಕ್ತ ರಾಮ್, ಗುರುರಾಜ್ ಶೆಟ್ಟಿ , ಗುರುಪ್ರಸಾದ್, ಜ್ಞಾನೇಶ್, ಮಂಜುನಾಥ್, ಪ್ರಶಾಂತ್, ಮಂಗಳ, ಶಾಂತ, ನಂಜುAಡಿ ಹಾಗೂ ಇತರೆ ಮುಖಂಡರು ಹಾಜರಿದ್ದರು.