
ಮೂವರಿಗೆ ಪ್ರತ್ಯೇಕವಾಗಿ ಸಮುದಾಯದ ಬೆಂಬಲವಿದ್ದರೂ, ಸಚಿವ ಸ್ಥಾನ ನೀಡದ್ದಕ್ಕೆ ತೀವ್ರ ಅಸಮಾಧಾನ
*ಸಭೆಯಲ್ಲಿ ಮುಂದಿನ ಕಾರ್ಯತಂತ್ರದ ಕುರಿತು ಚರ್ಚೆ
ಮೈಸೂರು: ತಮಗೆ ಸಮುದಾಯಗಳ ಭಾರೀ ಬೆಂಬಲವಿದ್ದರೂ ಕೂಡ ಸಚಿವ ಸ್ಥಾನ ನೀಡದಿರುವುದಕ್ಕೆ ತೀವ್ರವಾಗಿ ಅಸಮಾಧಾನಗೊಂಡಿರುವ ಮೈಸೂರಿನ ಮೂವರು ಮಾಜಿ ಸಚಿವರುಗಳಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಹಾಗೂ ತನ್ವೀರ್ ಸೇಠ್ ಅವರು ಮಂಗಳವಾರ ನಗರದಲ್ಲಿ ರಹಸ್ಯವಾಗಿ ಸಭೆ ನಡೆಸಿ, ಚರ್ಚಿಸಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಗುಪ್ತವಾಗಿ ಸಭೆ ನಡೆಸಿದ ಈ ಮೂವರು ಮಾಜಿ ಸಚಿವರು, ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇವೆ. ಸಚಿವ ಸ್ಥಾನವನ್ನೂ ಸಮರ್ಥವಾಗಿ ನಿಭಾಯಿಸಿದ್ದೇವೆ. ಹೀಗಿದ್ದರೂ ನಮಗೆ ಸಚಿವ ಸ್ಥಾನ ನೀಡದಿರುವುದು ಸರಿಯಲ್ಲ. ಯಾವ ಕಾರಣಕ್ಕಾಗಿ ತಮಗೆ ಸಚಿವ ಸ್ಥಾನ ನೀಡಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿಲ್ಲ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಮೈಸೂರು ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲಾಗಿತ್ತು. ಈಗ ಒಬ್ಬರಿಗೆ ಮಾತ್ರ ನೀಡಿದ್ದಾರೆ. ಶಾಸರ್ಯಾರಿಗೂ ನೀಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಷಯ ತಿಳಿದು ಸಭೆಗೆ ಧಾವಿಸಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯನವರು, ತಂದೆ ಸಿದ್ದರಾಮಯ್ಯನವರಿಗೆ ನಿಮ್ಮ ಅಸಮಾಧಾನವನ್ನು ಗಮನಕ್ಕೆ ತರುವುದಾಗಿ ಹೇಳಿದರು. ಈ ಮೂವರು ಮಾಜಿ ಸಚಿವರು ನೀಡಿದ ಸಂದೇಶವನ್ನು ಹೊತ್ತು ಅಲ್ಲಿಂದ ತೆರಳಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಯಾಗುವ ಅರ್ಹತೆ,ಪ್ರತಿಭೆ ಇದ್ದೇ ಇರುತ್ತದೆ. ಸಚಿವರಾಗಿಯೇ ಸಿಎಂ ಆಗಬೇಕೆಂಬುದಿಲ್ಲ.ರಾಜ್ಯ ರಾಜಕಾರಣದ ಬಗ್ಗೆ ಸಧ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಮೂರು ವರ್ಷಗಳ ಕಾಲ ಉತ್ತಮವಾಗಿ ಕೆಲಸಮಾಡಲು ಜಿಲ್ಲೆಯ ಶಾಸಕರು,ಸಂಸದರು,ಪಕ್ಷದ ಪದಾಧಿಕಾರಿಗಳು,ಮುಖಂಡರು,ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಜಿಲ್ಲೆಯಲ್ಲಿ ಕೋಮುಸೌಹಾರ್ದತೆ ಹಾಳಾಗದಂತೆ, ಸಾಮರಸ್ಯದಿಂದ ಹೋಗುವಂತೆ ಕೆಲಸ ಮಾಡಿದ್ದೇನೆ ಎಂದರು. ಜಿಲ್ಲೆಯ ಅಭಿವೃದ್ದಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ.