
ಮೈಸೂರು: ಜನಾಭಿಪ್ರಾಯಗಳನ್ನು ಮೂಡಿಸುವ ಶಕ್ತಿ ಹೊಂದಿರುವ ಸಾಮಾಜಿಕ ಮಾಧ್ಯಮದ ಮೇಲೆ ದೊಡ್ಡ ಜವಾಬ್ದಾರಿ ಇದ್ದು, ಯು-ಟ್ಯೂಬರ್ಗಳ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲೂ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ತಿಳಿಸಿದರು.
ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಗೆ ಬಹುಮಾನ ವಿತರಿಸಿ ಅವರು ಮಾತನಾಡಿದದರು ಅವರು, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಳ್ಳೆಯ ಸುದ್ದಿಯೂ ಬರುತ್ತಿದೆ, ಕೆಟ್ಟ ಸುದ್ದಿಯೂ ಬರುತ್ತಿದೆ. ಅನೇಕ ಸಂದರ್ಭದಲ್ಲಿ ಶೋಷಿಯಲ್ ಮೀಡಿಯಾದಿಂದ ಪೊಲೀಸ್ ಇಲಾಖೆ ಮೇಲೂ ಪರಿಣಾಮ ಬೀರಿದೆ ಮತ್ತು ಜನರಿಗೂ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮ ಕುರಿತು ಚರ್ಚೆಗಳು ನಡೆಯಬೇಕು ಎಂದು ಹೇಳಿದರು.
ಇಂದು ಎಲ್ಲರ ಬಳಿಯೂ ಮೊಬೈಲ್ಗಳಿಗೆ. ಒಂದು ಸಣ್ಣ ರೀಲ್ಸ್ ಕ್ಷಣಾರ್ಧದಲ್ಲಿ ಲಕ್ಷಾಂತರ ಮಂದಿಗೆ ತಲುಪಲಿದ್ದು ಜನಾಭಿಪ್ರಾಯವನ್ನು ಮೂಡಿಸುವ ಶಕ್ತಿ ಹೊಂದಿರುವುದರಿAದ ಪ್ರತಿಯೊಬ್ಬರೂ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ ಎಂದರು.
ಮೈಸೂರು ಮಾಧ್ಯಮ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ. ಯಾವುದು ಕೆಟ್ಟದು, ಯಾವುದು ಒಳ್ಳೆಯದು ಎಂಬುವುದನ್ನು ಅರಿತು ಸುದ್ದಿ ಪ್ರಕಟಿಸುತ್ತಿದೆ. ಸಮಾಜದಲ್ಲಿ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಹಾಗಂದ ಮಾತ್ರಕ್ಕೆ ಯಾರೂ ಸಹ ಅವರವರ ಜವಾಬ್ದಾರಿಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಛಾಯಾಗ್ರಹಣ ಎಂಬುವುದು ಒಂದು ವಿಶೇಷ ವೃತ್ತಿ. ಇಂದು ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನ ವಿಶಿಷ್ಟವಾಗಿದೆ. ಒಂದೇ ಪ್ರದರ್ಶನದಲ್ಲಿ ನಗು ಅಳು, ಕಷ್ಟ, ಸಂಭ್ರಮ, ದುರಂತ, ಜೀವನದ ಕ್ರಮ ಎಲ್ಲವನ್ನೂ ಚಿತ್ರದ ಮೂಲಕ ಸೆರೆ ಹಿಡಿದು ಜನರಿಗೆ ತೋರಿಸುತ್ತೀರಿ. ಈ ಪ್ರದರ್ಶನದಲ್ಲೂ ಬೆಂಕಿ, ಮಳೆ, ನಗು, ಅಳು, ಸಂಭ್ರಮ, ಸೂತಕ ಎಲ್ಲವೂ ಇದೆ. ಆದರೆ, ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಶ್ರಮ ಪಡುತ್ತಿರುವ ಚಿತ್ರಕ್ಕೆ ಮೊದಲ ಸ್ಥಾನ ಬಂದಿರುವುದು ನನಗೆ ವೈಯಕ್ತಿವಾಗಿ ಸಂತೋಷ ತಂದಿದೆ ಎಂದು ಹೇಳಿದರು