Skip to main content

3Kaala News

ಸುಭಾಷಿತ 

ತನ್ನ ಕಣ್ಣೀರನ್ನು ತಾನೇ ಒರೆಸಿಕೊಳ್ಳುವ ವ್ಯಕ್ತಿ, ಇನ್ನೊಬ್ಬರ ಕಣ್ಣಲ್ಲಿ ಕಣ್ಣೀರು ಕಾಣಲು ಇಷ್ಟಪಡುವುದಿಲ್ಲ.
ಯಾಕೆಂದರೆ…
ನೋವಿನ ತೂಕ ಎಷ್ಟು ಭಾರವೆಂದು ಅವನು ಜೀವನದಿಂದಲೇ ಕಲಿತಿರುತ್ತಾನೆ. ಆದ್ದರಿಂದ ತಾನು ನೊಂದುಕೊಂಡರೂ, ಇತರರ ಸಂತೋಷಕ್ಕಾಗಿ ಪ್ರಾರ್ಥಿಸುತ್ತಿರುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಂಗೀತ ಲೋಕಕ್ಕೆ ಎಸ್ ಜಾನಕಿ ಕೊಡುಗೆ ಅನನ್ಯ ; ಶಾಸಕ ಟಿ.ಎಸ್.ಶ್ರೀವತ್ಸ


ಮೈಸೂರು: ಸಂಗೀತ ಲೋಕಕ್ಕೆ ಎಸ್ ಜಾನಕಿ ಅವರ ಕೊಡುಗೆ ಅನನ್ಯವಾದದ್ದು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿ
ಪಾತಿ ಫೌಂಡೇಶನ್ ವತಿಯಿಂದ ಆಯೋಜಿಸಿಜಜಿಜ ಎಸ್ ಜಾನಕಿ ಗಾನಾಭಿಷೇಕ ನಮನ ಕಾರ್ಯಕ್ರಮವನ್ನು ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ತೆಲುಗು ಮಾತೃಭಾಷೆಚಿiÀiÁಗಿದ್ದರೂ ಎಸ್ ಜಾನಕಿ ಅವರು ಕನ್ನಡದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿ, ಕನ್ನಡಿಗರ ಪ್ರೀತಿ ಪಾತ್ರರಾದರು.
ಕನ್ನಡ ನಾಡಿನಲ್ಲೆ ನೆಲೆಸಿ , ಮೈಸೂರಿನಲ್ಲಿ ಕೊನೆ ಉಸಿರು ಬಿಟ್ಟರು, ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು
ವಿಧಾನ ಪರಿಷತ್ ಸದಸ್ಯ ಆರ್ ರಘು ಕೌಟಿಲ್ಯ ಮಾತನಾಡಿ, ತಮ್ಮ ಇಂಪಾದ ಕಂಠ ಹಾಗೂ ವಿನಯಶೀಲ ವ್ಯಕ್ತಿತ್ವದಿಂದ ಎಸ್.ಜಾನಕಿ ರವರು ಭಾರತೀಯ ಸಂಗೀತ ಲೋಕದಲ್ಲಿ ಶಾಶ್ವತ ಚಾಪು ಮೂಡಿಸಿದ್ದಾರೆ. ಅವರ ಗಾಯನ ಸದಾ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಜೀವಂತವಾಗಿರಲಿದೆ ಎಂದರು.
ಸಂಗೀತ ಸುಧೆ ಹಾಗೂ ಸಾಂಸ್ಕöÈತಿಕ ಮೆರುಗಿಗೆ ಮೇರು ಪರ್ವತದಂತಿದ್ದ ಭಾರತೀಯ ಸಂಸ್ಕöÈತಿಯ ಕೋಗಿಲೆ ಕಂಠದ ನಾರಿ, ಎಸ್. ಜಾನಕಿಯವರು ಸಂಗೀತ ಕ್ಷೇತ್ರಕ್ಕೆ ನೀಡಿದ ಅಪಾರ. ಅವರು ತಮ್ಮ ಸುಮಧುರ ಕಂಠದಿAದ ಮೂಲಕ ಪಸರಿಸಿದ ಗಾಯನದ ರಸಧಾರೆಯನ್ನು ಆಲಿಸುವುದೇ ಈ ಜನ್ಮದ ಸುಕೃತ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಆರ್ ರಘು ಕೌಟಿಲ್ಯ, ಯೋಗ ಕ್ಷೇತ್ರದ ಸಾಧನೆಗೈದ ಅನಂತು, ಸಾಹಿತ್ಯ ಕ್ಷೇತ್ರದಿಂದ ಪುಷ್ಪ ಅಯ್ಯಂಗಾರ್, ಹಾಗೂ ಧಾರ್ಮಿಕ ಕ್ಷೇತ್ರದಿಂದ ವೈದೇಹಿ ಅಯ್ಯಂಗಾರ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಆರ್‌ಎಸ್‌ಎಸ್ ನ ಮಾ.ವೆಂಕಟ್ ರಾಮ್,ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ವಕೀಲ ಮಧ್ವರಾಜ್ , ಪಾತಿ ಫೌಂಡೇಶನ್ ಅಧ್ಯಕ್ಷ ಎಂಡಿ ಪಾರ್ಥಸಾರಥಿ, ನಗರಪಾಲಿಕೆಯ ಮಾಜಿ ಸದಸ್ಯ ಮ.ವಿ ರಾಮಪ್ರಸಾದ್,ವಿಪ್ರ ಮುಖಂಡರಾದ ನಂ ಶ್ರೀಕಂಠಕುಮಾರ್ ,ಅಜಯ್ ಶಾಸ್ತಿç, ಟಿಎಸ್ ಅರುಣ್, ರಾಜಕುಮಾರ್, ಗಾಯಕ ಕೃಷ್ಣಮೂರ್ತಿ, ಬಸವರಾಜ್, ಮಹದೇವ್, ಮಂಜುನಾಥ್, ಪುರುಷೋತ್ತಮ್ ಹಾಗೂ ಇನ್ನಿತರರು ಹಾಜರಿದ್ದರು.