
ಮೈಸೂರು; ನಗರದ ಮದುವನದಲ್ಲಿ ಇರುವ ಶ್ರೀ ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರ 86 ನೇ ಪುಣ್ಯ ಸ್ಮರಣೆಯನ್ನು ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಮದುವನದಲ್ಲಿ ಮಹಾರಾಜರ ಬೃಂದಾವನಕ್ಕೆ ಸಾಂಪ್ರದಾಯಕ ಪೂಜೆ ಪುನಸ್ಕಾರಗಳೊಂದಿಗೆ ನಗರದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಚರಿಸಲಾಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ಜಯಂತಿ ಜೂನ್ 04 ನ್ನು ಮೈಸೂರು ದಿನವನ್ನಾಗಿ ರಾಜ್ಯ ಸರ್ಕಾರವು ಘೋಷಿಸಬೇಕೆಂದು ಹಾಗೂ ಮೈಸೂರು ನಗರದ ಎಲ್ಲಾ ಪಾರಂಪರಿಕ ಕಟ್ಟಡ ಗಳ ಸಂರಕ್ಷಣೆಯೊAದಿಗೆ ಪ್ರವಾಸಿತಾಣವನ್ನಾಗಿಸುವಲ್ಲಿ ಯೋಜನೆ ರೂಪಿಸಿ ಕಾರ್ಯಗತ ಗೊಳಿಸಬೇಕೆಂದು ಇದೇ ವೇಳೆ ಆಗ್ರಹಿಸಲಾಯಿತು.ಮೈಸೂರು ಯೋಗೀಸ್ ಟ್ರಸ್ಟ್ ಸಂಸ್ಥಾಪಕ ಯೋಗ ಪ್ರಕಾಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಂಸ್ಮರಣೆಯ ಪ್ರಯುಕ್ತ ಆ.3 ರಿಂದ 8 ರ ವರೆಗೂ ಮಧ್ಯಾಹ್ನ 3 ರಿಂದ 5 ರವರೆಗೂ ಮೈಸೂರು ಮಹಾರಾಜ ಸಂಸ್ಕöÈತ ಪಾಠಶಾಲೆಯಲ್ಲಿ ಸಪ್ತಾಹ ಏರ್ಪಡಿಸಲಾಗಿದೆ.