Month: August 2026
ಬೆಂಗಳೂರಿನಲ್ಲಿ ಆ. 28 ರಾಜ್ಯ ಮಟ್ಟದ ಎಸ್ಸಿ, ಎಸ್ಟಿ ನೌಕರರ ಐಕ್ಯತಾ ಸಮಾವೇಶ
ಮೈಸೂರು: ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ನೇತೃತ್ವದಲ್ಲಿ ಆ. 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ಜಾಗೃತ ನೌಕರರ ರಾಜ್ಯ ಮಟ್ಟದ 6ನೇ ಐಕ್ಯತಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ತಿಳಿಸಿದರು.ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಹಾಗೂ 20 ಸಾವಿರಕ್ಕೂ ಹೆಚ್ಚು…
ಟಾಕ್ಸಿಕ್ ಚಿತ್ರದ ಯಶಸ್ಸಿಗೆ ರಕ್ತದಾನ ಮಾಡಿ ಬೆಂಬಲ ವ್ಯಕ್ತಪಡಿಸಿದ ಅಭಿಮಾನಿಗಳು
ಮೈಸೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೀತಾ ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರ ಬುಧವಾರ ವಿಶ್ವದಾದ್ಯಂತ ತೆರೆ ಕಾಣುತ್ತಿದ್ದು, ಈ ಹಿನ್ನಲೆಯಲ್ಲಿ ನಗರದ ಸಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಚಿತ್ರ ನಟ ಯಶ್ ಅಭಿಮಾನಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆಯ ವತಿಯಿಂದ ಟಾಕ್ಸಿಕ್ ಚಿತ್ರದ ಯಶಸ್ಸಿಗಾಗಿರಕ್ತದಾನ ಮಾಡಿ ಬೆಂಬಲ ವ್ಯಕ್ತಪಡಿಸಿ, ವಿಶಿಷ್ಟ ರೀತಿಯಲ್ಲಿ ಶುಭ ಕೋರಿದರು. ಚಿತ್ರದ ಬಿಡುಗಡೆ ಹಿನ್ನೆಲೆ ಯಶ್ ಅಭಿಮಾನಿ ಬಳಗದ ಸದಸ್ಯರು ಸ್ವಯಂ ಪ್ರೇರಿತವಾಗಿ ರಕ್ತದಾನ…
ಮೂವರು ಎನ್‌ಕೌಂಟರ್ ಸೇರಿ ನಾಲ್ಕು ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಆದೇಶ
ಹನೂರು; ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಮೂವರು ಶೂಟೌಟ್ ಪ್ರಕರಣ ಹಾಗೂ ವನ್ಯ ಭೇಟೆ ತಡೆ ಶಿಬಿರಗಳ ಧ್ವಂಸ, ಕಾಡಿಗೆ ಬೆಂಕಿ ಹಚ್ಚಿರುವುದು, ಅರಣ್ಯ ಇಲಾಖೆಯ ಕಚೇರಿ ಧ್ವಂಸ ಸ್ಭೆರಿದಂತೆ ಒಟ್ಟು 4 ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ(ಡಿಜಿ ಐಜಿಪಿ)ಡಾ.ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ.ಮೂವರು ಎನ್‌ಕೌಂಟರ್ ಸಂಬAಧಿಸಿದAತೆ ದಾಖಲಿಸಿರುವ ನಾಲ್ಕು ಎಫ್‌ಐಆರ್‌ಗಳನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಲಾಗಿದೆ.ಹನೂರು ತಾಲೂಕಿನ ರಾಮಪುರ ಠಾಣೆಯಲ್ಲಿ ದಾಖಲಾದ ಅರಣ್ಯಾಧಿಕಾರಿಗಳ ಮೇಲಿನ ಹಲ್ಲೆ, ಹನೂರು ಠಾಣೆಯಲ್ಲಿ ದಾಖಲಾದ…
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲ್ಲಿಸಿರುವ ಬಳಕೆಯಲ್ಲಿಲ್ಲದ 382 ವಾಹನಗಳನ್ನು ತೆರವುಗೊಳಿಸಲು ನೋಟಿಸ್ ಅಂಟಿಸಿದ ನಗರಪಾಲಿಕೆ
