
ಮೈಸೂರು: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದ ಮೇಲೆ ಸಾಹಿತ್ಯಿಕವಾಗಿ, ಸಾಂಸ್ಕöÈತಿಕವಾಗಿ ಹಾಗೂ ಆರ್ಥಿಕವಾಗಿ ಗಟ್ಟಿಗೊಳಿಸುವ ದಿಸೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು.
ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ನಾಡು-ನುಡಿ ಸಮ್ಮೇಳನ, ಮಕ್ಕಳ ಸಮ್ಮೇಳನ, ಲೇಖಕಿಯರ ಸಮ್ಮೇಳನ ಆಯೋಜಿಸುವ ಮೂಲಕ ಕಸಾಪಕ್ಕೆ ವೈಭವ ಮರುಕಳಿಸುವಂತೆ ಶ್ರಮಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡವೆಂದರೆ ಮಮತೆ ಹಾಗೂ ನಿಷ್ಠೆ. ಇದಕ್ಕೆ ಬದ್ಧನಾಗಿರುವೆ. ಮುಖ್ಯವಾಗಿ ಕಸಾಪ ಅಧ್ಯಕ್ಷನಾದ ಮೇಲೆ ಜನ ಸಂವೇದನೆಗೆ ಹಾಗೂ ಜನಸ್ಪಂದನೆಗೆ ಆದ್ಯತೆ ನೀಡುವೆ ಎಂದು ತಿಳಿಸಿದರು.
ಸಂಸ್ಕöÈತಿ ಮತ್ತು ಪ್ರಗತಿ ಒಂದೇ ನಾಣ್ಯದ ಎರಡು ಮುಖಗಳು. ಸಂಸ್ಕöÈತಿಯು ಪ್ರಗತಿಯ ಆಧಾರಸ್ತಂಭ. ಹೀಗಾಗಿ ಕನ್ನಡದ ಸಂಸ್ಕöÈತಿಯನ್ನು ಮೈಗೂಡಿಸಿಕೊಂಡು ಕನ್ನಡದ ಪ್ರಗತಿಗೆ ಕಟಿಬದ್ಧನಾಗಿರುವೆ ಎಂದು ಹೇಳಿದರು.
ಕನ್ನಡದಲ್ಲಿ ಕಲಿತು ಕೆಎಲ್ಇ ಸಂಸ್ಥೆಯಲ್ಲಿ ವಾಣಿಜ್ಯಶಾಸ್ತç ಉಪನ್ಯಾಸಕನಾಗಿ ಮೂರು ವರ್ಷಗಳವರೆಗೆ ಕಾರ್ಯ ನಿರ್ವಹಿಸಿದ ನಂತರ ಯುಪಿಎಸ್ ಸಿ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆದು ಪಾಸಾಗಿ ಅಸಿಸ್ಟಂಟ್ ಕಲೆಕ್ಟರ್ ಹುದ್ದೆಗೆ ಆಯ್ಕೆ ಅದೆ.ಅದೇ ಸಂದರ್ಭದಲ್ಲಿ ನಾನು ಕರ್ನಾಟಕ ಲೋಕ ಸೇವಾ ಆಯೋಗ ದಿಂದ ಅಸಿಸ್ಟೆಂಟ್ ಕಮೀಷನರ್ ಆಗಿ ಆಯ್ಕೆ ಆದೆ.. ಕನ್ನಡ ನಾಡು ನುಡಿ ಸಂಸ್ಕöÈತಿ ಮೇಲಿನ ಅಭಿಮಾನದಿಂದ ಕೇಂದ್ರ ಸರ್ಕಾರ ಸೇವೆಯನ್ನು ಬಿಟ್ಟು ಕರ್ನಾಟಕ ಆಡಳಿತ ಸೇವೆಯಲ್ಲಿಯೇ ಮುಂದುವರೆದೆ.ತುಮಕೂರಿನ ಜಿಲ್ಲಾಧಿಕಾರಿಯಾಗಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ನಿರ್ದೇಶಕನಾಗಿ ದುಡಿದೆ. ಅಲ್ಲದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದೆ. ಕನ್ನಡದಲ್ಲಿಯೇ ಸಹಿ ಮಾಡುತ್ತಿದ್ದು, ಸಹೋದ್ಯೋಗಿಗಳು
ಇಂಗ್ಲಿಷಿನಲ್ಲಿ ಟಿಪ್ಪಣಿ ತಂದರೆ ಹಿಂದಿರುಗಿಸಿ ಕನ್ನಡದಲ್ಲಿ ಟಿಪ್ಪಣಿ ಸಲ್ಲಿಸಲು ಹೇಳುತ್ತಿದ್ದೆ.
