
ಮೈಸೂರು: ಸಕ್ಕರೆಯ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದಲ್ಲಿ ಪರಿಶೀಲನೆ ನಡೆಸಬೇಕು. ಎಲ್.ಪಿ.ಜಿ ಸಿಲೆಂಡರ್ ಗಳು ನಿಗದಿತ ಸಂಖ್ಯೆಕ್ಕಿAತ ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಣೆಯಾಗಿದ್ದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಿ ಎಂದು ಇಲಾಖೆಯ ಅಧಿಕಾರಿಗಳಿಗೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೈಸೂರು ವಿಭಾಗ ಮಟ್ಟದ ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಅಕ್ರಮ ಆಹಾರ ದಾಸ್ತಾನು ಮಾಡಿರುವ ಸ್ಥಳಗಳ ಮೇಲೆ ಹೆಚ್ಚು ದಾಳಿಗಳನ್ನು ನಡೆಸಬೇಕು. ಇಲಾಖೆ ಕಾರ್ಯನಿರ್ವಹಣೆ ಕುರಿತಂತೆ ನಿಗದಿತವಾಗಿ ವರದಿಯನ್ನು ಕಳುಹಿಸಿಕೊಡಬೇಕು, ವರದಿಯನ್ನು ಪ್ರತಿ ವಾರ ಪರಿಶೀಲಿಸಲಾಗುವುದು ಎಂದರು.
ಆಹಾರ, ನಾಗರಿಕ ಸರಬರಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬಡ ಜನರಿಗೆ ಆಹಾರ ಒದಗಿಸಿ ಸೇವೆ ಸಲ್ಲಿಸುವ ಇಲಾಖೆಯಾಗಿದ್ದು, ಉತ್ತಮ ಸೇವೆ ಸಲ್ಲಿಸಿ ಇಲಾಖೆಯ ಹೆಸರು ಸಮಾಜದಲ್ಲಿ ಉಳಿಯುವಂತೆ ಮಾಡಿ
ಕಾನೂನು ಮಾಪನ ಇಲಾಖೆಯ ಕೆಲಸ ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಯುತ್ತಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಪನಗಳಲ್ಲಿ ಗ್ರಾಹಕರಿಗೆ ಮೋಸವಾಗುತ್ತಿರುವ ಕಡೆ ಹೆಚ್ಚು ದಾಳಿ ನಡೆಸಿ ಎಂದು ಸೂಚಿಸಿದರು.
ಮೈಸೂರು ವಿಭಾಗದ ೮ ಜಿಲ್ಲೆಗಳಲ್ಲಿ ೮೮೪೨೪ ಜನರು ಇ.ಕೆವೈಸಿ ಮಾಡಿಸಿರುವುದಿಲ್ಲ. ಇದರ ಬಗ್ಗೆ ಅಧಿಕಾರಿಗಳು ಹೆಚ್ಚು ನಿಗಾ ವಹಿಸಿ ಪೂರ್ಣಗೊಳಿಸಬೇಕು. ವಲಸೆ ಹೋಗಿರುವುದು, ಮರಣ,ವಿವಹವಾಗಿ ಬೇರೆ ಸ್ಥಳಕ್ಕೆ ಸ್ಥಳಾಂತರ ಸೇರಿದಂತೆ ಇನ್ನಿತರೆ ಕಾರಣದಿಂದ ಇಕೆವೈಸಿ ಆಗಿರುವುದಿಲ್ಲ. ಪರಿಶೀಲನೆ ನಡೆಸಿ ಷರಾದಲ್ಲಿ ನಮೂದಿಸಿ ಕೇಂದ್ರ ಕಚೇರಿಗೆ ಕಳುಹಿಸಿಕೊಡಿ ನಂತರ ಪಡಿತರ ಚೀಟಿ ರದ್ದು ಪಡಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಪಡಿತರ ಆಹಾರ ಧಾನ್ಯ ಸಾಗಾಣಿಕೆ ವಾಹನಗಳಿಗೆ ಸಂಬAಧಿಸಿದAತೆ ಮೈಸೂರು ವಿಭಾಗದ ೮ ಜಿಲ್ಲೆಗಳಲ್ಲಿ ೩೭೧ ವಾಹನಗಳಿದ್ದು ಅದರಲ್ಲಿ ೧೭೬ ವಾಹನಗಳಿಗೆ ಮಾತ್ರ ಜಿ.ಪಿ.ಎಸ್ ಅಳವಡಿಸಲಾಗಿದೆ. ೧೯೫ ವಾಹನಗಳಿಗೆ ಜಿ.ಪಿಎಸ್ ಅಳವಡಿಸಬೇಕಿದ್ದು, ೧೫ ದಿನದೊಳಗಾಗಿ ಜಿ.ಪಿ.ಎಸ್ ಅಳವಡಿಸಿ ವರದಿ ನೀಡುವಂತೆ ತಿಳಿಸಿದರು.
ಕಾನೂನು ಮಾಪನ ಶಾಸ್ತç ಇಲಾಖೆಯ ಉಪ ನಿಯಂತ್ರಕರಾದ ಸರಳಾ ನಾಯ್ಡು ಅವರು ಹಾಗೂ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಅವರು ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ವಿವರ ನೀಡಿದರು.
ಸಭೆಯಲ್ಲಿ ಆಹಾರ ಇಲಾಖೆ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತೆ ಪೂರ್ಣಿಮಾ, ನಿರ್ದೇಶಕ ರಾಜಶೇಖರ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.