
ಅಭಿಮನ್ಯು ಯುಗಕ್ಕೆ ತೆರೆ; ಯಾರಾಗುತ್ತಾರೆ ಗಜಪಡೆಯ ಹೊಸ ಕ್ಯಾಪ್ಟನ್
ಮೈಸೂರು: ಇಲ್ಲಿಯ ತನಕ ಗಜಪಡೆಯ ಕ್ಯಾಪ್ಟನ್ ಆಗಿದ್ದ ಆನೆ ಅಭಿಮನ್ಮ್ಯಗೆ ಈ ಬಾರಿ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕೊಕ್ ನೀಡಲಾಗಿದೆ. ದಸರಾದಿಂದ ಅಭಿಮನ್ಯು ಹೊರಗುಳಿಯುತ್ತಿದ್ದಾನೆ. ಹಾಗಾಗಿ ಯಾರಾಗುತ್ತಾರೆ ಗಜಪಡೆಯ ಕ್ಯಾಪ್ಟನ್ ಎಂಬ ಕುತೂಹಲವುಂಟಾಗಿದೆ.
ಕಳೆದ ಹಲವು ವರ್ಷಗಳಿಂದ ಚಿನ್ನದ ಅಂಬಾರಿಯ ಸಾರಥಿಯಾಗಿ ಮೆರೆಯುತ್ತಿದ್ದ ಕ್ಯಾಪ್ಟನ್ ಅಭಿಮನ್ಯು 2026ರ ದಸರಾ ಗಜಪಡೆಯ ಪಟ್ಟಿಯಿಂದ ಹೊರಗುಳಿದಿದ್ದಾನೆ.
ಅಭಿಮನ್ಯುವಿಗೆ 60 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಭಾರವಾದ ದಸರಾ ಜವಾಬ್ದಾರಿಯಿಂದ ದೂರವಿಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ಕಳೆದ ಬಾರಿ ನಡೆದ ದಸರಾದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅಭಿಮನ್ಯುವಿಗೆ ಇದು ಭಾವುಕ ವಿದಾಯವಾಗಲಿದೆ.
ಅಭಿಮನ್ಯು ಸ್ಥಾನಕ್ಕೆ ಯಾರು?
ಅಭಿಮನ್ಯು ಹೊರಗುಳಿದಿರುವ ಬೆನ್ನಲ್ಲೇ ಚಿನ್ನದ ಅಂಬಾರಿ ಹೊರುವ ನೂತನ ಗಜಸಾರಥಿ ಯಾರು ಎಂಬ ಕುತೂಹಲ ಜನರಲ್ಲಿ ಮೂಡಿದೆ.
ಗಜಪಡೆ ಆಯ್ಕೆ;
ಈ ಬಾರಿಯ ದಸರಾಗೆ ಗಜಪಡೆಯನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಧನಂಜಯ, ಏಕಲವ್ಯ, ಮಹೇಂದ್ರ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷಿ÷್ಮ, ಕಾವೇರಿ, ರೂಪ, ಚೈತ್ರ ಹಾಗೂ ಶ್ರೀಕಂಠ ಸೇರಿದ್ದಾರೆ. ತುರ್ತು ಸಂದರ್ಭಕ್ಕಾಗಿ ಭೀಮ ಮತ್ತು ಹರ್ಷನನ್ನು ಮೀಸಲು ಆನೆಯನ್ನಾಗಿ ಇರಿಸಲಾಗಿದೆ.
ಅಭಿಮನ್ಯುವಿನ ಉತ್ತರಾಧಿಕಾರಿಯಾಗಿ ಧನಂಜಯ, ಮಹೇಂದ್ರ ಹಾಗೂ ಪ್ರಶಾಂತ ಹೆಸರುಗಳು ಮುಂಚೂಣಿಯಲ್ಲಿದ್ದವು ಎಂಬ
ಅಭಿಮನ್ಯು ಯುಗಕ್ಕೆ ತೆರೆ?;
2020ರಿಂದ ಸತತವಾಗಿ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯು, ಮೈಸೂರು ದಸರಾದ ಗಜಪಡೆಯ ಅತ್ಯಂತ ಪರಿಚಿತ ಮುಖವಾಗಿದ್ದಾನೆ. ಆರು ಬಾರಿ ಅಂಬಾರಿ ಹೊತ್ತಿರುವ ಈ ಗಜಸಾರಥಿಯ ಸ್ಥಾನವನ್ನು ತುಂಬುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಹಾಗಾದರೆ ಈ ಬಾರಿಯ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆ ಗಜರಾಜ ಯಾರು ಅಭಿಮನ್ಯುವಿನ ಬಳಿಕ ಮೈಸೂರು ದಸರಾ ಗಜಪಡೆಯ ಹೊಸ ಕ್ಯಾಪ್ಟನ್ ಯಾರು ಎಂಬುದೇ ಇದೀಗ ದಸರಾ ವಲಯದ ಹಾಟ್ ಟಾಪಿಕ್!
12 ಆನೆಗಳ ಆಯ್ಕೆ ಪಟ್ಟಿ ಅಧಿಕೃತವಾಗಿ ಬಿಡುಗಡೆ ;
2026ರ ಮೈಸೂರು ದಸರಾ ಮಹೋತ್ಸವಕ್ಕೆ ಪ್ರತಿ ವರ್ಷದಂತೆ ಈ ಬಾರಿಯು ಸಹ ವಿವಿಧ ಆನೆ ಶಿಬಿರಗಳಿಂದ ಆನೆಗಳನ್ನು ಆಯ್ಕೆ ಮಾಡುವುದಕ್ಕಾಗಿ, ಆನೆಗಳ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು, ಪಶುವೈದ್ಯಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡದೊAದಿಗೆ ವಿವಿಧ ಆನೆಗಳ ಶಿಬಿರಗಳಿಗೆ ಭೇಟಿ ನೀಡಿ, ಆನೆಗಳ ಆರೋಗ್ಯ ತಪಾಸಣೆಯನ್ನು ಕೈಗೊಳ್ಳಲಾಗಿತ್ತು. ನಂತರ ಆನೆಗಳ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು.
ನಂತರ ದಸರಾ ಆನೆಗಳ ಆಯ್ಕೆ ಸಭೆಯಲ್ಲಿ ಆನೆಗಳ ಆರೋಗ್ಯ ತಪಾಸಣೆ ವರದಿ ಹಾಗೂ ಆನೆಗಳ ಗುಣಲಕ್ಷಣಗಳ ಆಧಾರದ ಮೇಲೆ 2026 ರ ದಸರಾ ಮಹೋತ್ಸವಕ್ಕೆ ಇಲಾಖಾ ಆನೆಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಸಿದ್ದಪಡಿಸಲಾಗಿತ್ತು. ಇದೀಗ ಈ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಅರಣ್ಯ ಸಚಿವ ರಾಮಲಿಂಗರೆಡ್ಡಿಯವರು ತಮ್ಮ ಕಚೇರಿಯಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಇದರಿಂದಾಗಿ ಗಜಪಡೆ ರಚನೆಗೆ ಅಧಿಕೃತ ಮುದ್ರೆ ಸಿಕ್ಕಿದೆ. ಆಗಸ್ಟ್ 26 ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಿಂದ ದಸರಾದ ಮೊದಲ ತಂಡದ ಆನೆಗಳು ಅರಮನೆ ನಗರಿ ಮೈಸೂರಿನತ್ತ ಹೆಜ್ಜೆ ಹಾಕಲಿವೆ.