
ಮೈಸೂರು : ಸರ್ಕಾರ ರಾಜ್ಯದಲ್ಲಿ ಮಲಹೊರುವ ಪದ್ದತಿಯನ್ನು ನಿಷೇಧಿಸಿದ್ದು, ಪುನರ್ವಸತಿ ಕಾಯ್ದೆ 2013ರ ಸಮಗ್ರ ಅನೂಷ್ಠಾನಕ್ಕಾಗಿ
ಸಪಾಯಿ ಕರ್ಮಾಚಾರಿ ಕಾವಲು ಸಮಿತಿಯಿಂದ ನಡೆಸುತ್ತಿರುವ ರಾಜ್ಯ ಮಟ್ಟದ ಜನ ಜಾಗೃತಿ ಅಭಿಯಾನ-2026 ಸೋಮವಾರ ಮೈಸೂರಿನಲ್ಲಿ ನಡೆಯಿತು.
ಜಾಥಾ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಸಪಾಯಿ ಕರ್ಮಾಚಾರಿ ಕಾವಲು ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿ ರಾಜ್ಯ ಸಂಚಾಲಕ ಡಾ.ಕೆ.ಬಿ.ಓಬಳೇಶ್ ಮಾತನಾಡಿ, ಮನುಷ್ಯರನ್ನು ಮಲ, ಮಲಮಿಶ್ರಿತ ತ್ಯಾಜ್ಯ ಅಥವಾ ಒಳಚರಂಡಿಯನ್ನು ಸ್ವಚ್ಛಗೊಳಿಸಲು ಅಪಾಯಕಾರಿ ಹಾಗೂ ಅಮಾನವೀಯ ಕೃತ್ಯಗಳಲ್ಲಿ ನಿಯೋಜಿಸುವುದು ಮನುಷ್ಯರ ಘನತೆಗೆ ವಿರುದ್ಧವಾಗಿದೆ.
ಭಾರತದ ಸಂವಿಧಾನದ ವಿಧಿ 17 ಅಸ್ಪöÈಶ್ಯತೆಯನ್ನು ನಿಷೇಧಿಸುತ್ತದೆ ಹಾಗೂ ವಿಧಿ 21 ಗೌರವಯುತ ಬದುಕಿನ ಹಕ್ಕನ್ನು ಖಾತ್ರಿಪಡಿಸುತ್ತದೆ. ಮಲಹೊರುವ ವೃತ್ತಿಯಲ್ಲಿ ನೇಮಕ ನಿಷೇಧ
ಹಾಗೂ ಆವರ ಪುನರ್ವಸತಿ ಕಾಯ್ದೆ 2013 ರ ಜಾರಿಗೆ ಬಂದಿದೆ. ಈ ಕಾಯ್ದೆಯನ್ನು ರಾಜ್ಯದಾದ್ಯಂತ ಸಮಗ್ರವಾಗಿ, ಕಟ್ಟುನಿಟ್ಟಾಗಿ
ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು. ಇಂತಹ ಗಂಭೀರವಾದ ಸಮಸ್ಯೆಗಳನ್ನು
ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಮತ್ತು 2013 ರಲ್ಲಿ ಜಾರಿಯಾಗಿರುವ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು
ಒತ್ತಾಯಿಸಲು ರಾಜ್ಯ ಮಟ್ಟದ ಜಾಗೃತಿ ಜಾಥ ಕಾರ್ಯಕ್ರಮವನ್ನು ಆ.24 ರಿಂದ ಸೆ.2 ರವರೆಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಈ ವೇಳೆ ಸಫಾಯಿ ಕರ್ಮಾಚಾರಿ ವಿಚಕ್ಷಣಾ ಜಾಗೃತಿ ಸಮಿತಿ ಶಾಶ್ವತ ಸದಸ್ಯ ಕೆ.ನಂಜಪ್ಪ ಬಸವನಗುಡಿ ಮಾತನಾಡಿ,
ಮಲದಗುಂಡಿಗಳಲ್ಲಿ ಉಸಿರುಗಟ್ಟಿ ಸತ್ತಿರುವ ಸದಸ್ಯರ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಜೊತೆಗೆ ಸೂಕ್ತ ಸಮಾಜಿಕ ಯೋಜನೆಗಳನ್ನು ರೂಪಿಸಬೇಕು. ಮ್ಯಾನ್ಯೂಯಲ್ ಸ್ಕಾ÷್ಯವೆಂಜರ್ಸ್ ಸದಸ್ಯರಿಗೆ ಯಾರೇಲ್ಲ ಅದೇ ಉದ್ಯೋಗದಲ್ಲಿ ಮುಂದುವರೆಯಲು ಇಚ್ಚಿಸುವವರು ಅವರಿಗೆ ಅಧುನಿಕ ಯಂತ್ರೋಪಕರಣಗಳನ್ನು ಉಚಿತವಾಗಿ ನೀಡಬೇಕು ಜೊತೆಗೆ ಯಂತ್ರೋಪಕರಣಗಳನ್ನು ಬಳಸುವ
ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.