Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಮಾಜದ ಚಿದ್ಬೆಳಕು ಆಗಿದ್ದ ಶ್ರೀ ಚಿದಾನಂದ ಸ್ವಾಮೀಜಿ: ಎಚ್.ವಿ.ರಾಜೀವ್


ಮೈಸೂರು: ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಚಿದ್ಬೆಳಕು ಆಗಿದ್ದ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ಅತೀವ ನೋವುಂಟು ಮಾಡಿದೆ ಎಂದು ಕೆಪಿಸಿಸಿ ಸದಸ್ಯರಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಸರಳ, ಸಜ್ಜನಿಕೆ, ಸೌಮ್ಯ ಸ್ವಭಾವದವರಾಗಿದ್ದ ಸ್ವಾಮೀಜಿಯವರು, ತಮ್ಮ ಕ್ರಾಂತಿಕಾರಕ ಆಲೋಚನೆಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹೊಸಮಠಕ್ಕೆ ಹೊಸ ರೂಪ ನೀಡಿದ್ದರು. 1982ರಲ್ಲಿ ಶ್ರೀ ಹೊಸಮಠದ 19ನೇ ಪೀಠಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಶ್ರೀಯುತರು, ತಮ್ಮ ಗುರು ಪರಂಪರೆಯನ್ನು ಸಮಷ್ಟಿ ಪ್ರಜ್ಞೆಯೊಂದಿಗೆ ಸಮರ್ಥವಾಗಿ ಮುನ್ನಡೆಸಿದ್ದರು ಎಂದು ಹೇಳಿದ್ದಾರೆ. 1984ರಲ್ಲಿ ಶ್ರೀ ನಟರಾಜ ಪ್ರತಿಷ್ಠಾನ ಸ್ಥಾಪಿಸಿದರು. ಟ್ರಸ್ಟ್ ಅಡಿಯಲ್ಲಿ ಶಿಶುವಿಹಾರಗಳು, ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಪಬ್ಲಿಕ್ ಸ್ಕೂಲ್ ನರ್ಸಿಂಗ್ ಸ್ಕೂಲ್, ಪದವಿ ಪೂರ್ವ ಹಾಗೂ ಪದವಿ ಕಾಲೇಜು, ಬಿ.ಇಡಿ ಕಾಲೇಜು, ಎಂ.ಕಾA. ಸ್ನಾತಕೋತ್ತರ ಕೇಂದ್ರ, ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ಸೇರಿದಂತೆ 24ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿ ತಮ್ಮ ದೂರದೃಷ್ಟಿಯೊಂದಿಗೆ ವಿಸ್ತರಿಸಿ ಲಕ್ಷಾಂತರ ಕುಟುಂಬಗಳಿಗೆ ಅಕ್ಷರ, ಅನ್ನ ಹಾಗೂ ಜ್ಞಾನ ದಾಸೋಹ ಮಾಡಿದ ತ್ರಿವಿಧ ದಾಸೋಹಿಯಾಗಿದ್ದರು.
ಶ್ರೀ ಚಿದಾನಂದ ಸ್ವಾಮೀಜಿ ಅವರ ನಿಧನದಿಂದ ಧಾರ್ಮಿಕ, ಸಾಂಸ್ಕöÈತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಎಚ್.ವಿ.ರಾಜೀವ್ ಅವರು ಈ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