
ಮೈಸೂರು; ನೈರುತ್ಯ, ಮೈಸೂರು ವಿಭಾಗದಿಂದ ರೈಲ್ವೆಯಿಂದ 80ನೇ ಸ್ವಾತಂತ್ರ÷್ಯ ದಿನಾಚರಣೆಯನ್ನು ಮೈಸೂರು ರೈಲ್ವೆ ಮೈದಾನದಲ್ಲಿ ದೇಶಭಕ್ತಿ ಮತ್ತು ಸಂಭ್ರಮದಿ0ದ ಆಚರಿಸಲಾಯಿತು. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ರಾಷ್ಟçಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸರಕು ಸಾಗಣೆ 9.74% ಹೆಚ್ಚಾಗಿದೆ ಹಾಗೂ ಸರಕು ರೈಲುಗಳ ವೇಗದಲ್ಲಿ 14% ಏರಿಕೆಯಾಗಿದೆ. ಎನ್ಎಂಜಿ ಲೋಡಿಂಗ್ನಲ್ಲಿ 43% ಹೆಚ್ಚಳವಾಗಿದ್ದು, ದ್ವಿಚಕ್ರ ವಾಹನಗಳ ಸಾಗಣೆಯಲ್ಲಿ 53% ಏರಿಕೆ ಕಂಡುಬAದಿದೆ. ಗತಿ ಶಕ್ತಿ ಕಾರ್ಗೋ ಟರ್ಮಿನಲ್ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸೈಡಿಂಗ್ ಅನ್ನು ಮೊದಲ ಬಾರಿಗೆ ಬಳಸಲಾಗಿದ್ದು, ಇದುವರೆಗೆ ಎರಡು ರೇಕ್ಗಳನ್ನು ಲೋಡ್ ಮಾಡುವ ಮೂಲಕ ಸುಮಾರು 65 ಲಕ್ಷ ಆದಾಯ ಗಳಿಸಲಾಗಿದೆ. ಅಲ್ಲದೆ, ಅರಸೀಕೆರೆ-ಯಲಹಂಕ ನಡುವೆ ಹೊಸ ಮೆಮು ರೈಲು ಸೇವೆ ಆರಂಭಿಸಲಾಗಿದೆ.
ಹಣಕಾಸು, ಸಿಗ್ನಲಿಂಗ್ ಮತ್ತು ಸುರಕ್ಷತಾ ಕ್ಷೇತ್ರಗಳಲ್ಲಿಯೂ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. 1,200 ಪಿಪಿಎಂ ಗಳನ್ನು 7ನೇ ವೇತನ ಆಯೋಗದನ್ವಯ ನವೀಕರಿಸಲಾಗಿದ್ದು, ಪಿಂಚಣಿ ಪಾವತಿಯನ್ನು ಸುಗಮವಾಗಿ ಮತ್ತು ನಿಖರವಾಗಿ ನಿರ್ವಹಿಸಲು ಇದರಿಂದ ಸಹಾಯವಾಗಲಿದೆ. ವಿಶ್ರಾಂತಿ ಗೃಹಗಳು, ರೈಲ್ವೆ ಮ್ಯೂಸಿಯಂ ಮತ್ತು ರೈಲ್ವೆ ಆಸ್ಪತ್ರೆಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಯುಪಿಐ ಪಾವತಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಂತರಿಕ ಪರಿಶೀಲನೆಗಳ ಮೂಲಕ ಸುಮಾರು 7.15 ಕೋಟಿ ಉಳಿತಾಯ ಮಾಡಲಾಗಿದೆ. 15 ಲೆವೆಲ್ ಕ್ರಾಸಿಂಗ್ಗಳ ಇಂಟರ್ಲಾಕಿAಗ್ ಗುರಿಯ ಪೈಕಿ ಈಗಾಗಲೇ 9 ಲೆವೆಲ್ ಕ್ರಾಸಿಂಗ್ಗಳ ಕೆಲಸ ಪೂರ್ಣಗೊಂಡಿದೆ. ಅರಸೀಕೆರೆ?ಶಿವಮೊಗ್ಗ ವಿಭಾಗದಲ್ಲಿ ಐಬಿಎಸ್ ಅಳವಡಿಸಲಾಗಿದ್ದು, 13 ಲೆವೆಲ್ ಕ್ರಾಸಿಂಗ್ಗಳಲ್ಲಿ ಮಿನಿ ಐಪಿಎಸ್ ವ್ಯವಸ್ಥೆ ಒದಗಿಸಲಾಗಿದೆ.
ಯಾಂತ್ರಿಕ, ವೈದ್ಯಕೀಯ ಮತ್ತು ಪರಿಸರ ವಿಭಾಗಗಳೂ ಉತ್ತಮ ಸಾಧನೆ ಮಾಡಿವೆ. ರೈಲು ಸಂಖ್ಯೆ 16215ರ ನಾಲ್ಕು ರೇಕ್ಗಳನ್ನು ಐಸಿಎಫ್ ನಿಂದ ಎಲ್ ಹೆಚ್ ಬಿ ಕೋಚ್ಗಳಿಗೆ ಪರಿವರ್ತಿಸಲಾಗಿದೆ. ದೋಷಗಳು ಮತ್ತು ಬಿರುಕುಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಎನ್ಕೋಡಿಂಗ್ ಕ್ಯಾಮರಾಗಳು ಖರೀದಿಸಲಾಗಿದೆ. ಹಾಸನ ರಸ್ತೆ ನಿಲ್ದಾಣದಲ್ಲಿ ಬಿಓಏಕ್ಸ್ಎನ್ ಬಾಗಿಲುಗಳನ್ನು ಸರಿಪಡಿಸುವ ಉಪಕರಣವನ್ನು ಸ್ವಂತವಾಗಿ ಅಭಿವೃದ್ಧಿಪಡಿಸಲಾಗಿದ್ದು, ಒಓಉಖಿ ಎಂಎನ್ ಜಿಟಿ, ಎಸ್ಎಬಿ ಟೆಸ್ಟ್ ಬೆಂಚ್ ನಿರ್ಮಿಸಲಾಗಿದೆ. ವೈದ್ಯಕೀಯ ವಿಭಾಗವು ನಿಗದಿತ ಅವಧಿಯಲ್ಲಿ 337 ಪಿಎಂಇ ಗಳು ಮತ್ತು 414 ಆರ್ ಎಂಇಗಳನ್ನು ಪೂರ್ಣಗೊಳಿಸಿದೆ. ಹಾಸನ ರೈಲ್ವೆ ನಿಲ್ದಾಣಕ್ಕೆ ಎರಡು ವರ್ಷಗಳ ಅವಧಿಗೆ ‘ಈಟ್ ರೈಟ್ ಸ್ಟೇಷನ್’ ಪ್ರಮಾಣಪತ್ರ ದೊರೆತಿದೆ. ರೈಲ್ವೆ ಆಸ್ಪತ್ರೆಯ ಮಕ್ಕಳ ವಾರ್ಡ್ ಅನ್ನು ನವೀಕರಿಸಲಾಗಿದ್ದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್, ಶಾಖಾಧಿಕಾರಿಗಳು, ರೈಲ್ವೆ ಸಿಬ್ಬಂದಿ, ಲಲಿತಾ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಮಾನ್ಯತೆ ಪಡೆದ ರೈಲ್ವೆ ಸಂಘಟನೆಗಳು ಮತ್ತು ಸಂಘಗಳ ಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.