
ಮೈಸೂರು; ನಮ್ಮದೇಶ ಪ್ರೇಮ ಸ್ವಾತಂತ್ರö್ಯ ದಿನಾಚರಣೆಯ ಸಂಭ್ರಮಕ್ಕಷ್ಟೇ ಸೀಮಿತಗೊಳ್ಳಬಾರದು.ದೇಶಪ್ರೇಮ ನಮ್ಮಲ್ಲಿ ಪ್ರತಿದಿನವೂ, ಪ್ರತಿಕ್ಷಣವೂ ಇರಬೇಕು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಬನ್ನಿಮಂಟಪ ಕವಾಯಿತು ಮೈದಾನದಲ್ಲಿ
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಲಾಗಿದ್ದ 80 ನೇ ಸ್ವಾತಂತ್ರ÷್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬ್ರಿಟಿಷರದಾಸ್ಯದಿಂದ ಮುಕ್ತವಾದ ಈ ದಿನ ಭಾರತೀಯರೆಲ್ಲರ ಪಾಲಿಗೆ ಸಂಭ್ರಮದ ದಿನವಾಗಿದೆ.ಮಹಾತ್ಮಗಾಂಧೀಜಿ, ಜವಾಹರ್ ಲಾಲ್ ನೆಹರು, ಸರ್ಧಾರ್ ವಲ್ಲಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತಿç, ಬಾಲ ಗಂಗಾಧರತಿಲಕ್, ಝಾನ್ಸಿರಾಣಿ ಲಕ್ಷಿö್ಮÃಬಾಯಿ, ದಾದಾ ಬಾಯ್ ನವರೋಜಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಸಹಸ್ರಾರು ಮಹನಿಯರ ತ್ಯಾಗ ಬಲಿದಾನದ ಫಲವಾಗಿ ಸ್ವಾತಂತ್ರö್ಯದೊರಕಿದೆ.ಅದನ್ನು ನಾವೆಲ್ಲಾಅತ್ಯಂತಜಾಗರೂಕತೆಯಿAದ ಕಾಪಾಡಿಕೊಳ್ಳಬೇಕಾಗಿದೆ ಎಂದರು.
ಸುಮಾರು ಎರಡು ಶತಮಾನಗಳ ಕಾಲ ನಡೆದದೇಶದ ಸ್ವಾತಂತ್ರö್ಯ ಚಳುವಳಿಯಲ್ಲಿ ಸಂಗೊಳ್ಳಿ ರಾಯಣ್ಣ, ರಾಣಿಅಬ್ಬಕ್ಕ, ಗಂಗಾಧರರಾವ್ದೇಶಪಾAಡೆ, ಎನ್. ಎಸ್. ಹರ್ಡಿಕರ್, ಎಚ್.ಎಸ್. ದೊರೆಸ್ವಾಮಿ, ಕಮಲಾದೇವಿ ಚಟ್ಟೋಪಾಧ್ಯಾಯ, ಇನ್ನೂ ಹಲವಾರು ನಾಯಕರುರಾಜ್ಯದಲ್ಲಿ ಸ್ವಾತಂತ್ರö್ಯ ಚಳುವಳಿಯ ನೇತೃತ್ವವಹಿಸಿ ತನು, ಮನ, ಧನ ಅರ್ಪಿಸಿ ಹೋರಾಡಿದ್ದಾರೆ.ಮೈಸೂರಿನಲ್ಲಿದಾಸಪ್ಪ, ಸಾಹುಕಾರಚೆನ್ನಯ್ಯ, ತಗಡೂರುರಾಮಚಂದ್ರರಾವ್ ಸೇರಿದಂತೆಅನೇಕರು ಸ್ವಾತಂತ್ರö್ಯ ಚಳುವಳಿಗೆ ಅಪಾರಕೊಡುಗೆ ನೀಡಿದ್ದಾರೆ.