ಇದರಿಂದ ಕನ್ನಡ, ಸಂಸ್ಕöÈತಿ ಹಾಗೂ ಸಾಹಿತ್ಯಕ್ಕೆ ಸಂಬAಧಪಟ್ಟ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು ಎಂದು ವಿವರಿಸಿದರು.
ನಿವೃತ್ತ ಅಧಿಕಾರಿಗೆ ಸಾಹಿತ್ಯ ಒಲವು ಇರಬಾರದೆ? ಸಾಹಿತ್ಯ ಮತ್ತು ಆಡಳಿತ ಹಾಲ ತೊರೆಗೆ ಬೆಲ್ಲದ ಕೆಸರು ಇದ್ದಂತೆ. ಅಧಿಕಾರಿಯಾಗಿ ನಿವೃತ್ತನಾದರೂ ಸಾಹಿತಿಯಾಗಿ ಅನೇಕ ಕೃತಿಗಳನ್ನು ರಚಿಸಿರುವೆ. ಇದರಿಂದ ಆಡಳಿತ ಕೌಶಲ ಹಾಗೂ ಸಾಹಿತ್ಯ ಪ್ರೇಮವುಳ್ಳವನಾಗಿದ್ದು ಕಸಾಪಕ್ಕೆ ಆರ್ಥಿಕ ಭದ್ರತೆ ಒದಗಿಸುವೆ ಎಂದು ಪ್ರತಿಪಾದಿಸಿದರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಿ
ಕನ್ನಡ ಅಸ್ಮಿತೆಗೆ ಆದ್ಯತೆ ನೀಡುತ್ತ,ಗಡಿ ಭಾಗದಲ್ಲಿ ಸಂಸ್ಕöÈತಿ ಪ್ರಸಾರಕ್ಕೆ ಪ್ರೋತ್ಸಾಹ ನೀಡುತ್ತಾ ಗಡಿನಾಡ ಶಾಲೆಗಳ ಕುರಿತು ಸದಾ ಕಾಳಜಿ ವಹಿಸಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿ.ಎನ್.ಲೋಕಪ್ಪ, ಡಾ.ಎಂಜಿಆರ್ ಅರಸು, ಮ.ಗು.ಸದಾನಂದಯ್ಯ, ಡಾ.ರಘುರಾಮ ವಾಜಪೇಯಿ, ಡಾ.ಕೆ.ಬಿ.ಲಿಂಗರಾಜು, ಜಯಪ್ಪ ಹೊನ್ನಾಳಿ, ನೂರು ಮಹ್ಮದ್ ಮರ್ಚೆಂಟ್, ಶೋಭಾ ಜಯಪ್ರಕಾಶ್, ಕೆ.ವಿ.ಮಲ್ಲೇಶ್, ಎ.ಪಿ.ವಿರೂಪಾಕ್ಷಪ್ಪ, ಡಿ.ಜಿ.ಸೋಮಶೇಖರ ಮೂರ್ತಿ, ಲಕ್ಷಿ÷್ಮ ಗೌಡರ, ಮೈ.ನಾ.ಲೋಕೇಶ್, ಎಂ.ಬಿ.ಸAತೋಷ್ ಹಾಗೂ ತೀರ್ಥಪ್ರಸಾದ್ ಹಾಜರಿದ್ದರು