Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಬಿನಿ ನಾಲೆಗೆ ನೀರು ಕೂಡಲೇ ನೀರು ಹರಿಸಲು ರೈತರ ಒತ್ತಾಯ


ಮೈಸೂರು; ಕಬಿನಿ ಜಲಾಶಯದ ಅಚ್ಚು ಕಟ್ಟು ವ್ಯಾಪ್ತಿಯ ರೈತರು ಸಂಕಷ್ಟದಲ್ಲಿದ್ದು, ದನ, ಕುರುಗಳಿಗೆ ಕುಡಿಯುವ ನೀರು ಮೇವು ತುಂಬಾ ತೊಂದರೆಯಾಗಿದೆ. ಕೆರೆಕಟ್ಟೆಗಳು ಒಣಗಿವೆ . ಆದ್ದರಿಂದ ಕೂಡಲೇ ಕಬಿನಿ ನಾಲೆಗಳಿಗೆ ಕೂಡಲೇ ನೀರು ಹರಿಸುವಂತೆ ರಾಜ್ಯ ಸರ್ಕಾರವನ್ನು ಜಿಲ್ಲೆಯ ತಿ. ನರಸೀಪುರದಲ್ಲಿ ಶುಕ್ರವಾರ ನಡೆದ ರೈತರ ಸಭೆಯಲ್ಲಿ ಒತ್ತಾಯಿಸಲಾಯಿತು.
ಕಾವೇರಿ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಕೇವಲ ಸರ್ವ ಪಕ್ಷದ ಮುಖಂಡರನ್ನು ಕರೆದರೆ ಸಾಕಾಗಲ್ಲ. ಕಾವೇರಿ ವ್ಯಾಪ್ತಿಯ ರೈತ ಮುಖಂಡರು ನೈಜ್ಯ ಸಮಸ್ಯೆಗಳನ್ನ ಅರಿತಿರುವ ಕಾರಣ, ರೈತ ಮುಖಂಡರನ್ನು ಸಭೆಗೆ ಆಹ್ವಾನಿಸಬೇಕು. ಕೇವಲ ಸರ್ವ ಪಕ್ಷಗಳಿಂದ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ಮುಂದಾದರೆ ರಾಜಕಾರಣವಾಗುತ್ತದೆ. ಅಚ್ಚುಕಟ್ಟು ಭಾಗದ ರೈತ ಮುಖಂಡರಲ್ಲ ಕರೆಯುವ ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.