ಮೈಸೂರು: ಅರಮನೆ ನಗರಿ ಮೈಸೂರಿನ ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಅನಧಿಕೃತವಾಗಿ ನಿಲ್ಲಿಸಿರುವ ಬಳಕೆಯಲ್ಲಿಲ್ಲದ ವಾಹನಗಳನ್ನು ತೆರವುಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಇದೀಗ ಮುಂದಾಗಿದೆ.ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 382 ಪರಿತ್ಯಕ್ತ/ಅನುಪಯುಕ್ತ ವಾಹನಗಳನ್ನು ಗುರುತಿಸಲಾಗಿದ್ದು, ಸದರಿ ವಾಹನಗಳ ಮೇಲೆ ತೆರವುಗೊಳಿಸುವ ನೋಟಿಸ್ ಅಂಟಿಸುವ ಕಾರ್ಯಕ್ಕೆ ಮಂಗಳವಾರ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಸವಿತಾ ಎಂ.ಕೆ. ಚಾಲನೆ ನೀಡಿದರು.ಸಾರ್ವಜನಿಕ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಇಂತಹ ವಾಹನಗಳನ್ನು ನಿಲುಗಡೆ…
ಸಾಹಿತ್ಯಿಕ, ಸಾಂಸ್ಕöÈತಿಕ, ಆರ್ಥಿಕ ಗಟ್ಟಿಗೊಳಿಸಲು ಬದ್ಧ ; ಡಾ.ಸಿ.ಸೋಮಶೇಖರ
ಮೈಸೂರು: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದ ಮೇಲೆ ಸಾಹಿತ್ಯಿಕವಾಗಿ, ಸಾಂಸ್ಕöÈತಿಕವಾಗಿ ಹಾಗೂ ಆರ್ಥಿಕವಾಗಿ ಗಟ್ಟಿಗೊಳಿಸುವ ದಿಸೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು.ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ನಾಡು-ನುಡಿ ಸಮ್ಮೇಳನ, ಮಕ್ಕಳ ಸಮ್ಮೇಳನ, ಲೇಖಕಿಯರ ಸಮ್ಮೇಳನ ಆಯೋಜಿಸುವ ಮೂಲಕ ಕಸಾಪಕ್ಕೆ ವೈಭವ ಮರುಕಳಿಸುವಂತೆ ಶ್ರಮಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕನ್ನಡವೆಂದರೆ ಮಮತೆ ಹಾಗೂ ನಿಷ್ಠೆ. ಇದಕ್ಕೆ ಬದ್ಧನಾಗಿರುವೆ. ಮುಖ್ಯವಾಗಿ ಕಸಾಪ ಅಧ್ಯಕ್ಷನಾದ ಮೇಲೆ…
ಗಜಪಯಣದ ಮೂಲಕ ಬುಧವಾರ ಕಾಡಿನಿಂದ ಅರಮನೆ ನಗರಿ ಮೈಸೂರಿಗೆ ಮೊದಲ ಹಂತದ ಗಜಪಡೆ ಆಗಮನ
ಮೈಸೂರು: ಈ ಬಾರಿ ಅದ್ಧೂರಿಯಾಗಿ ನಡೆಯಲಿರುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಮುನ್ಮ್ನಡಿಯಾಗಿರುವ ಗಜಪಯಣ ಬುಧವಾರ ನಡೆಯಲಿದ್ದು, ಕಾಡಿನಿಂದ ಅರಮನೆ ನಗರಿ ಮೈಸೂರಿಗೆ ಗಜಪಡೆಯ ಮೊದಲ ಹಂತದ ತಂಡ ಆಗಮಿಸಲಿದೆ.ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಆಯ್ಕೆಯಾಗದೆ ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸುತ್ತಿರುವುದು ವಿಶೇಷವಾಗಿದೆ. ಮತ್ತೊಂದು ವಿಶೇಷವೆಂದರೆ ಮೈಸೂರಿಗೆ ಬಂದು ತಾಲೀಮು ಪೂರೈಸಿ, ಎಲ್ಲದರಲ್ಲೂ ಸೈ ಎನಿಸಿಕೊಂಡ ಆನೆಯನ್ನು ಗಜಪಡೆಯ ಕ್ಯಾಪ್ಟನ್ ಆಯ್ಕೆ ಮಾಡಿ ಘೋಷಣೆ ಮಾಡಲಾಗುತ್ತಿದೆ.ಗಜಪಯಣಕ್ಕೆ ಚಾಲನೆ; ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟಿçÃಯ…
ನಗರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗೋ ಕಸಾಯಿಖಾನೆಗಳನ್ನು ಮುಚ್ಚಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಯವರನ್ನು ಬಂಧಿಸಿದ ಪೊಲೀಸರುಮೈಸೂರು: ನಗರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗೋ ಕಸಾಯಿಖಾನೆಗಳನ್ನು ಮುಚ್ಚಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪುನೀತ್ ಕೆರೆಹಳ್ಳಿ ಹಾಗೂ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೇರಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾತನಾಡಿದ ಮುಖಂಡ ಪುನೀತ್ ಕೆರೆಹಳ್ಳಿ, ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ….
