ಚಾಮುಂಡೇಶ್ವರಿಯಲ್ಲಿ 2.5 ಲಕ್ಷಕ್ಕೂ ಹೆಚ್ಚು ನಮೂನೆಗಳು ಡಿಜಿಟಲೀಕರಣ
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಿದ್ದ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ನಡೆಯುತ್ತಿದ್ದು, 2.5 ಲಕ್ಷಕ್ಕೂ ಹೆಚ್ಚು ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ವಿಶೇಷ ಪರಿಷ್ಕರಣೆಯ ಪ್ರಗತಿಯನ್ನು ಮೈಸೂರು ಉಪವಿಭಾಗಾಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿಗಳ ಕಚೇರಿಯು ಬಿಡುಗಡೆ ಮಾಡಿದೆ. ಕ್ಷೇತ್ರದಲ್ಲಿ ಜೂನ್ 16 ರಲ್ಲಿದ್ದ ಒಟ್ಟು 3,57,327 ಮತದಾರರನ್ನು ತಲುಪಲು ತಯಾರಿಸಲಾಗಿದ್ದ ಎಲ್ಲಾ ಗಣತಿ ನಮೂನೆಗಳನ್ನು 341 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಶೇಕಡಾ 100 ರಷ್ಟು ಯಶಸ್ವಿಯಾಗಿ ವಿತರಿಸಲಾಗಿದೆ. ಜೂನ್ 30 ರಿಂದ ಆಗಸ್ಟ್ 08, 2026 ರವರೆಗೆ ನಿಗದಿಯಾಗಿರುವ ಈ ಮನೆ-ಮನೆ ಗಣತಿ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಇದುವರೆಗೆ 2,50,059 ನಮೂನೆಗಳು ಡಿಜಿಟಲೀಕರಣಗೊಂಡಿದ್ದು, 49 ಮತಗಟ್ಟೆಗಳು ಶೇ. 90 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿವೆ. ಇದರಲ್ಲಿ 6,091 ಮತದಾರರು ಆನ್‌ಲೈನ್ ಮೂಲಕವೇ ನಮೂನೆಗಳನ್ನು ಸಲ್ಲಿಸಿದ್ದಾರೆ.
ಮನೆ-ಮನೆ ಪರಿಶೀಲನೆಯ ಸಮಯದಲ್ಲಿ ಮತದಾರರ ಪಟ್ಟಿಯನ್ನು ಪರಿಶುದ್ಧಗೊಳಿಸುವ ಭಾಗವಾಗಿ ಅನುಪಸ್ಥಿತ, ವಲಸೆ, ಮೃತ, ನಕಲಿ ಹಾಗೂ ಇತರರು ವರ್ಗದಡಿ ಒಟ್ಟು 51,681 ಮತದಾರರನ್ನು ಪತ್ತೆಹಚ್ಚಲಾಗಿದೆ. ಈ ವಿವರಗಳಲ್ಲಿ 9,052 ಮೃತಪಟ್ಟ ಮತದಾರರು, 29,363 ಖಾಯಂ ಆಗಿ ಬೇರೆಡೆಗೆ ವಲಸೆ ಹೋದವರು, 3,198 ಈಗಾಗಲೇ ನೋಂದಾಯಿತರಾಗಿರುವವರು, 9,941 ಗೈರುಹಾಜರಾದ ಅಥವಾ ಪತ್ತೆಯಾಗದ ಮತದಾರರು ಮತ್ತು 127 ಇತರ ಪ್ರಕರಣಗಳು ಸೇರಿವೆ.
--°C
Mysore, IN
Loading...