ವೈನಾಡಿನಲ್ಲಿ ಭರ್ಜರಿ ಮಳೆ; ಇಂದೇ ಕಬಿನಿ ಜಲಾಶಯ ಭರ್ತಿ ಸಾಧ್ಯತೆ
ಸುರಕ್ಷಿತ ಸ್ಥಳಗಳಿಗೆ ತೆರಳಲು ಕಾರ್ಯಪಾಲಕ ಎಂಜನಿಯರ್ ಮನವಿ ಎಚ್.ಡಿ.ಕೋಟೆ: ರಾಜ್ಯದಲ್ಲಿ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಬಿನಿ ಜಲಾಶಯ ಈ ಬಾರಿ ತಡವಾಗಿ ಭರ್ತಿಯಾಗುವತ್ತ ಸಾಗಿದೆ. 2284 ಅಡಿ ಸಾಮರ್ಥ್ಯದ ಕಪಿಲಾ ಜಲಾಶಯ ಶನಿವಾರ ಗರಿಷ್ಠ ಮಟ್ಟ ತಲುಪಿದ್ದು, 2281 ಅಡಿ ನೀರು ಸಂಗ್ರಹವಾಗಿದೆ. ಪ್ರಸ್ತುತ ಅಣೆಕಟ್ಟೆಗೆ 16 ರಿಂದ 18 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಬರುತ್ತಿದ್ದು, 6 ರಿಂದ 8 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಹೀಗಾಗಿ ಭಾನುವಾರ ಜಲಾಶಯ ಸಂಪೂರ್ಣ…