ಅಭಿವೃದ್ದಿ ಕೆಲಸ ಮಾಡಲು ಸರ್ಕಾರ ಉತ್ತಮ ಬೆಂಬಲ ನೀಡಿತ್ತು.ರಾಜ್ಯ ರಾಜಕೀಯ,ಸಚಿವಸಂಪುಟ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿಸಿದರು. ಮುಂದಿನ ಸಿಎಂ ಎನ್ನುವಂತೆ ಜನರು ಕೂಗುತ್ತಿದ್ದರೂ, ಸಚಿವ ಸ್ಥಾನವು ಸಿಗದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ,ಸಚಿವ ಸ್ಥಾನ ಕೈತಪ್ಪಿತು ಎಂಬ ಚಿಂತೆ ಇಲ್ಲ. ಮುಖ್ಯಮಂತ್ರಿಯಾಗುವ ಪ್ರತಿಭೆ,ಅರ್ಹತೆ ಇದೆ. ಸಚಿವರಾಗಿಯೇ ಮುಖ್ಯಮಂತ್ರಿಯಾಗಬೇಕೆAಬುದು ಇಲ್ಲ. ಅರ್ಹತೆ ಇದ್ದರೆ ಒಲಿಯಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಮಾಜಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ನಾವು ಯಾರ ಬಗ್ಗೆನೂ ದೂರಲ್ಲ,ಪಿತೂರಿ ಮಾಡಲು ಸಭೆ ಸೇರಿಲ್ಲ. ಪಿತೂರಿನೂ ಅಂತಾನೂ ಹೇಳಲ್ಲ. ನಮಗೆ ಯಾಕೇ ಸಚಿವ ಸ್ಥಾನ ಕೈತಪ್ಪಿದೆ ಎಂಬುದರ ಬಗ್ಗೆ ಸಭೆ ಮಾಡಿದ್ದೇವೆ ಎಂದರು. ಈ ಹಿಂದೆ ಮುಖ್ಯಮಂತ್ರಿ ಇದ್ದರೂ ಇಬ್ಬರನ್ನು ಜಿಲ್ಲೆಗೆ ಸಚಿವರನ್ನಾಗಿ ಮಾಡಲಾಗಿತ್ತು. ಈಗ ಯಾಕೆ ಅನ್ಯಾಯ ಆಗಿದೆ,ಯಾರಿಂದ ಆಗಿದೆ ಗೊತ್ತಿಲ್ಲ. ಯತೀಂದ್ರರಿಗೆ ಸ್ಥಾನ ಕೊಟ್ಟಿರುವುಕ್ಕೆ ನಮಗೆ ಯಾರಿಗೂ ತಕರಾರು ಇಲ್ಲ. ಆದರೆ,ಇನ್ನು ಯಾರಿಗಾದರೂ ಸಚಿವ ಸ್ಥಾನ ಕೊಡಬಹುದಾಗಿತ್ತು ಎಂಬುದರ ಬಗ್ಗೆ ಮಾತನಾಡಿದ್ದೇವೆ ಎಂದು ನುಡಿದರು. ಸಚಿವ ಸ್ಥಾನಕ್ಕೆ ಸಂಬAಧಿಸಿದAತೆ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿಲ್ಲ. ನಾವಿಬ್ಬರೂ ಭೇಟಿಯೂ ಆಗಿಲ್ಲ. ಒಂದು ವೇಳೆ ಭೇಟಿ ಮಾಡಿದರೆ ಚರ್ಚಿಸುತ್ತೇವೆ ಎಂದರು. ನಾನು,ಡಾ.ಎಚ್.ಸಿ.ಮಹದೇವಪ್ಪ ಇಬ್ಬರು ಸಿದ್ದರಾಮಯ್ಯಗೆ ಆತ್ಮೀಯರೆ ಆಗಿದ್ದೇವೆ. ಆದರೆ,ಸಚಿವ ಸ್ಥಾನ ವಿಚಾರದಲ್ಲಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.ಅದಕ್ಕಾಗಿಯೇ ನಾವು ಮೂವರು ಚರ್ಚೆ ನಡೆಸಿದ್ದೇವೆ ಎಂದರು.
ಮಾಜಿ ಸಚಿವ ತನ್ವೀರ್ಸೇಠ್ ಮಾತನಾಡಿ, ಎಲ್ಲ ಸರಿಯಾಗಿದೆ ಎನ್ನುವ ಭ್ರಮೆಯಲ್ಲಿ ಇಲ್ಲ, ಎಲ್ಲವೂ ಹಾಳಾಗಿದೆ ಎನ್ನುವುದನ್ನು ಹೇಳಲ್ಲ. ನ್ಯಾಯ-ಅನ್ಯಾಯದ ವಿಚಾರವಲ್ಲ. ಪಕ್ಷ ನಿಷ್ಠೆ ಇರುವಾಗ ಸಚಿವ ಸ್ಥಾನ ಕೈತಪ್ಪಿರುವುದು ಯಾಕೇ ಎಂಬುದು ಗೊತ್ತಾಗಬೇಕು. ಹೈಕಮಾಂಡ್ ಮಾತುಕತೆಗೆ ಕರೆದರೆ ಚರ್ಚೆ ಸಿದ್ಧರಿದ್ದೇವೆ ಎಂದು ಹೇಳಿದರು.
