
*ನಿವೇಶನ ಪಡೆದಿರುವ ನೂರಾರು ಮಂದಿಗೆ ಬಿಗ್ ಶಾಕ್
- ಸುಮಾರು 5 ಸಾವಿರ ಕೋಟಿ ರೂ ಮೌಲ್ಯದ 1100 ನಿವೇಶನಗಳ ಹಂಚಿಕೆ ರದ್ದು.
ಮೈಸೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆ ಮಾಡಲಾಗಿದ್ದ ನಿವೇಶನಗಳಿಗೆ ಬದಲಿ ನಿವೇಶನಗಳನ್ನು ಪಡೆದಿರುವ ನೂರಾರು ಮಂದಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಿಗ್ ಶಾಕ್ ನೀಡಿದೆ.
ಸರ್ಕಾರದ ಪತ್ರ ಸಂಖ್ಯೆ: ನಅಇ 71 ಮೈಅಪ್ರಾ 2023(ಇ), ದಿನಾಂಕ:14-03-2023ರ ನಿರ್ದೇಶನವನ್ನು ಉಲ್ಲಂಘಿಸಿ, ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಎಲ್ಲಾ ಹಂಚಿಕೆ ಆದೇಶಗಳನ್ನು ರದ್ದುಪಡಿಸುವುದು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ(ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ) ಅವರು ಆದೇಶ ಹೊರಡಿಸಿದ್ದಾರೆ.
ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸಿ ಯಾವ ಬದಲಿ ನಿವೇಶನಗಳನ್ನು ಈಗಾಗಲೇ ಸಬ್-ರಿಜಿಸ್ಟಾçರ್ ಕಚೇರಿಯಲ್ಲಿ ನೋಂದಣಿ ಆಗಿವೆಯೋ ಅವುಗಳ ‘ಕ್ರಯಪತ್ರ” (Sಚಿಟe ಆeeಜ) ಗಳನ್ನು ರದ್ದುಪಡಿಸಲು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲೂ ಕ್ರಮವಹಿಸುವುದು. ಒಂದು ವೇಳೆ ಇಲ್ಲಿಯವರೆಗೂ ಕ್ರಯಪತ್ರ” ಆಗದೇ ಇದ್ದಲ್ಲಿ ಸರ್ಕಾರದಿಂದ ಮಾರ್ಗಸೂಚಿ ರಚನೆಯಾಗಿ ಸೂಕ್ತ ನಿರ್ದೇಶನ ನೀಡುವವರೆಗೂ ಪ್ರಾಧಿಕಾರದಿಂದ ಇಂತಹ ಪ್ರಕರಣಗಳಿಗೆ “ಕ್ರಯಪತ್ರ” ನೀಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವ ಬದಲಿ ನಿವೇಶನಗಳು ಈಗಾಗಲೇ ಸಬ್ರಿಜಿಸ್ಟಾçರ್ ಕಚೇರಿಯಲ್ಲಿ ನೋಂದಣಿ ಆಗಿವೆಯೋ ಅವುಗಳ ಖಾತಾ ಮಾಡುವುದನ್ನು ತಡೆಹಿಡಿಯಲು ಮಹಾನಗರ ಪಾಲಿಕೆ, ಮೈಸೂರು ಅಥವಾ ಸಂಬoಧಪಟ್ಟ ನಗರ ಸಭೆ / ಗ್ರಾಮ ಪಂಚಾಯಿತಿಗೆ ಸೂಕ್ತ ನಿರ್ದೇಶನ ನೀಡುವುದು.
ಒಂದು ವೇಳೆ ಈಗಾಗಲೇ ಖಾತಾ ಆಗಿದ್ದರೆ ಕರ್ನಾಟಕ ನಗರ ಪಾಲಿಕೆಗಳ ಕಾಯ್ದೆ 1976, ಕರ್ನಾಟಕ ಮುನಿಸಿವಲ್ ಕಾಯ್ದೆ, 1961 ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆ 1993 ರಡಿ ನಿಯಮಾನುಸಾರ ರದ್ದುಪಡಿಸಲು ಸಂಬoಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡುವುದು.
ಉನ್ನತ ಮಟ್ಟದ ತಾಂತ್ರಿಕ ಸಮೀತಿಯ ವರದಿಯ ಶಿಫಾರಸ್ಸಿನಂತೆ ನೀಡಲಾಗಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅನುಪಾಲನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.
ಪ್ರಕರಣದ ಹಿನ್ನಲೆ; ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಮಾಜಿ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ಸೇರಿದ ಜಮೀನಿನನ್ನು ಸ್ವಾಧೀನಪಡಿಸಿಕೊಂಡಿತ್ತು. ಅದಕ್ಕೆ ಬದಲಿಯಾಗಿ ಕೋಟ್ಯಾಂತರ ರೂ ಬೆಲೆ ಬಾಳುವ 14 ನಿವೇಶನಗಳನ್ನು ನೀಡಿತ್ತು. ಇದು ಬಹಿರಂಗಗೊಳ್ಳುತ್ತಿದ್ದAತೆ ವಿಪಕ್ಷಗಳು ಹೋರಾಟ ನಡೆಸಿದ್ದವು. ಈ ಹಿನ್ನಲೆಯಲ್ಲಿ ಕೊನೆಗೆ ಪಾರ್ವತಿಯವರು ಮುಡಾದಿಂದ ಪಡೆದಿದ್ದ ನಿವೇಶನಗಳನ್ನು ವಾಪಾಸ್ ನೀಡಿದ್ದರು. ಪ್ರಕರಣದ ತನಿಖೆ ನಡೆದಿದ್ದವು. ಹಗರಣದ ಆರೋಪದಲ್ಲಿ ಆಗಿನ ಮುಡಾ ಆಯುಕ್ತ ದಿನೇಶ್ ಕುಮಾರ್, ಕಾಂತರಾಜು ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿತ್ತು. ತನಿಖೆಗೆ ಆಯೋಗವನ್ನು ರಚಿಸಲಾಗಿತ್ತು. ಆಯೋಗವು ತನಿಖೆ ನಡೆಸಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈಗ ಈ ಎಲ್ಲಾ ವರದಿಗಳ ಹಿನ್ನಲೆಯಲ್ಲಿ ಮುಡಾದಿಂದ ಪಡೆದಿರುವ ಬದಲಿ ನಿವೇಶನಗಳ ಹಂಚಿಕೆಯನ್ನು ರದ್ದುಪಡಿಸಲಾಗಿದೆ. ಬರೋ ಬರೀ 1100 ನಿವೇಶನಗಳ ಹಂಚಿಕೆ ರದ್ದಾಗಲಿದ್ದು, ಇದರ ಮೌಲ್ಯ 5 ಸಾವಿರ ಕೋಟಿರೂಗಳೆಂದು ಅಂದಾಜಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಈ ಆದೇಶದಿಂದ ಬದಲಿ ನಿವೇಶನಗಳನ್ನು ಪಡೆದಿರುವವರು, ಖರೀದಿಸಿ, ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿರುವವರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲP್ಫ್ಷಂತರರೂ, ಕೋಟ್ಯಾಂತರ ರೂಗಳನ್ನು ಕೊಟ್ಟು ನಿವೇಶನಗಳನ್ನು ಖರೀದಿಸಿರುವವರು, ಅದರಲ್ಲಿ ಮನೆಗಳನ್ನು ಕಟ್ಟಿರುವವರು ಈಗ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬೀಳುವ ಕಂಗಲಾಗಿದ್ದಾರೆ.