
26ನೇ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್ ನಲ್ಲಿ ಮೈಸೂರಿನ ಮಾದಪ್ಪ ಯೋಗೇಂದ್ರ ಭಾಗಿ
ಮೈಸೂರು; ನಗರದ ಗುರು ರೆಸಿಡೆನ್ಸಿಯಲ್ಲಿ ಇಂದು ಮೈಸೂರು ಅಥ್ಲೆಟಿಕ್ಸ್ ಕ್ಲಬ್ ವತಿಯಿಂದ, ದಕ್ಷಿಣ ಕೊರಿಯಾದ ಡೆಗೂ ನಗರದಲ್ಲಿ ನಡೆಯಲಿರುವ 26ನೇ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್ ನಲ್ಲಿ ಭಾಗವಹಿಸುತ್ತಿರುವ ಅಂತರರಾಷ್ಟಿçÃಯ ಕ್ರೀಡಾಪಟು ಹಾಗೂ ಕ್ಲಬ್ ನ ಕಾರ್ಯದರ್ಶಿ ಮಾದಪ್ಪ ಯೋಗೇಂದ್ರ ಅವರನ್ನು ಸನ್ಮಾನಿಸಿ, ಅವರಿಗೆ ಶುಭ ಕೋರಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರ ಅಂಶಿ ಪ್ರಸನ್ನಕುಮಾರ್, ಟಿ.ಆರ್. ಸತೀಶ್ ಕುಮಾರ್ ಹಾಗೂ ಕ್ಲಬ್ ಅಧ್ಯಕ್ಷ ಚೈನ್ ಸಿಂಗ್ ರಾಜ್ ಪುರೋಹಿತ್, ಕ್ರೀಡಾ ಪತ್ರಕರ್ತ ಉದಯ, ಅವಿನಾಶ್ ಜೈನ್ಹಳ್ಳಿ, ಜನಕ ಸಿಂಗ್ ಭಾಟಿ, ಛಾಯಾಗ್ರಾಹಕ ಬಸವರಾಜ ಅನುರಾಗ್ ಹಾಗೂ ಕ್ಲಬ್ನ ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ.ಆರ್. ಪ್ರಭಾಕರ್, ಕೆ.ಬಿ. ಗಂಗಾಧರ್, ಮಹಾದೇವಯ್ಯ, ಕೆ. ಗೋಪಿನಾಥ್ ಮತ್ತು ಗೋಪಾಲಕೃಷ್ಣ ಉಪಸ್ಥಿತರಿದ್ದರು. ಎಂ. ಯೋಗೇಂದ್ರ ಅವರು ಭಾರತವನ್ನು ಪ್ರತಿನಿಧಿಸುತ್ತಾ, ಪುರುಷರ ವಿಭಾಗದ (60+ ವಯೋಮಿತಿ) 2000 ಮೀಟರ್ ಸ್ಟೀಪಲ್ ಚೇಸ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.

ಮೈಸೂರು; ನಗರದ ಅಶೋಕಪುರಂನಲ್ಲಿರುವ ಆರ್‌ಎನ್‌ಎಂ ಎಂಟರ್‌ಪ್ರೆöÊಸಸ್ ಆವರಣದಲ್ಲಿ, ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಮನಾ ನರಸಿಂಹಮೂರ್ತಿ ಅವರು, ಆಗಸ್ಟ್ 22 ರಿಂದ ಸೆಪ್ಟೆಂಬರ್ 3 ರವರೆಗೆ ನಡೆಯಲಿರುವ 26ನೇ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಂತರರಾಷ್ಟಿçÃಯ ಕ್ರೀಡಾಪಟು ಎಂ. ಯೋಗೇಂದ್ರ ಅವರನ್ನು ‘ಬ್ಲೇಜರ್’ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಿ. ಬಸವರಾಜು, ಖಜಾಂಚಿ ಸೋಮಶೇಖರ್ ಕೆ ಎನ್ ಹಾಗೂ ಎಂ.ಪಿ. ಚಂದ್ರಶೇಖರ್, ಮಹಾದೇವು ಎಸ್., ಮಹಾದೇವಯ್ಯ, ವಿಶ್ವೇಶ್ವರ ಆರಾಧ್ಯ, ಮಹೇಶ್ ಎಂ.ಎಸ್., ವಿನಾಯಕ ಎನ್. ಮತ್ತು ಡಾ. ರಘುನಂದನ್ ಉಪಸ್ಥಿತರಿದ್ದರು.