ಜಿಲ್ಲೆಯ ಮಟ್ಟಿಗೆ ನಾನು,ಡಾ.ಎಚ್.ಸಿ.ಮಹದೇವಪ್ಪ,ಕೆ.ವೆಂಕಟೇಶ್ ಹಿರಿಯ ಶಾಸಕರಾಗಿದ್ದೇವೆ. ಒಬ್ಬೊಬ್ಬರು ಒಂದೊAದು ಸಮುದಾಯಕ್ಕೆ ಸೇರಿದ ನಾಯಕರು. ಪ್ರಸ್ತುತ ರಾಜ್ಯದಲ್ಲಿ ನಡೆದಿರುವ ವಿದ್ಯಮಾನಗಳ ಕುರಿತು ವಿಶ್ಲೇಷಣೆ ಮಾಡಿದ್ದೇವೆ ಎಂದರು.ಪಕ್ಷದಲ್ಲಿ ಎಲ್ಲವೂ ಸರಿಯಿದೆ ಅಂತಾನೂ ಹೇಳಲ್ಲ. ಸರಿ ಇಲ್ಲ ಅಂತಾನೂ ಹೇಳಲು ಬಯಸಲ್ಲ. ಅನ್ಯಾಯ ಆಗಿರೋದು ನಿಜ.ಮೈಸೂರಿನಲ್ಲಿ ನಾವು ಮೂವರು ಒಂದಾಗಿದ್ದೇವೆ. ನಮಗೆ ಯಾಕೆ ಅನ್ಯಾಯ ಆಗಿದೆ,ಎಲ್ಲಿ ಅನ್ಯಾಯ ಆಗಿದೆ ಎಂಬುದರ ಬಗ್ಗೆ ಮಾತುಕತೆ ಮಾಡಿದ್ದೇವೆ. ಮುಂದಿನ ನಡೆ ಕುರಿತು ಈಗಲೇ ಏನು ಹೇಳಲ್ಲ. ನಾವು ಮೂವರು ಒಟ್ಟಿಗೆ ಸೇರಿದ್ದು ಒಂದು ಮುನ್ನುಡಿಯಾಗಲಿದೆ. ಹೊಸ ಸಂದೇಶ ರವಾನೆ ಮಾಡಿದ್ದೇವೆ ಎಂದರು.ಚಾಮುAಡೇಶ್ವರಿ ಆಶೀರ್ವಾದದಿಂದ ನಾವು ಒಂದಾಗಿದ್ದೇವೆ. ನಮಗೆ ಯಾಕೆ ಅನ್ಯಾಯ ಆಯಿತು ಅಂತ ಹೈಕಮಾಂಡ್ ಜತೆ ಮಾತುಕತೆ ಮಾಡುತ್ತೇವೆ. ಸಧ್ಯಕ್ಕೆ ಯಾರ ಮೇಲೂ ದೂರಲ್ಲ.ಆದರೆ,ಎಲ್ಲವೂ ಸರಿಯಿಲ್ಲ. ಈ ಬಗ್ಗೆ ಮೂವರು ಸಭೆ ಮಾಡಿದ್ದೇವೆ. ನಾವು ಸಚಿವರಾಗಿ ನಮ್ಮ ಶಕ್ತಿ ತೋರಿಸಬೇಕಿಲ್ಲ.ಮೂವರಿಗೂ ಪ್ರತ್ಯೇಕವಾಗಿ ಸಮುದಾಯದ ಬೆಂಬಲವಿದೆ. ನಮ್ಮ ಶಕ್ತಿ ಬಗ್ಗೆ ಮುಂದೆ ಮಾತನಾಡುತ್ತೇವೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪಕ್ಷ ಸಂಘಟನೆ,ಸಮುದಾಯದ ಸಂಘಟನೆ ಮೂಲಕ ತಮ್ಮದೇ ಆದ ಪ್ರಾಬಲ್ಯ,ಶಕ್ತಿ ಇದೆ.ಮೈಸೂರು,ಮಂಡ್ಯ,ಚಾಮರಾಜನಗರ,ಹಾಸನ,ಕೊಡಗು ಭಾಗಗಳಲ್ಲಿ ತಮ್ಮ ಶಕ್ತಿ ಇದೆ. ಕಾರ್ಯಕರ್ತರು ಹೇಳುವ ಮಾತಿನಂತೆ ಸಚಿವ ಸ್ಥಾನ ಕೈತಪ್ಪಿದ್ದು ಯಾಕೇ ಎಂಬುದು ಗೊತ್ತಾಗಬೇಕು. ಮಾತುಕತೆಗೆ ಹೈಕಮಾಂಡ್ ಕರೆದರೆ ನಾವು ಚರ್ಚೆಗೆ ಸಿದ್ಧರಿದ್ದೇವೆ ಎಂದು ನುಡಿದರು. ಗೌರವದೊಂದಿಗೆ ರಾಜೀ ಮಾಡಿಕೊಳ್ಳಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಆಗುವುದಕ್ಕೂ ಬಿಡಲ್ಲ. ಮೂವರು ನಾಯಕರು ಒಂದಾಗಿರುವುದು ಹೊಸ ಸಂದೇಶವಾಗಿದೆ. ಇಂದು ಜತೆಗೆ ಒಂದಾಗಿರುವುದು ಆರಂಭ. ಮುಂದೆ ಯಾವ ರೀತಿ ಸಾಗಬೇಕು ಎನ್ನುವುದನ್ನು ಕುಳಿತು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ಮುಂದಿನ 2028ರ ಚುನಾವಣೆಯ ಬಗ್ಗೆಯೂ ಯೋಚಿಸಿದ್ದೇವೆ ಎಂದರು.