Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಅಕ್ಷಯ ಪಾತ್ರ ಸಹಯೋಗದಲ್ಲಿ ಶ್ರವಣ-ವಾಕ್ ದೋಷವುಳ್ಳ ಮಕ್ಕಳಿಗೆ ಉಪಹಾರ ಸೇವೆ


ಮೈಸೂರು: ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಅಕ್ಷಯ ಪಾತ್ರ ಫೌಂಡೇಶನ್ ಸಹಯೋಗದೊಂದಿಗೆ ಶ್ರವಣ ಮತ್ತು ವಾಕ್ ದೋಷವುಳ್ಳವರು ಚಿಕಿತ್ಸೆಗಾಗಿ ಸಂಸ್ಥೆಗೆ ಆಗಮಿಸಿದಾಗ ಅವರಿಗೆ ಬೆಳಗಿನ ಉಪಹಾರ ವಿತರಿಸುವ ನೂತನ ಸೇವಾ ಕಾರ್ಯಕ್ರಮಕ್ಕೆ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಜಿ.ಪಂ ಸಿಇಒ ಯುಕೇಶ್ ಕುಮಾರ್ ಚಾಲನೆ ನೀಡಿದರು.
ಈ ವೇಳೆ ಇಸ್ಕಾನ್ ಸಂಸ್ಥೆಯ ಶ್ರೀ ಸ್ತೋಕ ಕೃಷ್ಣ ಸ್ವಾಮೀಜಿ ಮಾತನಾಡಿ, ಅಕ್ಷಯ ಪಾತ್ರ ಫೌಂಡೇಶನ್ ಸಂಸ್ಥೆಯು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಮಧ್ಯಾಹ್ನದ ಊಟ ನೀಡುವ ಜೊತೆಗೆ, ಸಮಾಜದ ಹಿಂದುಳಿದ ಹಾಗೂ ವಿಶೇಷ ಅಗತ್ಯವುಳ್ಳ ಜನರಿಗೂ ತನ್ನ ಸೇವಾ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ ಎಂದು ಹೇಳಿದರು.
ಪ್ರಸ್ತುತ ಇಸ್ಕಾನ್ ಸಂಸ್ಥೆಯಿAದ ಸುಮಾರು 20,000ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಲುಪಿಸಲಾಗುತ್ತಿದೆ. ಇದು ಕರ್ನಾಟಕ ಸರ್ಕಾರ, ಭಾರತ ಸರ್ಕಾರ ಹಾಗೂ ಅಕ್ಷಯ ಪಾತ್ರ ಫೌಂಡೇಶನ್ ಸಂಸ್ಥೆಗಳ ಜಂಟಿ ಯೋಜನೆಯಾಗಿದೆ. ಈ ಯೋಜನೆಯ ಯಶಸ್ಸಿನ ಜೊತೆಗೆ ಸಮಾಜದ ಬಡ ಹಾಗೂ ಅಚಿಧ, ವಿಶೇಷ ಚೇತನ ವ್ಯಕ್ತಿಗಳಿಗೂ ನೆರವಾಗುವ ಹಲವು ನೂತನ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯು ಮುಂಬರುವ ದಿನಗಳಲ್ಲಿ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಎದುರು ನೋಡುತ್ತಿದ್ದು, ಶ್ರವಣ ಮತ್ತು ವಾಕ್ ದೋಷವುಳ್ಳ ಮಕ್ಕಳಿಗೆ ಮತ್ತು ಸಮಾಜದ ಅಗತ್ಯವಿರುವ ವರ್ಗಕ್ಕೆ ನಿರಂತರವಾಗಿ ನೆರವಾಗಲು ಬದ್ಧವಾಗಿದೆ ಎಂದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ. ಪುಷ್ಪಾವತಿ ಮಾತನಾಡಿ, ಈ ಸಂಸ್ಥೆಗೆ ಬರುವ ಮಕ್ಕಳು ಹಾಗೂ ಅವರ ಪೋಷಕರ ಅಗತ್ಯತೆಗಳನ್ನು ಅರ್ಥೆÊಸಿಕೊಂಡು, ಅವರಿಗೆ ಬೆಳಗಿನ ವೇಳೆಯಲ್ಲಿ ಪೌಷ್ಟಿಕ ಹಾಗೂ ತಾಜಾ ತಿಂಡಿ ತಲುಪಿಸಲು ಚಿಂತಿಸಿದ ಸಂದರ್ಭದಲ್ಲಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ, ಅಕ್ಷಯ ಪಾತ್ರ ಪೌಂಡೇಷನ್ ಜೊತೆಯಲ್ಲಿ ಚರ್ಚಿಸಿ ಬೆಳಗಿನ ಉಪಹಾರ ಒದಗಿಸಲು ಸಹಕರಿಸಿದ್ದಾರೆ ಎಂದರು.
ಯಾವುದೇ ಒಳ್ಳೆಯ ಕಾರ್ಯ ಅಥವಾ ನಿಸ್ವಾರ್ಥ ಸೇವೆ ಸದಾ ಅಂತ್ಯವಿಲ್ಲದೆ ಮುಂದುವರಿಯಬೇಕು ಎಂಬ ಉದ್ದೇಶದಿಂದ ಈ ಯೋಜನೆಗೆ ಅಕ್ಷಯ ಪಾತ್ರ ಎಂದು ಹೆಸರಿಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಾಕ್ ಮತ್ತು ಶ್ರವಣ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.