ಸ್ವಾತಂತ್ರ್ಯ ಪಡೆಯುವ ಸಂದರ್ಭ ಹಿಂದುಳಿದ ರಾಷ್ಟçವಾಗಿದ್ದ ಭಾರತವು, ಡಾ. ಬಿ. ಆರ್.ಅಂಬೇಡ್ಕರ್ಅವರು ರಚಿಸಿಕೊಟ್ಟ ಸರ್ವ ಶ್ರೇಷ್ಠ ಸಂವಿಧಾನದ ಆಶಯದೊಂದಿಗೆ ಎಲ್ಲಾ ವರ್ಗದಜನರ ಶ್ರಮದಿಂದಾಗಿ ಸರ್ವತೋಮುಖ ಬೆಳವಣಿಗೆ ಕಾಣುತ್ತಾ ಸಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರಅತಿವೃಷ್ಠಿ ಹಾಗೂ ಬರನಿರ್ವಹಣೆ ಬಗ್ಗೆ ಮೊದಲ ಆದ್ಯತೆ ವಹಿಸಿದ್ದು ಎಲ್ಲಾ ಜಿಲ್ಲೆಗಳಲ್ಲೂ ಬರಪೀಡಿದ ಪ್ರದೇಶಗಳ ಅಧ್ಯಯನ ನೆಡೆದಿದೆ. ರೈತರಜನ ಜಾನುವಾರುಗಳ ಹಿತ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಅವಕಾಶ ಕಲ್ಪಿಸಿದ್ದು, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಂದಿಕೊAಡಿರುವ ಒಂದು ನಗರಸಭೆ, ನಾಲ್ಕು ಪಟ್ಟಣ ಪಂಚಾಯಿತಿಗಳು ಹಾಗೂ ಎಂಟುಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸುವುದರ ಮೂಲಕ “ಬೃಹತ್ ಮೈಸೂರು ಮಹಾನಗರ ಪಾಲಿಕೆ” ಯನ್ನು ರಚಿಸಲು ಸರ್ಕಾರವುತನ್ನ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿದೆ. ಮೈಸೂರು ನಗರದ ಸಮಗ್ರಅಭಿವೃದ್ಧಿಗೆ ನೀಲಿ ನಕ್ಷೆಯಕಾರ್ಯತಂತ್ರವನ್ನು ರೂಪಿಸಿರುತ್ತದೆ. ಇವಲ್ಲದೆ, ಮೈಸೂರು ನಗರದಲ್ಲಿ ಹೊಸದಾಗಿ ಕಿದ್ವಾಯಿ ಸ್ಮಾರಕ ಆಸ್ಪತ್ರೆ, ನಿಮ್ಹಾನ್ಸ್ಆಸ್ಪತ್ರ ಸ್ಥಾಪಿಸಲು ಕ್ರಮವಹಿಸಲಾಗಿದೆ.
ನಶೆ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿಯುವಜನತೆಯಲ್ಲಿಜಾಗೃತಿ ಮೂಡಿಸಿ ಮಾದಕ ವಸ್ತುಗಳ ಸೇವನೆಯಿಂದದೂರವಿರಿಸಲು ಶಾಲಾ ಕಾಲೇಜುಗಳಲ್ಲಿ ಬೇಡ ಬ್ರೋ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನಾ ಸಚಿವರು ಧ್ವಜ ವಂದನೆ ಸ್ವೀಕರಿಸಿ, ತುಕಡಿಗಳ ಪರಿವೀಕ್ಷಣೆ ನಡೆಸಿದರು. 24 ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ವಿವಿಧ ಶಾಲೆಗಳ ಮಕ್ಕಳಿಂದ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡಲಾಯಿತು. ಅಪಘಾತ ರಹಿತ ವಾಹನ ಚಾಲನೆ ಮಾಡಿದ ಕೆ ಎಸ್ ಆರ್ ಟಿ ಸಿ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಯಿತು. ಶಾಸಕ ತನ್ವೀರ್ ಸೇಠ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ ಶಿವಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎನ್.ರಂಗಸ್ವಾಮಿ, ಮೈಸೂರು ಪೇಂಟ್ಸ್ ಆಂಡ್ ವಾರ್ನಿಶ್ ಲಿಮಿಟೆಡ್ ನ ಅಧ್ಯಕ್ಷ ಹೆಚ್ ಡಿ ಗಣೇಶ್,ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್, ಜಿಲ್ಲಾಧಿಕಾರಿ ಜಿ ಲಕ್ಷಿ÷್ಮÃಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿU ಎಸ್ ಯುಕೇಶ್ ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಎಂ ಕೆ ಸವಿತಾ, ಅಪರ ಜಿಲ್ಲಾಧಿಕಾರಿ ಐಶ್ವರ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

