
ಮೈಸೂರು; ದೃಷ್ಟಿದೋಷ ಹೊಂದಿರುವ ನೌಕರರು ತಮ್ಮ ದೈನಂದಿನ ಕಚೇರಿ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ, ಸುಲಭವಾಗಿ ಲಭ್ಯವಿರುವ ಡಿಜಿಟಲ್ ಸಾಧನಗಳು ಹಾಗೂ ಕಚೇರಿ ತಂತ್ರಾAಶಗಳ ಪರಿಣಾಮಕಾರಿ ಬಳಕೆಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಆಯೋಜಿಸಿತು.
ತರಬೇತಿ ಕಾರ್ಯಕ್ರಮದಲ್ಲಿ ರೈಲ್ವೆ ಕಚೇರಿಗಳಲ್ಲಿ ಬಳಸುವ ವಿವಿಧ ಡಿಜಿಟಲ್ ವ್ಯವಸ್ಥೆಗಳು ಮತ್ತು ಕಚೇರಿ ತಂತ್ರಾAಶಗಳ ಕುರಿತು ಪ್ರಾಯೋಗಿಕ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಯಿತು. ಎಚ್ಆರ್ಎಂಎಸ್ (ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ), ಇ- ಆಫೀಸ್ (ಕಡತ ರಚನೆ, ಕಡತ ಚಲಾವಣೆ, ಟಿಪ್ಪಣಿ ಹಾಗೂ ಪತ್ರವ್ಯವಹಾರ), ಯುಎಂಐಡಿ (ವಿಶಿಷ್ಟ ವೈದ್ಯಕೀಯ ಗುರುತಿನ ಚೀಟಿ), ಅಧಿಕೃತ ಟಿಪ್ಪಣಿಗಳು ಮತ್ತು ಪತ್ರಗಳ ತಯಾರಿ, ಮೈಕ್ರೋಸಾಫ್ಟ್ ವರ್ಡ್ ಮತ್ತು ಎಕ್ಸೆಲ್, ಕೀಬೋರ್ಡ್ ಶಾರ್ಟ್ಕಟ್ಗಳು ಹಾಗೂ ಕಚೇರಿ ಕಾರ್ಯವನ್ನು ಸುಗಮಗೊಳಿಸುವ ಪ್ರವೇಶಯೋಗ್ಯತಾ ಸೌಲಭ್ಯಗಳ ಕುರಿತು ತರಬೇತಿ ನೀಡಲಾಯಿತು.
ಕಾರ್ಯಕ್ರಮವನ್ನು ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್ ಉದ್ಘಾಟಿಸಿದರು. ಬಳಿಕ ದೃಷ್ಟಿದೋಷ ಹೊಂದಿರುವ ನೌಕರರೊಂದಿಗೆ ಸಂವಾದ ನಡೆಸಿ, ಅವರ ಕುಂದುಕೊರತೆಗಳು, ಸಲಹೆಗಳು ಹಾಗೂ ಕೆಲಸಕ್ಕೆ ಸಂಬAಧಿಸಿದ ಸಮಸ್ಯೆಗಳನ್ನು ಆಲಿಸಿದರು. ನೌಕರರು ಪ್ರಸ್ತಾಪಿಸಿದ ವಿಷಯಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೈಸೂರು ವಿಭಾಗದ ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, ಶ್ರೀ ಶಿರೀಶ್ ಎಸ್. ಕಾಂಬ್ಳೆ ಸೇರಿದಂತೆ ರೈಲ್ವೆ ಅಧಿಕಾರಿಗಳು, ಇತರ ಸಿಬ್ಬಂದಿ ಉಪಸ್ಥಿತರಿದ್ದರು.