ಆ.25 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಮೈಸೂರು: ವಿ,ವಿ,ಮೊಹಲ್ಲಾ ಉಪವಿಭಾಗ ವ್ಯಾಪ್ತಿಯ 11 ಕೆ.ವಿ ಒಂಟಿಕೊಪ್ಪಲು ವಿದ್ಯುತ್ ಮಾರ್ಗದಲ್ಲಿ ಭೂಗತ ಕೇಬಲ್ ಕೆಲಸದ ನಿಮಿತ್ತ ಆಗಸ್ಟ್ 25 ರÀಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಗೋಕುಲ 2 ಮತ್ತು 3ನೇ ಹಂತ, ಕಾಂಟೂರು ರಸ್ತೆ, ವಿ.ವಿಮೊಹಲ್ಲಾ 2 ರಿಂದ 6ನೇ ಮೇನ್, ಆದಿಪಂಪಾ ರಸ್ತೆ, ಕೆ.ಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ, 66/11 ಕೆ.ವಿ ಆಯರಹಳ್ಳಿ, 66/11 ಕೆ.ವಿ ಮಾರಶೆಟ್ಟಿಹಳ್ಳಿ ಹಾಗೂ 66/11 ಕೆ.ವಿ ಮರಡಿಹುಂಡಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಕವಿಪ್ರನಿನಿ ವತಿಯಿಂದ ತುರ್ತು ನಿರ್ವಹಣಾ…
ಆ.25ರಂದು ಚಕ್ರವರ್ತಿ ಸೂಲಿಬೆಲೆ ರಿಂದ ಸಂಕಟದಲ್ಲಿ ಒಗ್ಗಟ್ಟೇ ಮೂಲಮಂತ್ರ ಕುರಿತಾಗಿ ಭಾಷಣ
ಮೈಸೂರು: ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಚಾತುರ್ಮಾಸ್ಯ ಸಮಿತಿವತಿಯಿಂದ ಉಡುಪಿ ಕಾಣಿಯೂರು ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಲ್ಲಭತೀರ್ಥಸ್ವಾಮೀಜಿಯವರ 35ನೇ ವರ್ಷದ ಚಾತುರ್ಮಾಸ್ಯ ವ್ರತದ ಅಂಗವಾಗಿ ವಾಗ್ಮಿಚಕ್ರವರ್ತಿ ಸೂಲಿಬೆಲೆ ರವರಿಂದ ಸಂಕಟದಲ್ಲಿ ಒಗ್ಗಟ್ಟೇ ಮೂಲಮಂತ್ರ ವಿಷಯದ ಕುರಿತಾಗಿ ಭಾಷಣ ಕಾರ್ಯಕ್ರಮವನ್ನುಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣ ದಾಮದಲ್ಲಿ ಆಗಸ್ಟ್ 25ರ ಮಂಗಳವಾರ ಸಂಜೆ 7 ಗಂಟೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರು ಹಾಗೂ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.